ವಾಷಿಂಗ್ಟನ್: ಅಮೆರಿಕದಲ್ಲಿ ಗುಂಡಿನ ದಾಳಿಗಳ ಕೃತ್ಯ ಮುಂದುವರೆದಿದೆ. ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದು ಮೂವರು ಮಕ್ಕಳು, ಮೂವರು ವಯಸ್ಕರು ಸೇರಿದಂತೆ 6 ಮಂದಿ ಮೃತಪಟ್ಟಿರುವ ಘಟನೆ ಸೋಮವಾರ (ಮಾ.27 ರಂದು) ನಡೆದಿರುವುದು ವರದಿಯಾಗಿದೆ.
ಶಾಲಾ ಸಿಬ್ಬಂದಿಗಳಾದ ಸಿಂಥಿಯಾ ಪೀಕ್ (61), ಕ್ಯಾಥರೀನ್ ಕೂನ್ಸ್ (60) ಮೈಕ್ ಹಿಲ್ (61) ಮೃತರು. ಇದರೊಂದಿಗೆ 9 ವರ್ಷದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೊದಲು ಗುಂಡಿನ ದಾಳಿಯಿಂದ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಗಂಭೀರ ಗಾಯಗೊಂಡ ಕಾರಣ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಅಮೆರಿಕದ ನ್ಯಾಶ್ವಿಲ್ಲೆಯ ಖಾಸಗಿ ಕ್ರಿಶ್ಚಿಯನ್ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ಪಿಸ್ತೂಲ್ ಹಾಗೂ ರೈಫಲ್ ನಿಂದ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಬ್ರಿಡ್ಜ್ ಗೆ ಢಿಕ್ಕಿ ಹೊಡೆದು ಬಸ್ ಪಲ್ಟಿ: 20 ಉಮ್ರಾ ಯಾತ್ರಾರ್ಥಿಗಳು ಮೃತ್ಯು
Related Articles
ಕಾನ್ವೆಂಟ್ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಶಾಲೆಯ ಎರಡನೇ ಮಹಡಿಯಲ್ಲಿ ಮಹಿಳೆಯೊಬ್ಬರು ಗುಂಡಿನ ದಾಳಿ ನಡೆಸಿದ್ದಾರೆ. ನಮಗೆ ಈ ಬಗ್ಗೆ 10:13 ರ ಹೊತ್ತಿಗೆ ಕರೆ ಬಂದಿದೆ. ದಾಳಿಕೋರ ಮಹಿಳೆ ಗುಂಡಿನ ದಾಳಿ ನಡೆಸಿ ಮೂವರು ಮಕ್ಕಳು ಹಾಗೂ ವಯಸ್ಕರು ಸೇರಿ ಒಟ್ಟು 6 ಮಂದಿಯನ್ನು ಹತ್ಯೆಗೈದಿದ್ದಾರೆ. ಪೊಲೀಸರು ಮಹಿಳೆಯತ್ತ ಗುಂಡಿನ ದಾಳಿ ನಡೆಸಿ ಆಕೆಯನ್ನು ಶೂಟ್ ಮಾಡಿದ್ದಾರೆ. ಆಕೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಾಳಿಕೋರ ಮಹಿಳೆಯನ್ನು ಶಾಲೆಯ ಮಾಜಿ ವಿದ್ಯಾರ್ಥಿನಿ 28 ವರ್ಷದ ಆಡ್ರೆ ಹೇಲ್ ಎಂದು ಗುರುತಿಸಲಾಗಿದೆ. ಈಕೆ ಮಂಗಳಮುಖಿಯಾಗಿದ್ದಳು. ಶಾಲೆಗೆ ಒಳಗೆ ಹೇಗೆ ಹೋಗುವುದು ಎನ್ನುವುದರ ಬಗ್ಗೆ ನಕ್ಷೆಯನ್ನು ತಯಾರಿಸಿಕೊಂಡು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
2001 ರಲ್ಲಿ ಶುರುವಾದ ಶಾಲೆಯಲ್ಲಿ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅಮೆರಿಕಾದದಲ್ಲಿ ಗುಂಡಿನ ದಾಳಿಯ ಪ್ರಕರಣಗಳು ಸಾಮಾನ್ಯವಾಗಿದೆ. ಈ ಹಿಂದೆ ಟೆಕ್ಸಾಸ್ ನ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದು ಹಲವು ವಿದ್ಯಾರ್ಥಿಗಳು ಮೃತಪಟ್ಟಿದ್ದರು.