Advertisement

ನಿವೇಶನ ನೀಡುವಂತೆ ಒತ್ತಾಯ

01:47 PM Oct 03, 2020 | Suhan S |

ಮಂಡ್ಯ: ನಿವೇಶನರ ಹಿತರಿಗೆ ಸರ್ಕಾರಿ ಭೂಮಿ ನೀಡಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸತಾಯಿಸುತ್ತಿರುವುದನ್ನು ಖಂಡಿಸಿ, ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಹಾಗೂ ಬೂದನೂರು ಗ್ರಾಪಂ ವ್ಯಾಪ್ತಿ ನಿವೇಶನ ರಹಿತರು ಪ್ರತಿಭಟನಡೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ತಾಲೂಕಿನ ಬೂದನೂರು ಗ್ರಾಪಂ ವ್ಯಾಪ್ತಿ ಯಲ್ಲಿ 170 ಕ್ಕೂಹೆಚ್ಚು ಬಡ ನಿವೇಶನ ರಹಿತ ಕುಟುಂಬಸ್ಥರಿಗೆ ಸರ್ಕಾರಿ ಭೂಮಿ ಗುರುತಿಸಿ ನೀಡುವಂತೆ ಒತ್ತಾಯಿಸಿ, 4 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಜಿಲ್ಲಾಡಳಿತ, ತಾಲೂಕು ಆಡಳಿತ ಯಾವುದೇಕ್ರಮಕೈಗೊಂಡಿಲ್ಲ ಎಂದುಕಿಡಿಕಾರಿದರು.

ವಾರದೊಳಗೆ ಬೂದನೂರು ಗ್ರಾಪಂ ವ್ಯಾಪ್ತಿಯಲ್ಲಿ ಗುರುತಿಸಿರುವ ಸರ್ಕಾರಿ ಭೂಮಿಯ ಅಳತೆ, ಹದ್ದುಬಸ್ತ್ ಮಾಡಿಕೊಡಬೇಕು. ಸುಳ್ಳು ವರದಿ ಮಾಡಿ ತಾಲ್ಲೂಕು ಆಡಳಿತದ ದಿಕ್ಕು ತಪ್ಪಿಸುತ್ತಿರುವ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗರ ವಿರುದ್ಧ ಕ್ರಮಕೈಗೊಂಡು ಅಮಾನತು ಮಾಡಬೇಕು. ಗುರುತಿಸಿರುವ ಸರ್ಕಾರಿ ಭೂಮಿ2 ಎಕರೆ ಅಲ್ಲದೆ ಒಟ್ಟು ಇರುವ6.20 ಎಕರೆ ಭೂಮಿಯನ್ನು ನಿವೇಶನರಹಿತರಿಗೆ ಮೀಸಲಿಡ ಬೇಕು. ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಗ್ರಾಪಂ ಚುನಾವಣೆಯಲ್ಲಿ ನಿವೇಶನರಹಿತರ ಕುಟುಂಬ ಗಳು ಮತದಾನ ಬಹಿಷ್ಕಾರ ಮಾಡುವ ನಿರ್ಣಯ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ,ಕರುನಾಡ ಸೇವಕರು ಸಂಘಟನೆಯ ಗೌರವಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ವಕೀಲ ಜೆ.ರಾಮಯ್ಯ, ಮಾದೇವಿ, ರಾಧಿಕಾ, ವೆಂಕಟೇಶ್‌, ನಾಗ ರತ್ನ, ಮಂಗಳ, ಸರೋಜಮ್ಮ, ಶಾಂತಮ್ಮ, ರಾಜೇ ಶ್ವರಿ, ನಾಗಮ್ಮ, ಕವಿತ, ರೂಪ, ಸುಧಾ, ರಾಧ, ಸವಿತ, ಲಕ್ಷ್ಮಮ್ಮ, ಯಲ್ಲಮ್ಮ, ಕಾಮಾಕ್ಷಿ, ಶಾಂತಿ, ನೀಲಾ, ಲಕ್ಷ್ಮೀ, ಅಂಜಲಿ, ಮಂಜುಳ,ಕಾಳಮ್ಮ, ರಾಣಿಯಮ್ಮ ಹಾಜರಿದ್ದರು.

ಸಮಾನ ವೇತನ , ಸೇವಾಭದ್ರತೆಗಾಗಿ ಮನವಿ :

Advertisement

ಮಂಡ್ಯ: ಸಮಾನಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆ ನೀಡಿ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ,ಕರ್ನಾಟಕ ರಾಜ್ಯ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಹಾಗೂ ಕಾರ್ಯಕರ್ತರು ನಡೆಸುತ್ತಿರುವ ಮುಷ್ಕರ9ನೇ ದಿನವೂ ಮುಂದುವರಿದಿದ್ದು, ಶುಕ್ರವಾರ ಗಾಂಧಿಜಯಂತಿ ಹಿನ್ನೆಲೆಯಲ್ಲಿ ಗಾಂಧಿಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಾಸಕ ಎಂ.ಶ್ರೀನಿವಾಸ್‌ಗೆಮನವಿ ಸಲ್ಲಿಸಿದರು.

ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು ನೀಡಿ ಕಾಯಂಗೊಳಿಸಬೇಕು. ಎಲ್ಲ ಹುದ್ದೆಗಳನ್ನುಕಾಯಂ ಹುದ್ದೆಗಳಾಗಿ ಸೃಷ್ಟಿಸಬೇಕು. ಏಪ್ರಿಲ್‌1 ದಿನದ ವಿರಾಮವನ್ನು ರದ್ದುಪಡಿಸಿ ಆದೇಶ ನೀಡಬೇಕು. ಎಲ್ಲ ಹುದ್ದೆಗಳಿಗೆ ವೇತನ ಭತ್ಯೆಗಳು ಮತ್ತು ವೇತನ ಶ್ರೇಣಿ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವೈದ್ಯಕೀಯ ಶಿಕ್ಷಣ ಇಲಾಖೆ ಜಾರಿ ಮಾಡಿರುವ ಏಕರೂಪ ವೇತನದ ಮಾದರಿಯಲ್ಲಿ ಎಲ್ಲ ನೌಕರರಿಗೂ ಜಾರಿ ಮಾಡಲುಕ್ರಮ ವಹಿಸಬೇಕು. ಎಲ್ಲ ನೌಕರರಿಗೂ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿ ಮಾಡಬೇಕು. ಒಳಗುತ್ತಿಗೆಯಲ್ಲಿಕೆಲಸ ಮಾಡುವವರಿಗೆ ಸಿಗುವ ಸೌಲಭ್ಯ ಹೊರಗುತ್ತಿಗೆ ನೌಕರರಿಗೂ ಸಿಗಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾದೇಗೌಡ, ಉಮೇಶ್‌, ಡಿ ಗ್ರೂಪ್‌ ನೌಕರರ ಸಂಘದ ಉಪಾಧ್ಯಕ್ಷೆ ಚಂದ್ರಕಲಾ, ಮಹೇಶ್‌, ತಾಳಶಾಸನ ಮೋಹನ್‌, ಮಹದೇವು, ಶಿವಣ್ಣ,ಕೇಶವ, ದಿವಾಕರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next