Advertisement
ಡಬ್ಲ್ಯುಎಚ್‌ಒಗೆ ಸೇರ್ಪಡೆ: ಇದೇ ವೇಳೆ, ಶುಕ್ರವಾರ ಮಾತನಾಡಿರುವ ಬೈಡೆನ್, “ವಿಶ್ವ ಆರೋಗ್ಯ ಸಂಸ್ಥೆಗೆ ಮತ್ತೆ ಅಮೆರಿಕ ಸೇರ್ಪಡೆಯಾಗಲಿದೆ’ ಎಂದು ಘೋಷಿಸಿದ್ದಾರೆ. ಜತೆಗೆ, ಚೀನವು ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದೂ ಹೇಳಿದ್ದಾರೆ. ಕೊರೊನಾ ಸೋಂಕಿಗೆ ಸಂಬಂಧಿಸಿ ಡಬ್ಲ್ಯುಎಚ್‌ಒ ಮೇಲೆ ಕಿಡಿಕಾರಿದ್ದ ಟ್ರಂಪ್ ಎಪ್ರಿಲ್‌ನಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವ ಘೋಷಣೆ ಮಾಡಿದ್ದರು.
ಟ್ರಂಪ್ ಕಾನೂನುಪಡೆಯ ಪ್ರಮುಖರಾದ ರುಡಿ ಗಿಯುಲಾನಿ, ಸೋಲಿಗೆ ಕಾರಣಗಳನ್ನು ವಿವರಿಸುತ್ತಿದ್ದರು. ಅದೇ ವೇಳೆ ಅವರ ತಲೆಯ ಎಡ ಮತ್ತು ಬಲಬದಿಯಿಂದ ಕಪ್ಪುದ್ರವ ಇಳಿದು ಗಲ್ಲ ವನ್ನು ಮುಟ್ಟಿತು. ಅದೇನೆಂದು ಯಾರಿಗೂ ಅರ್ಥವಾಗಲಿಲ್ಲ. ಊಹೆಗಳ ಪ್ರಕಾರ ಅದು ಬೆವರಿನ ಪರಿಣಾಮ ತಲೆಗೆ ಹಚ್ಚಿದ್ದ ಬಣ್ಣ ದ್ರವಿ ಸಿದ್ದು. ಇನ್ನೊಂದು ಊಹೆಯ ಪ್ರಕಾರ, ಕಣ್ಣಿಗೆ ಹಾಕಿದ್ದ ಕನ್ನಡಕದ ಕಟ್ಟುಗಳಿಂದ ಇಳಿದಿದ್ದು. ಒಬ್ಬ ಕೇಶವಿನ್ಯಾಸಕನ ಪ್ರಕಾರ, ರುಡಿ ತಲೆಯ ಅಕ್ಕಪಕ್ಕದ ಭಾಗ ಸುಟ್ಟಂತಾಗಿದ್ದನ್ನು ಮರೆ ಮಾಚಲು ಹಚ್ಚಿದ್ದ ಕಾಡಿಗೆ. ವಿಚಿತ್ರವೆಂದರೆ ಸುದ್ದಿಗೋಷ್ಠಿ ಸುದ್ದಿಯಾಗುವುದರ ಬದಲು, ಈ ವಿಷಯ ಬಹಳ ಸುದ್ದಿ ಮಾಡಿತು.