ಬೆಂಗಳೂರು: “ಶಿಕ್ಷಕ ಮಿತ್ರ’ ತಂತ್ರಾಂಶದಲ್ಲಿ ಸಲ್ಲಿಕೆಯಾಗುವ ಪ್ರಸ್ತಾವನೆಗಳನ್ನು ಕಾಲಮಿತಿ ಯೊಳಗೆ ಇತ್ಯರ್ಥಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಇಲಾಖೆ ವ್ಯಾಪ್ತಿಯ ಬೋಧಕ ಮತ್ತು ಬೋಧಕೇತರ ವೃಂದದ ಅಧಿಕಾರಿ ಮತ್ತು ಸಿಬಂದಿಗೆ “ಶಿಕ್ಷಕ ಮಿತ್ರ’ ತಂತ್ರಾಂಶದಲ್ಲಿ ಲಭ್ಯವಿರುವ 17 ಸೇವಾ ಸೌಲಭ್ಯಗಳಿಗೆ ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ಸೇವೆಗಳನ್ನು ಪಡೆಯು ವಂತೆ ತಿಳಿಸಲಾಗಿದೆ. ಆದ್ದರಿಂದ ಇನ್ನು ಮುಂದೆ ಯಾವುದೇ ಭೌತಿಕ ಪ್ರಸ್ತಾವನೆ ಸ್ವೀಕರಿಸದೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಬಟವಾಡೆ ಅಧಿಕಾರಿಗಳು ಶಿಕ್ಷಕರಿಂದ ಸೇವಾ ಸೌಲಭ್ಯ ಕೋರಿ ಬಂದ ಅರ್ಜಿಗಳನ್ನು ಇತ್ಯರ್ಥ ಪಡಿಸಿ ಕಾಲಮಿತಿಯಲ್ಲಿ ಸೇವೆ ಒದಗಿಸುವುದು ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿ ಯಾಗಿದೆ ಎಂದು ತಿಳಿಸಿದ್ದಾರೆ.