Advertisement

ವುಹಾನ್‌ನಿಂದಲೇ ಕೊರೊನಾ ಸೋರಿಕೆ

12:51 AM Mar 02, 2023 | Team Udayavani |

ವಾಷಿಂಗ್ಟನ್‌/ಬೀಜಿಂಗ್‌: ಜಗತ್ತಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ಕೊರೊನಾ ವೈರಸ್‌ನ ಉಗಮ ಚೀನದ ವುಹಾನ್‌ನ ಲ್ಯಾಬ್‌ನಿಂದಲೇ ಹೊರ ಬಿದ್ದಿದೆ ಎಂದು ಅಮೆರಿಕದ ಎಫ್ಬಿಐ ನಿರ್ದೇಶಕ ಕ್ರಿಸ್ಟೋಫ‌ರ್‌ ವಾರೆ ಹೇಳಿದ್ದಾರೆ.

Advertisement

ಸೋಂಕಿನ ಮೂಲ ಹೇಗೆ ಎನ್ನುವ ಬಗ್ಗೆ ಇದೇ ಮೊದಲ ಬಾರಿಗೆ ಎಫ್ಐಬಿ ಕರಾರುವಾಕ್ಕಾಗಿ ತೀರ್ಮಾನ ಪ್ರಕಟಿಸಿದೆ.

ಹಲವು ಮೂಲಗಳನ್ನು ಖಚಿತಪಡಿಸಿದ ಬಳಿಕ ವುಹಾನ್‌ ಲ್ಯಾಬ್‌ನಲ್ಲಿ ಸೃಷ್ಟಿ ಮಾಡಲಾಗಿದ್ದ ವೈರಸ್‌ ಸೋರಿಕೆಯಾಗಿರುವ ಸಾಧ್ಯತೆಗಳು ಇವೆ ಎಂದು ವಾರೆ ಹೇಳಿದ್ದಾರೆ.

ಆದರೆ, ಈ ಹೇಳಿಕೆಯನ್ನು ಚೀನ ಸರಕಾರ ತಿರಸ್ಕರಿಸಿದ್ದು, ಅಮೆರಿಕದ ಗುಪ್ತಚರ ಸಂಸ್ಥೆಯೇ ಅದರಲ್ಲಿ ಭಾಗಿ ಎಂದು ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next