Advertisement

ಫೆಡರಲ್‌ ದರ ಜಾಸ್ತಿ: ಭಾರತಕ್ಕೆ ತೊಂದರೆ?

12:22 AM Jul 29, 2022 | Team Udayavani |

ವಾಷಿಂಗ್ಟನ್‌: ಅಮೆರಿಕ ಫೆಡರಲ್‌ ರಿಸರ್ವ್‌, ಅಲ್ಲಿನ ಬ್ಯಾಂಕ್‌ಗಳಿಗೆ ತಾನು ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು 75 ಬೇಸಿಸ್‌ ಅಂಕಗಳಷ್ಟು ಜಾಸ್ತಿ ಮಾಡಿದೆ. ಹಾಗಾಗಿ, ಬ್ಯಾಂಕ್‌ಗಳು ಪಡೆಯುವ ಸಾಲದ ಮೇಲಿನ ಬಡ್ಡಿದರವು ಶೇ. 2.25ರಿಂದ ಶೇ. 2.50ಕ್ಕೆ ಏರಿಕೆಯಾಗಿದೆ.

Advertisement

ತಮ್ಮ ಸಾಲದ ಮೇಲಿನ ಬಡ್ಡಿ ಹೆಚ್ಚಳದ ಹೊರೆಯನ್ನು ಅಲ್ಲಿನ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಮೇಲೆ ಹಾಕುತ್ತವೆ. ಕಳೆದೆರಡು ತಿಂಗಳಲ್ಲಿ ಸತತ 2ನೇ ಬಾರಿ ಹೀಗಾಗಿದೆ.

ಭಾರತಕ್ಕೇನು ಅಪಾಯ?:  ಭಾರತದಲ್ಲಿ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳವಾಗಿದೆ. ಅತ್ತ, ಅಮೆರಿಕದಲ್ಲೂ ಅದೇ ರೀತಿ ಬ್ಯಾಂಕ್‌ ಬಡ್ಡಿದರ ಹೆಚ್ಚಾಗುತ್ತಾ ಹೋದರೆ, ಭಾರತ ಮತ್ತು ಅಮೆರಿಕದ ಬ್ಯಾಂಕ್‌ಗಳ ಬಡ್ಡಿ ದರಗಳಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ ಎಂದೆನಿಸುತ್ತದೆ. ಆಗ ಭಾರತದಲ್ಲಿ ಹೂಡಿಕೆ ಮಾಡಿರುವ ಅಮೆರಿಕದ ಉದ್ಯಮಿಗಳು ತಮ್ಮ ಬಂಡವಾಳವನ್ನು ಹಿಂಪಡೆಯುತ್ತಾರೆ. ಇದರಿಂದ ಡಾಲರ್‌ ವಿರುದ್ಧ ರೂಪಾಯಿ ಮತ್ತಷ್ಟು ದುರ್ಬಲವಾಗಿ, ಭಾರತದಲ್ಲಿ ಹಣದುಬ್ಬರ ಜಾಸ್ತಿಯಾಗುತ್ತದೆ. ಅದರ ಪರಿಣಾಮ, ಅಗತ್ಯ ವಸ್ತುಗಳು, ತೈಲ ಮುಂತಾದವುಗಳ ಬೆಲೆ ಹೆಚ್ಚಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next