Advertisement

ವಿಶೇಷ ಕೌಂಟರ್‌ ಆರಂಭಿಸಲು ಒತ್ತಾಯ

04:57 PM Dec 12, 2020 | Suhan S |

ಮುಳಬಾಗಿಲು: ಬ್ಯಾಂಕ್‌ನಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಗ್ರಾಹಕ ಞರಿಗೆ ಆಗುತ್ತಿರುವ ತೊಂದರೆ ಗಳನ್ನು ತಪ್ಪಿಸಲು ವಿಶೇಷ ಕೌಂಟರ್‌ ತೆರೆದು ಬ್ಯಾಂಕ್‌ನಲ್ಲಿ ಮೂಲ ಸೌಕರ್ಯ ಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದ ಎಸ್‌ಬಿಐ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿ ಸಹಾಯಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಮುಂದಾಲೋಚನೆಯಿಲ್ಲದೆ ಬ್ಯಾಂಕ್‌ ಗಳನ್ನು ವಿಲೀನ ಮಾಡಿ ಆಗುವ ತೊಂದರೆಗಳ ಬಗ್ಗೆ ಯೋಚನೆ ಮಾಡದ ಸರ್ಕಾರದ ದ್ವಂದ್ವ ನೀತಿಗೆ ಗ್ರಾಹಕರು ಪರದಾಡ ಬೇಕಾದ ಪರಿಸ್ಥಿತಿಗೆ ನಗರದ ಎಸ್‌.ಬಿ.ಐ ಬ್ಯಾಂಕ್‌ ಉದಾಹರಣೆಯಾಗಿದೆ. ಗ್ರಾಹಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗಲುಪ್ರತ್ಯೇಕ ಕೌಂಟರ್‌ ತೆರೆಯಬೇಕೆಂದುಒತ್ತಾಯಿಸಿ ಪ್ರತಿಭಟನೆ ನಡೆಸಿ ಬ್ಯಾಂಕ್‌ಸಹಾಯಕ ವ್ಯವಸ್ಥಾಪಕಿ ಲೀಲಾ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸಿಬ್ಬಂದಿಹಾಗೂ ಸೌಕರ್ಯಗಳ ಕೊರತೆ ಬ್ಯಾಂಕಿನಲ್ಲಿದೆ.ಪ್ರತ್ಯೇಕಕೌಂಟರ್ ‌ತೆರೆಯುವ ಜೊತೆಗೆ ಸೌಕರ್ಯ ಒದಗಿಸುವ ಭರವಸೆ ನೀಡಿದರು.ತಾಲೂಕು ಅಧ್ಯಕ್ಷ ಫಾರೂಕ್‌ಪಾಷ, ವಿಜಯ್‌ಪಾಲ್‌, ಸುಪ್ರೀಂಚಲ, ಸಾಗರ್‌, ಮೇಲಾಗಾಣಿ ದೇವರಾಜ್‌, ಅಣ್ಣಿಹಳ್ಳಿ ನಾಗರಾಜ್‌, ಐತಾಂಡಹಳ್ಳಿ ಮಂಜುನಾಥ್‌, ರವಿ, ಶಿವ, ಸುನಿಲ್‌,ವಿನೋದ್‌, ವಿಶ್ವ, ವೇಣು, ನವೀನ್‌ , ಕೇಶವ, ಮೂರ್ತಿ, ಹೆಬ್ಬಣಿ ಆನಂದರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

332 ನಾಮಪತ್ರ ಸಲ್ಲಿಕೆ :

ಮುಳಬಾಗಿಲು: ತಾಲೂಕಿನ 30 ಗ್ರಾಪಂಗಳಿಗೆ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಶುಕ್ರವಾರ 282 ಕ್ಷೇತ್ರಗಳ 518 ಸ್ಥಾನಗಳಿಗೆ332 ನಾಮಪತ್ರ ಸಲ್ಲಿಕೆಯಾಗಿವೆ.

Advertisement

ನಾಮಪತ್ರ ಸಲ್ಲಿಸಿರುವುದರ ಪೈಕಿ ಪುರುಷ ಮತ್ತು ಮಹಿಳೆಯರು ಸೇರಿದಂತೆ94 ಪ.ಜಾತಿ,21 ಪ.ಪಂಗಡ,37 ಹಿಂದುಳಿದ ಅ ವರ್ಗ, 7 ಹಿಂದುಳಿದ ಬ ವರ್ಗ, ಸಾಮಾನ್ಯ ವರ್ಗದ 173 ನಾಮಪತ್ರಗಳು ಸೇರಿದಂತೆ ಒಟ್ಟು 185 ಪುರುಷರು ಮತ್ತು147 ಮಹಿಳೆಯರು ಒಳಗೊಂಡಂತೆ 332 ಸಲ್ಲಿಕೆಯಾಗಿದೆ. ಉಳಿದಂತೆ 323 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿರುವುದಿಲ್ಲ, ನಾಮಪತ್ರ ಸಲ್ಲಿಸಲು ಡಿ.16 ಕೊನೆಯ ದಿನವಾಗಿರುತ್ತದೆ. ಪರಿಶೀಲನೆ 17, ಹಿಂಪಡೆಯಲು 19, 27 ರಂದು ಮುಂಜಾನೆ7ರಿಂದ ಸಂಜೆ5 ಗಂಟೆ ವರೆಗೆ ಮತದಾನ ನಡೆಯಲಿದೆ.30 ರಂದು ಮತ ಎಣಿಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next