ಬ್ರೇವರಿ ಕ್ರೆಸ್ಟ್ (ಅಮೆರಿಕ): ಅಮೆರಿಕದ ಲಾಸ್ಏಂಜಲೀಸ್ನ ಬ್ರೇವರಿಕ್ರೆಸ್ಟ್ನಲ್ಲಿ ಶನಿವಾರ ಮತ್ತೊಂದು ಶೂಟೌಟ್ ನಡೆದಿದೆ. ಈ ಘಟನೆಯಲ್ಲಿ ಮೂವರು ಅಸುನೀಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಈ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಮನೆಯೊಂದರ ಹೊರಭಾಗದಲ್ಲಿ ನಿಂತಿದ್ದವರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಗಾಯಗೊಂಡವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ ವ್ಯಾಪ್ತಿಯಲ್ಲಿ ಈ ತಿಂಗಳಲ್ಲಿ ನಡೆಯುತ್ತಿರುವ ನಾಲ್ಕನೇ ಗುಂಡು ಹಾರಾಟ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ಪ್ರಕರಣದಲ್ಲಿ 11 ಮಂದಿ ಅಸುನೀಗಿದ್ದರು. 2022ರಲ್ಲಿ 600 ಗುಂಡಿನ ಹಾರಾಟ ಪ್ರಕರಣಗಳು ದೃಢಪಟ್ಟಿದ್ದವು