Advertisement

ಕೋವಿಡ್ 19: ಭಾರತಕ್ಕೆ 740 ಕೋಟಿ ರೂ.ಮೌಲ್ಯದ ಪರಿಹಾರ ಸಾಮಗ್ರಿ: ಅಮೆರಿಕ

12:09 PM Apr 29, 2021 | Team Udayavani |

ವಾಷಿಂಗ್ಟನ್: ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಮುಂಬರುವ ದಿನಗಳಲ್ಲಿ 100 ದಶಲಕ್ಷ ಡಾಲರ್(740ಕೋಟಿ) ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗುವುದು ಎಂದು ತಿಳಿಸಿರುವ ಅಮೆರಿಕ, ಈ ಪೈಕಿ ತುರ್ತು ಅಗತ್ಯದ ಉಪಕರಣಗಳನ್ನು ಹೊತ್ತ ಮೊದಲ ವಿಮಾನ ಭಾರತದತ್ತ ಪ್ರಯಾಣ ಬೆಳೆಸಿರುವುದಾಗಿ ತಿಳಿಸಿದೆ.

Advertisement

ಇದನ್ನೂ ಓದಿ:ಕುಡಿದ ಅಮಲಿನಲ್ಲಿ ಗರ್ಭಿಣಿ ಪತ್ನಿ, ಅತ್ತೆ, ಇಬ್ಬರು ಮಕ್ಕಳನ್ನು ಕೊಲೆಗೈದ ಪಾಪಿ!

ವಿಶ್ವದ ಅತೀ ದೊಡ್ಡ ಸೇನಾ ಯುದ್ಧ ವಿಮಾನವು ಬುಧವಾರ(ಏ.28) ರಾತ್ರಿ ಟ್ರಾವಿಸ್ ವಾಯುನೆಲೆಯಿಂದ ಭಾರತದತ್ತ ಹೊರಟಿರುವುದಾಗಿ ಅಮೆರಿಕದ ಏಜೆನ್ಸಿಯಾದ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ ಮಾಹಿತಿ ನೀಡಿದೆ.

ಕ್ಯಾಲಿಫೋರ್ನಿಯಾ ರಾಜ್ಯ ಕೊಡುಗೆಯಾಗಿ ನೀಡಿರುವ 440 ಆಮ್ಲಜನಕ ಸಿಲಿಂಡರ್, ರೆಗ್ಯುಲೇಟರ್ ಸೇರಿದಂತೆ ಇನ್ನಿತರ ಸಾಮಗ್ರಿಗಳು ಭಾರತಕ್ಕೆ ರವಾನೆಯಾಗಿದೆ. ಇದರಲ್ಲಿ 9,60,000 ರಾಪಿಡ್ ಡಯಾಗ್ನೊಸ್ಟಿಕ್ ಟೆಸ್ಟ್ ಕಿಟ್ ಗಳು, 1ಲಕ್ಷ ಎನ್-95 ಮಾಸ್ಕ್ ಗಳು ಸೇರಿರುವುದಾಗಿ ಸಂಸ್ಥೆ ತಿಳಿಸಿದೆ.

ಪ್ರಸ್ತುತ ಭಾರತದಲ್ಲಿ ತಲೆದೋರಿರುವ ಕೋವಿಡ್ 19 ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕದ ರಾಜ್ಯ ಸರಕಾರಗಳು, ಖಾಸಗಿ ಕಂಪನಿಗಳು, ಸರ್ಕಾರಿಯೇತರ ಸಂಸ್ಥೆಗಳು ಹಾಗೂ ದೇಶದ ಸಾವಿರಾರು ಮಂದಿ ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಸಂಬಂಧಿ ಉಪಕರಣ ಹಾಗೂ ತುರ್ತು ವಸ್ತುಗಳ ಸರಬರಾಜು ಮಾಡಲು ಕೈಜೋಡಿಸಿರುವುದಾಗಿ ಶ್ವೇತಭವನ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next