Advertisement

Bengaluru, ಅಹಮದಾಬಾದ್‌ನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭ

06:54 PM Jun 22, 2023 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿರುವ ವೇಳೆ ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಅಮೆರಿಕ ಹೊಸ ದೂತಾವಾಸ ಕಚೇರಿಗಳನ್ನು ತೆರೆಯಲಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

Advertisement

ಕಳೆದ ವರ್ಷ ಅಮೆರಿಕವು ಭಾರತೀಯ ವಿದ್ಯಾರ್ಥಿಗಳಿಗೆ ದಾಖಲೆಯ 125,000 ವೀಸಾಗಳನ್ನು ನೀಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಕಳೆದ ವರ್ಷವೊಂದರಲ್ಲೇ ಶೇಕಡಾ 20 ರಷ್ಟು ಹೆಚ್ಚಳದೊಂದಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅತಿದೊಡ್ಡ ವಿದೇಶಿ ವಿದ್ಯಾರ್ಥಿ ಸಮುದಾಯವಾಗಲಿದ್ದಾರೆ ಎಂದು ಹಿರಿಯ ಆಡಳಿತ ಅಧಿಕಾರಿ ತಿಳಿಸಿದ್ದಾರೆ.

ಭಾರತವು 2023 ರಲ್ಲಿ ಸಿಯಾಟಲ್‌ನಲ್ಲಿ ತನ್ನ ದೂತಾವಾಸ ಕಚೇರಿಯನ್ನು ತೆರೆಯುವುದನ್ನು ಸ್ವಾಗತಿಸುತ್ತಿದೆ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಹೊಸ ಕಾನ್ಸುಲೇಟ್ ಅನ್ನು ಘೋಷಿಸಲು ಎದುರು ನೋಡುತ್ತಿದೆ, ”ಎಂದು ಅಧಿಕಾರಿ ಹೇಳಿದರು.

ವಾಷಿಂಗ್ಟನ್‌ನಲ್ಲಿರುವ ರಾಯಭಾರ ಕಚೇರಿಯನ್ನು ಹೊರತುಪಡಿಸಿ ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಚಿಕಾಗೋ, ಹೂಸ್ಟನ್ ಮತ್ತು ಅಟ್ಲಾಂಟಾದಲ್ಲಿ ಭಾರತವು ಐದು ಕಾನ್ಸುಲೇಟ್‌ಗಳನ್ನು ಹೊಂದಿದೆ. ಹೊಸದಿಲ್ಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯು ವಿಶ್ವದ ಅತಿದೊಡ್ಡ ಯುಎಸ್ ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ರಾಯಭಾರ ಕಚೇರಿಯು ಮುಂಬೈ, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್ ಸೇರಿ ನಾಲ್ಕು ದೂತಾವಾಸ ಕಚೇರಿಗಳ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಅದರ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ, ಯುಎಸ್-ಭಾರತದ ಸಂಬಂಧವು ಬಲವಾಗಿದೆ ಎಂದು ಖಚಿತಪಡಿಸುತ್ತದೆ.

ಸಂಸದ ಸೂರ್ಯ ಧನ್ಯವಾದ
ಬೆಂಗಳೂರಿನಲ್ಲಿ ಯುಎಸ್ ದೂತಾವಾಸ ಕಚೇರಿ ತೆರೆಯುವ ಕುರಿತು ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರಿಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.ಸಾವಿರಾರು ಅಂತಾ ರಾಷ್ಟ್ರೀಯ ಕಂಪನಿಗಳೊಂದಿಗೆ ಭಾರತದ ವೇಗವಾಗಿ ಬೆಳೆಯುತ್ತಿರುವ ಮತ್ತು ಐಟಿ ಶಕ್ತಿ ಕೇಂದ್ರವಾಗಿರುವ ನಗರ, ಇದು ದೀರ್ಘ ಕಾಲದಿಂದ ಬಾಕಿಯಿತ್ತು. ಲಕ್ಷಾಂತರ ಕನ್ನಡಿಗರಿಗೆ ಮತ್ತು ನಮ್ಮ ನಗರಕ್ಕೆ ಸಹಾಯವಾಗಲಿದೆ ”ಎಂದು ಟ್ವೀಟ್ ಮಾಡಿದ್ದಾರೆ.

Advertisement

ಮಾರ್ಚ್ ತಿಂಗಳಿನಲ್ಲಿ ನಡೆದ ಬಿಜೆಪಿ ಯುವಮೋರ್ಚಾ ಸಂವಾದ ಕಾರ್ಯಕ್ರಮದಲ್ಲಿ ಸಚಿವ ಜೈ ಶಂಕರ್ ಅವರ ಬಳಿ ಸಂಸದ ಸೂರ್ಯ ಅವರು ದೂತಾವಾಸ ಕಚೇರಿಯ ಅಗ್ಯವಿದೆ ಎಂದು ಮನವಿ ಮಾಡಿದ್ದರು. ಬೆಂಗಳೂರು, ಲಕ್ಷಗಟ್ಟಲೆ ಯುವ ಟೆಕ್ಕಿಗಳೊಂದಿಗೆ ಸಡಗರದಿಂದ ಕೂಡಿದ್ದು ಮತ್ತು ರಾಷ್ಟ್ರದ ಐಟಿ ಆದಾಯದ 40% ರಷ್ಟು ಕೊಡುಗೆ ನೀಡುತ್ತಿದೆ, ಯುಎಸ್ ಕಾನ್ಸುಲೇಟ್ ಅನ್ನು ಹೊಂದಿಲ್ಲ ಎಂದಿದ್ದರು. ಆ ಕುರಿತಾಗಿ ಕರ್ತವ್ಯ ಶೀಲರಾಗುವುದಾಗಿ ಜೈಶಂಕರ್ ಭರವಸೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next