ವರ್ಜಿನಿಯಾ(ಅಮೆರಿಕ): ಕೆಲ ದೇಶದಲ್ಲಿ ಲಾಟರಿ ವ್ಯವಹಾರ ಇನ್ನು ಚಾಲ್ತಿಯಲ್ಲಿದೆ. ಲಾಟರಿ ಖರೀದಿಸುವುದು ಎಂದರೆ ಹಣವನ್ನು ನೀರಿಗೆ ಸುರಿದ ಹಾಗೆ ಎನ್ನುವವರು ಕೆಲವರು ಇರುತ್ತಾರೆ. ಇಲ್ಲೊಬ್ಬ ವ್ಯಕ್ತಿ ಹೀಗೆಯೇ ಹೇಳಿ ಮೊದಲ ಬಾರಿ ಲಾಟರಿ ಖರೀದಿಸಿದ್ದಾನೆ.
ಹ್ಯಾಂಪ್ಟನ್, ವರ್ಜೀನಿಯಾ ಮೂಲದ ಡ್ಯಾನಿ ಜಾನ್ಸನ್ ಯಾವತ್ತೂ ಲಾಟರಿ ಖರೀದಿಸಿದವರಲ್ಲ. ಲಾಟರಿ ಹಣವನ್ನು ವ್ಯರ್ಥ ಮಾಡುತ್ತದೆ ಎಂದು ನಂಬಿದವರು. ಆದರೆ ಡ್ಯಾನಿಯ ಸ್ನೇಹಿತನೊಬ್ಬ ಲಾಟರಿಯ ಚಟವುಳ್ಳವನು, ಆತ ಡ್ಯಾನಿಗೆ ಸದಾ ಲಾಟರಿ ಖರೀದಿಸಲು ಹೇಳುತ್ತಿದ್ದ. ಬಹು ಸಮಯದ ಬಳಿಕ ಸ್ನೇಹಿತನ ಒತ್ತಾಯದ ಮೇರೆಗೆ ಡ್ಯಾನಿ ಮೊದಲ ಬಾರಿ ಲಾಟರಿ ಖರೀದಿಸಿದ್ದಾರೆ.
ನ.5 ರಂದು ಲಾಟರಿ ಏಜೆನ್ಸಿಯ ವೆಬ್ ಸೈಟ್ ನಿಂದ ಲಾಟರಿ ಖರೀದಿಸಿದ್ದಾರೆ. ಆ ಟಿಕೆಟ್ 5 ವಿನ್ನಿಂಗ್ ನಂಬರ್ ನಲ್ಲಿ 4 ರಲ್ಲಿ ಮ್ಯಾಚ್ ಆಗಿದೆ. ಈ 4 ನಂಬರ್ ಗಳು ಮ್ಯಾಚ್ ಆಗಿರುವುದರಿಂದ ಡ್ಯಾನಿ $50,000 ( 40,83,225.00 ರೂ.) ಗೆದ್ದಿದ್ದಾರೆ. ಆದರೆ ಜಾನ್ಸನ್ ಹೆಚ್ಚು ಹಣ ಪಾವತಿಸಿ ಪವರ್ ಪ್ಲೇ ಆಟವನ್ನು ಆಡಿದ್ದಾರೆ. ಇದರಿಂದ ಅವರು ಲಾಟರಿ ಮೂರು ಪಟ್ಟು ಹೆಚ್ಚು ಹಣ ಗೆದ್ದಿದ್ದಾರೆ. ಡ್ಯಾನಿ ಬರೋಬ್ಬರಿ $150 000 ( ಅಂದಾಜು 1.22 ಕೋಟಿ ರೂ.) ಜಾಕ್ ಪಾಟ್ ಗೆದ್ದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡ್ಯಾನಿ, ನಾನು ಎಷ್ಟು ಹಣವನ್ನು ಗೆದ್ದಿದ್ದೇನೆ ಅನ್ನೋದು ನನಗೆ ತಿಳಿದಿಲ್ಲ. ಏಕೆಂದರೆ ನಾನು ಇದುವರೆಗೆ ಖರೀದಿಸಿದವನಲ್ಲ ಎಂದರು.
Related Articles
ಡ್ಯಾನಿ ನಿವೃತ್ತ ವ್ಯಕ್ತಿಯಾಗಿದ್ದು, ಸದ್ಯ ಅವರು ಹಣವನ್ನು ಖರ್ಚು ಮಾಡುವ ಯಾವ ಯೋಜನೆಯನ್ನು ಹಾಕಿಕೊಂಡಿಲ್ಲ. ಆದರೆ ತನ್ನ ಸ್ನೇಹಿತನಿಗೆ ಉಡುಗೊರೆ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.