Advertisement

ಕೋವಿಡ್ ಪ್ಯಾಕೇಜ್‌ಗೆ ಆಗ್ರಹಿಸಿ ನಿರಶನ

06:20 PM Nov 01, 2020 | Suhan S |

ಕಲಬುರಗಿ: ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿ ಛಾಯಾಗ್ರಾಹಕರಿಗೆ ಕೆಲಸವಿಲ್ಲದೆ ಪರದಾಡುವಂತೆ ಆಗಿದ್ದು, ತಕ್ಷಣವೇ ಪರಿಹಾರ ಪ್ಯಾಕೇಜ್‌ ಘೋಷಿಸಬೇಕೆಂದು ಆಗ್ರಹಿಸಿ ಜಿಲ್ಲಾ ಫೋಟೊಗ್ರಾಫರ್ ಸಂಘದಿಂದ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

Advertisement

ನಗರದಲ್ಲಿರುವ ಎಲ್ಲ ಫೋಟೋ ಸ್ಟುಡಿಯೋಗಳನ್ನು ಬಂದ್‌ ಮಾಡಿ ಮೆರವಣಿಗೆ ಆಗಮಿಸಿದ ಫೋಟೋಗ್ರಾಫರ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾವಣೆಗೊಂಡು ತಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಕಳೆದ ಎಂಟು ತಿಂಗಳಿಂದಲೂ ಕೆಲಸವಿಲ್ಲದೆ ಫೋಟೋಗ್ರಾಫರ್‌ಗಳ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರದಿಂದ ಯಾವುದೇ ಸಹಕಾರ ಸಿಕ್ಕಿಲ್ಲ. ಮದುವೆ ಸೇರಿ ಶುಭ ಸಮಾರಂಭಗಳು ಸ್ಥಗಿತವಾಗಿದ್ದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಫೋಟೋ ತೆಗೆದು ಜೀವನ ಸಾಗಿಸುತ್ತಿರುವ ನಮಗೆ ಸರ್ಕಾರ ಸಹಾಯ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್‌, ಉಸ್ಮಾನ ಜಮಾಲುದ್ದಿನ್‌, ಕಾರ್ಯದರ್ಶಿ ಬಸವರಾಜ ತೋಟದ, ಶರಣಬಸಪ್ಪ ಕಣ್ಣಿ, ರಾಜಶೇಖರ ಹತ್ತೂರೆ, ಗುಂಡೇರಾವ ಭೂಸನೂರ, ರಾಜೇಂದ್ರ ಸ್ವಾಮಿ, ವಿಜಯಕುಮಾರ ಪುರಾಣಿಕಮಠ, ಬಸವರಾಜ ಬಿರಾದಾರ, ರಮೇಶ, ಶೇಖ್‌ ರಿಯಾಜುದ್ದಿನ್‌, ಮಹೇಶ ಮೇಲಿಕೇರಿ, ಮಂಜುನಾಥ ಜಂಬಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಾಡಿಯಲ್ಲೂ ಛಾಯಾಗ್ರಾಹಕರು ಅಂಗಡಿ ಬಂದ್‌ ಮಾಡಿ ಪ್ರತಿಭಟನೆ :

Advertisement

ವಾಡಿ: ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಫೋಟೋಗ್ರಾಫರ್‌ಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯಮಟ್ಟದ ಸ್ಟೂಡಿಯೋ ಬಂದ್‌ ಕರೆಯನ್ನು ಬೆಂಬಲಿಸಿ ಪ್ರತಿಭಟನೆಗಿಳಿದ ಸ್ಥಳೀಯ ಛಾಯಾಚಿತ್ರಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳು, ರಾಜ್ಯ ಮತ್ತು ಕೇಂದ್ರ ಸರಕಾರಗಳು ನಮ್ಮ ಕಷ್ಟ ಅರಿತು ಪರಿಹಾರ ಘೋಷಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

ಕೋವಿಡ್‌-19 ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು. ಆರೋಗ್ಯ ಮತ್ತು ಜೀವ ವಿಮೆ, ಜಿಪಂ ಹಾಗೂ ಗ್ರಾಪಂ ಯೋಜನೆಗಳ ಛಾಯಾಗ್ರಹಣದ ಹಕ್ಕು ನೀಡಬೇಕು. ಚುನಾವಣೆಯ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು. ಜೀವನ ಭದ್ರತೆ ಒದಗಿಸಬೇಕು. ವೆಬ್‌ ಕ್ಯಾಮೆರಾ ತೊಗಲಗಬೇಕು. ಪ್ರತಿಭಾವಂತ ಛಾಯಾಚಿತ್ರಕಾರರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. ಎಂದು ಸರಕಾರವನ್ನು ಆಗ್ರಹಿಸಿದರು.

´ಫೋಟೊಗ್ರಾಫರ್‌ ಮತ್ತು ವಿಡಿಯೋಗ್ರಾಫರ್‌ ಅಸೋಷಿಯೇಷನ್‌ನ ನಗರ ಸಮಿತಿ ಅಧ್ಯಕ್ಷ ಶರಣಪ್ಪ ಹಡಪದ ಕುಂದನೂರ, ಉಪಾಧ್ಯಕ್ಷ ಭೀಮಣ್ಣ ಹವಾಲ್ದಾರ, ಕಾರ್ಯದರ್ಶಿ ಸಿದ್ರಾಮ ಕರದಳ್ಳಿ, ಸಹ ಕಾರ್ಯದರ್ಶಿ ಭೀಮರಾಯ ಭಂಡಾರಿ, ವಿಲಿಯಂ ಪ್ರಕಾಶ, ಸಂಜಯ ಚವ್ಹಾಣ, ಮಲ್ಲಿಕಾರ್ಜುನ ನಾಟೀಕಾರ, ವಿನಾಯಕ ಖೈರೆ, ಭೀಮರಾಯ ನರಿಬೋಳಿ, ಜಾರ್ಜ್‌ ಪ್ರಕಾಶ, ತೋಟೇಂದ್ರ ಸ್ವಾಮಿ, ಬಸವರಾಜ ಕರದಳ್ಳಿ, ಮೋಹನ ಮಾಲಗತ್ತಿ, ಶಣ್ಮುಖ ಕಟ್ಟಿಮನಿ, ರಾಜು ಗುತ್ತೇದಾರ, ಯಲ್ಲಣ್ಣ ಕಟ್ಟಿಮನಿ, ಸೋಮಶೇಖರ ಸೂಲಹಳ್ಳಿ, ಅಣವೀರಯ್ಯ ಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next