Advertisement

ಅಮೆರಿಕದಲ್ಲಿ 10ಲಕ್ಷ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ: 59 ಸಾವಿರ ಮಂದಿ ಸಾವು

08:11 AM Apr 30, 2020 | Mithun PG |

ವಾಷಿಂಗ್ಟನ್: ಅಮೆರಿಕಾದಲ್ಲಿ ಕೋವಿಡ್ -19 ಪ್ರತಾಪ ನಿಲ್ಲುವ ಲಕ್ಷಣ ಗೋಚರಸುತ್ತಿಲ್ಲವಾಗಿದ್ದು ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಮೃತಪಟ್ಟವರ ಸಂಖ್ಯೆ ಕೂಡ ಸುಮಾರು 59 ಸಾವಿರಕ್ಕೆ ಏರಿಕೆಯಾಗಿದ್ದು, ಸೋಂಕಿತರ ಪ್ರಮಾಣ, ಮತ್ತು ಸಾವಿನ ಪ್ರಮಾಣ ಹೆಚ್ಚಾಗಿರುವ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

Advertisement

ಆದರೇ ಕಳೆದ ಹಲವು ದಿನಗಳಿಗೆ ಹೋಲಿಸಿದರೆ ವೈರಾಣುವಿನ ಪ್ರಭಾವ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದು ಹಲವು ರಾಜ್ಯಗಳು ತಮ್ಮ ಆರ್ಥಿಕತೆಯನ್ನು ಚೇತರಿಸಿಕೊಳ್ಳುವತ್ತ ಗಮನಹರಿಸಿವೆ.

ನಾವು ಬಲಿಪಶುಗಳಾಗಿದ್ದು, ಈಗಾಗಲೇ ಮೃತಪಟ್ಟವರಿಗಾಗಿ ಶೋಕ ವ್ಯಕ್ತಪಡಿಸುತ್ತಿದ್ದೇವೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಅಮೆರಿಕನ್ನರಿಗೆ ಆ ದು:ಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಾವು ಈ ವೈರಸ್ ವಿರುದ್ಧ ಖಂಡಿತಾ ಗೆಲ್ಲುತ್ತೇವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಅಮೆರಿಕಾ 10 ಲಕ್ಷಕ್ಕೂ ಹೆಚ್ಚು ಕೋವಿಡ್ 19 ಪ್ರಕರಣಗಳನ್ನು ಹೊಂದಿರುವ ಮೊದಲ ದೇಶವಾಗಿದೆ. ಇದೀಗ ಒಟ್ಟಾರೆಯಾಗಿ 10,35,765 ಪ್ರಕರಣಗಳಿದ್ದು, 59,266 ಮಂದಿ ಸಾವನ್ನಪ್ಪಿದ್ದಾರೆ.  ಈ ಪೈಕಿ ನ್ಯೂಯಾರ್ಕ್ ನಗರದಲ್ಲೇ ಅತೀ ಹೆಚ್ಚು ಪ್ರಕರಣಗಳಿದ್ದು ನಂತರದ ಸ‍್ಥಾನದಲ್ಲಿ ನ್ಯೂಜೆರ್ಸಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next