Advertisement

ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಉರುಸ್ ಪೂರ್ಣ

02:07 PM Feb 18, 2023 | Team Udayavani |

ಕಲಬುರಗಿ: ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ 14 ಮಂದಿ ಮುಸ್ಲಿಂ ಮುಖಂಡರು ಸಂದಲ್ (ಉರುಸ್) ನೆರವೇರಿಸಿದರು.

Advertisement

15 ಜನರಿಗೆ ಉರುಸ್ ಗೆ ತೆರಳಲು ಅವಕಾಶ ಇದ್ದರೂ 14 ಜನ ಮಾತ್ರ ತೆರಳಿ ಸಂದಲ್ ನೆರವೇರಿಸಿದರು. ಬೆಳಿಗ್ಗೆ 8 ಕ್ಕೆ ಆರು ಜನ, 9 ಗಂಟೆಗೆ ಆರು ಜನ ಹಾಗೂ 9.50 ಕ್ಕೆ ಇಬ್ಬರು ಜನ ದರ್ಗಾದ ಒಳಗಡೆ ಪ್ರವೇಶಿಸಿದರು.

ಸ್ವಯಂ ಪ್ರೇರಣೆಯಿಂದ 14 ಜನ ಮುಸ್ಲಿಂ ಮುಖಂಡರಿಂದ ಸಾಂಪ್ರದಾಯಿಕವಾಗಿ ಉರುಸ್ ಆಚರಿಸಲಾಯಿತು. ಸಂದಲ್ ನೆರವೇರಿಸಿ ಹೊರ ಬಂದ ನಂತರ ಮಾತನಾಡಿದ ಹಜರತ್ ಲಾಡ್ಲೆ ಮಶಾಖ್ ದರ್ಗಾ ಕಮಿಟಿ ಅಧ್ಯಕ್ಷ ಮೊಯಿಝ್ ಅನ್ಸಾರಿ ಕಾರಬಾರಿ ಹಾಗೂ ಮೊಹಮ್ಮದ ಸಾದತ್ ಅನ್ಸಾರಿ, 660 ವರ್ಷಗಳಿಂದ ಉರುಸ್ ಆಚರಿಸುತ್ತಾ ಬರಲಾಗುತ್ತಿದೆ. ಎಲ್ಲರೂ ದರ್ಗಾ ಬಂದು ಹೋಗುತ್ತಾರೆ.  ಆದರೆ ಕಳೆದ ವರ್ಷದಿಂದ ಪೊಲೀಸರು ಬರುವಂತಾಗಿದೆ. ಇದೆಲ್ಲ ಚುನಾವಣೆ ಸಲುವಾಗಿ ಮಾಡಲಾಗುತ್ತಿದೆ. ಒಟ್ಟಾರೆ ಹಿಂದು- ಮುಸ್ಲಿಂ ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದರು.

ಸಂದಲ್ ನೆರವೇರಿಸಿದವರು: ಹಜರತ್ ಲಾಡ್ಲೆ ಮಶಾಖ್ ದರ್ಗಾ ಮ್ಯಾನೇಜಿಂಗ್ ಕಮಿಟಿಯ ಅಧ್ಯಕ್ಷ ಮೊಯಿಝ್ ಅನ್ಸಾರಿ ಕಾರಬಾರಿ, ಪ್ರಮುಖರಾದ ಆಸೀಫ್ ಅನ್ಸಾರಿ ಕಾರಬಾರಿ, ನೂರೂದ್ದೀನ್ ನಿಯಾಝುದ್ದೀನ್ ಅನ್ಸಾರಿ, ರಿಝ್ವಾನ್ ವಾಹಾಬ್ ಅನ್ಸಾರಿ, ಮೊಹಮ್ಮದ ಸಾದತ್ ಅನ್ಸಾರಿ, ಫರ್ವೆಜ್ ಅನ್ಸಾರಿ, ಸಬೀರ ಅನ್ಸಾರಿ, ಐದ್ರೀಸ್ ಅನ್ಸಾರಿ, ಮುಸಾ ಅನ್ಸಾರಿ, ಸಾದೀಖ್ ಅನ್ಸಾರಿ, ಶಖೀಲ್ ಫರಾಶ್, ಗನಿ ಫರಾಶ್, ಮಿನಾಜ್ ಫರಾಶ್, ಐದ್ರೀಶ್ ಅನ್ಸಾರಿ ಸಂದಲ್ ನೆರವೇರಿಸಿದರು.

ಹೊರವಲಯದಲ್ಲಿ ಪೂಜೆ: ದರ್ಗಾದಲ್ಲಿ 15 ಜನರಿಗೆ ಮಾತ್ರ ದರ್ಗಾದಲ್ಲಿನ ಶಿವಲಿಂಗ ಪೂಜೆಗೂ ಅವಕಾಶ ನೀಡಿದ್ದರಿಂದ ಜತೆಗೆ ಆಳಂದ ಪಟ್ಟಣದಲ್ಲಿ 144 ಕಲಂ ಜಾರಿ ಮಾಡಿದ್ದರಿಂದ ಆಳಂದ ಪಟ್ಟಣದ ಹೊರವಲಯ ಪ್ರಗತಿ ಮೈದಾನದಲ್ಲಿ ಹಿಂದೂ ಮುಖಂಡರು ಹಲವು ಪೂಜೆಗಳನ್ನು ನೆರವೇರಿಸಿದರು.

Advertisement

ಇದನ್ನೂ ಓದಿ:ಸಸ್ಯಹಾರಿ ಹೊಟೇಲ್‌ನಲ್ಲಿ ಚಿಕನ್‌ ಕೇಳಿ,ಸಿಬ್ಬಂದಿ ಮೇಲೆ ಹಲ್ಲೆಗೈದ ಪೊಲೀಸರು: ವಿಡಿಯೋ ವೈರಲ್

ಗಣಪತಿ ಪೂಜೆ, ಗಂಗಾ ಪೂಜೆ, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆದವು.‌ ಕಡಗಂಚಿ ಶ್ರೀಗಳು ಮತ್ತು ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಹಲವು ಪೂಜಾ ಕೈಂಕರ್ಯಗಳು ನೆರವೇರಿದವು.‌ ಪೂಜೆ ಮುಗಿಸಿಕೊಂಡು ಲಾಡ್ಲೇ ಮಶಾಕ್ ದರ್ಗಾಕ್ಕೆ 15 ಜನರ ಹಿಂದೂಗಳ ತಂಡ ತೆರಳಿತು.‌ ಪೂಜೆ ನಡೆಯುವ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಪೂಜೆಗೆ ಶಿವಮಾಲಾಧಾರಿಗಳ ಆಗಮನವಾಗಿದ್ದು, ಬಿಲ್ವಪತ್ರಿಗಳೊಂದಿಗೆ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ನಡೆಸಾಲುಗುತ್ತಿದೆ. ಹೈಕೋರ್ಟ್ ನ ಆದೇಶ ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದರು.

ಜನರ ಪರದಾಟ: ಆಳಂದ ಪಟ್ಟಣದಲ್ಲಿ 144 ಸೆಕ್ಷೆನ್ ಅನ್ವಯ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಶಿವರಾತ್ರಿ ಹಬ್ಬದಂದು ಜನರು ಪರದಾಡಿದರು. ಇಡೀ ಆಳಂದ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಪೊಲೀಸರೇ ಕಾಣುತ್ತಿದ್ದಾರೆ. ಬಸ್, ಆಟೋ ಸೇರಿ ಎಲ್ಲಾ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಸೊಲ್ಲಾಪೂರ, ಕಲಬುರಗಿಗೆ ತೆರಳಲು ಆಳಂದ ಬಸ್ ನಿಲ್ದಾಣಕ್ಕೆ ಬಂದ ಜನರ ಪರದಾಟ ಕಂಡು ಬಂತು.ಆಸ್ಪತ್ರೆ ಸೇರಿ ಬೇರೆ ಬೇರೆ ಕೆಲಸಕ್ಕಾಗಿ ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದವರು ಪರದಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next