Advertisement

US aims ಭಾರತೀಯರಿಗೆ 10 ಲಕ್ಷಕ್ಕೂ ಅಧಿಕ ಅಮೆರಿಕದ ವಲಸೆರಹಿತ ವೀಸಾ ವಿತರಣೆ

11:59 PM Sep 28, 2023 | Shreeram Nayak |

ಹೊಸದಿಲ್ಲಿ: ಈ ವರ್ಷದಲ್ಲಿ ಅಮೆರಿಕ ರಾಯಭಾರ ಕಚೇರಿಯು 10 ಲಕ್ಷಕ್ಕೂ ಅಧಿಕ ಭಾರತೀಯರಿಗೆ ವಲಸೆರಹಿತ ವೀಸಾ ವಿತರಿಸಿದೆ. ಭಾರತಕ್ಕೆ ಅಮೆರಿಕ ರಾಯಭಾರಿ ಎರಿಕ್‌ ಗರ್ಸೆಟ್ಟಿ ಅವರು ಸ್ವತಃ ದಂಪತಿಯೊಬ್ಬರಿಗೆ ವೀಸಾ ವಿತರಿಸುವ ಮೂಲಕ 10 ಲಕ್ಷ ವಿತರಣೆ ಗುರಿಯನ್ನು ಸಾಧಿಸಿದರು.

Advertisement

ಅಮೆರಿಕದ ಮಸಾಚ್ಯುಸೆಟ್ಸ್‌ ಇನ್ಸ್‌ ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ 2024 ರ ಮೇಯಲ್ಲಿ ನಡೆಯುವ ಪುತ್ರನ ಪದವಿ ಪ್ರಮಾಣ ಸಂದರ್ಭದಲ್ಲಿ ಹಾಜರಾಗಲು ಈ ದಂಪತಿ ತೆರಳುತ್ತಿದ್ದಾರೆ. ಡಾ| ರಂಜು ಸಿಂಗ್‌ ಅಮೆರಿಕದ ವಲಸೆರಹಿತ ವೀಸಾ ಪಡೆದ ಹತ್ತು ಲಕ್ಷನೆಯವರಾಗಿದ್ದು, ಇವರ ಪತಿ ಪುನೀತ್‌ ದರ್ಗಾನ್‌ ಇವರ ಅನಂತರ ವಲಸೆರಹಿತ ವೀಸಾ ಪಡೆದವರಾಗಿದ್ದಾರೆ.

ಪ್ರಸ್ತುತ ವಿಶ್ವದಲ್ಲೇ ಅಮೆರಿಕದ ವಲಸೆರಹಿತ ವೀಸಾ ಪಡೆದವರ ಪೈಕಿ ಶೇ.10ರಷ್ಟು ಮಂದಿ ಭಾರತೀಯರಾಗಿದ್ದಾರೆ. ಅಲ್ಲದೇ ವೀಸಾ ವಿತರಣೆ ಪೈಕಿ ಶೇ.20ರಷ್ಟು ವಿದ್ಯಾರ್ಥಿ ವೀಸಾ ಹಾಗೂ ಶೇ.65ರಷ್ಟು ಉದ್ಯೋಗ ವೀಸಾ ಆಗಿದೆ.

ಈ ಕುರಿತು ಸಂತಸ ಹಂಚಿಕೊಂಡಿರುವ ಎರಿಕ್‌ ಗರ್ಸೆಟ್ಟಿ, “ಇದು ಭಾರತಕ್ಕೆ, ಭಾರತೀಯರಿಗೆ ಮತ್ತು ಅಮೆರಿಕಕ್ಕೆ ಸಂತಸದ ವಿಷಯ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ವೀಸಾಗಳನ್ನು ಶೀಘ್ರ ವಿತರಿಸುವಂತೆ ಹೇಳಿದ್ದರು. ಕಠಿನ ಮತ್ತು ಚುರುಕಾದ ಕ್ರಮದಿಂದ ಈ ವರ್ಷದಲ್ಲಿ ನಾವು ಈಗಾಗಲೇ 1 ಲಕ್ಷ ವಲಸೆರಹಿತ ವೀಸಾ ವಿತರಣೆ ಗುರಿ ಮೀರಿ ಮುನ್ನುಗುತ್ತಿದ್ದೇವೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next