ನವದೆಹಲಿ: ಅಮೆರಿಕದ ಈ ನಾಲ್ವರು ಮಹಿಳಾ ರಾಜತಾಂತ್ರಿಕ ಅಧಿಕಾರಿಗಳು ದೆಹಲಿಯಲ್ಲಿ ಆಟೋ ಓಡಿಸುತ್ತಿದ್ದಾರೆ! ಅಚ್ಚರಿಯಾಯಿತೇ? ತಮ್ಮ ಬುಲೆಟ್ ಪ್ರೂಫ್ ಕಾರುಗಳಿಗೆ ಗುಡ್ಬೈ ಹೇಳಿ ಆಟೋ ಖರೀದಿಸಿ, ತಾವೇ ಓಡಿಸುವ ಮೂಲಕ ತಮ್ಮದೇ ಆದ ಹೊಸ ರಾಜತಾಂತ್ರಿಕ ಶೈಲಿಗೆ ನಾಂದಿ ಹಾಡಿದ್ದಾರೆ.
ದೆಹಲಿಗೆ ಬಂದಿಳಿಯುತ್ತಿದ್ದಂತೆಯೇ ಮೂರು ಚಕ್ರಗಳ ಈ ವಾಹನವನ್ನು ನೋಡಿ ಖುಷಿಯಾಯಿತು. ಈ ಸವಾಲನ್ನು ಸ್ವೀಕರಿಸಿಯೇ ಬಿಡೋಣ ಎಂದು, ವಿಶಿಷ್ಟ ಸಾರಿಗೆಯಾದ ಆಟೋ ಖರೀದಿಸಿದೆವು ಎನ್ನುತ್ತಾರೆ ಆ್ಯನ್ ಮ್ಯಾಸನ್, ರುತ್ ಹೋಂಬರ್ಗ್, ಶರೀನ್ ಜೆ.ಕಿಟ್ಟರ್ಮನ್ ಮತ್ತು ಜೆನಿಫರ್. ವಿಶೇಷವೆಂದರೆ, ಈ ಪೈಕಿ ಶರೀನ್ ಅವರು ಕರ್ನಾಟಕದಲ್ಲಿ ಹುಟ್ಟಿ, ನಂತರ ಅಮೆರಿಕಕ್ಕೆ ವಲಸೆ ಹೋದವರು.
ನಾವು ಯಾವತ್ತೂ ಕ್ಲಚ್ ಇರುವ ವಾಹನ ಓಡಿಸಿಯೇ ಇಲ್ಲ. ಆಟೋಮ್ಯಾಟಿಕ್ ಕಾರುಗಳನ್ನು ಬಿಟ್ಟು ಮೋಟಾರ್ಸೈಕಲ್ ಕೂಡ ಓಡಿಸಿಲ್ಲ. ಆದರೆ, ಹೊಸದನ್ನು ಕಲಿಯಬೇಕು ಎಂಬ ಉದ್ದೇಶದಿಂದ ಇಲ್ಲಿ ಆಟೋ ಖರೀದಿಸಿದ್ದೇವೆ ಎಂದೂ ಈ ಅಧಿಕಾರಿಗಳು ಹೇಳಿದ್ದಾರೆ.
Related Articles