Advertisement

ವಿಶ್ವಕರ್ಮ ಕುಲಶಾಸ್ತ್ರ ಅಧ್ಯಯನಕ್ಕೆ ಶೀಘ್ರ ಆದೇಶ: ಸಿಎಂ

10:49 PM Jul 15, 2022 | Team Udayavani |

ಬೆಂಗಳೂರು: ವಿಶ್ವಕರ್ಮದ ಬಹು ದಿನಗಳ ಬೇಡಿಕೆಯಾದ ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆಸಲು ಸರಕಾರ ಮುಂದಾಗಿದ್ದು, ಶೀಘ್ರ ಆದೇಶ ಹೊರಡಿಸಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ವಿಶ್ವಕರ್ಮ ಬಂಧುಗಳ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನದ (ಕುಲಶಾಸ್ತ್ರ ಅಧ್ಯಯನ) ಅಗತ್ಯ ಇದೆ. ಇದು ಆ ಸಮುದಾಯದ ಬೇಡಿಕೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗುವುದು. ಈ ಕ್ರಮ
ದಿಂದ ಸಮುದಾಯಕ್ಕೆ ಮುಂಬರುವ ದಿನಗಳಲ್ಲಿ ಸಾಕಷ್ಟು ಅನುಕೂಲ ಆಗಲಿದೆ ಎಂದು ಅವರು ತಿಳಿಸಿದರು.

ಅರಮನೆ ಮೈದಾನದಲ್ಲಿ ಶುಕ್ರವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಹಮ್ಮಿ ಕೊಂಡಿದ್ದ ವಿಶ್ವಕರ್ಮ ಸಮಾಜದ ಮುಖಂಡರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಂಸ್ಥೆ ರಚನೆ
ವಿಶ್ವಕರ್ಮ ಸಮುದಾಯದ “ಪಂಚಕಸಬು’ಗಳ ಸ್ಥಿತಿಗತಿ, ಅವುಗಳ ಆಧುನೀಕರಣ ಮತ್ತಿತರ ವಿಷಯಗಳ ಮೇಲೂ ಬೆಳಕು ಚೆಲ್ಲಲು ವಿಶ್ವಕರ್ಮ ಸಂಸ್ಥೆ ರಚನೆಗೆ ಆದೇಶಿಸಲಾಗಿದೆ. ಚಿತ್ರಕಲಾ ಪರಿಷತ್ತಿನ ಮಾದರಿಯಲ್ಲಿ ಪಠ್ಯವನ್ನೂ ರಚಿಸಿ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅದನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

2 ವಿದ್ಯಾರ್ಥಿನಿಲಯ ಸ್ಥಾಪನೆ
ಹಿಂದುಳಿದ ವರ್ಗಗಳ ಇಲಾಖೆಯಿಂದ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳಿಗಾಗಿ ಎರಡು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ ಅವರು, ರಾಜ್ಯದಲ್ಲಿ ಅಪೂರ್ಣಗೊಂಡ ಸಮುದಾಯದ ಭವನಗಳನ್ನು ಪೂರ್ಣಗೊಳಿಸಲೂ ಕ್ರಮ ಕೈಗೊಳ್ಳಲಾಗುವುದು. “ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಬಾಕಿ ಇರುವ ಸುಮಾರು 82 ಕೋಟಿ ರೂ. ಸಾಲ ಮನ್ನಾ ಮಾಡುವ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

ಪರಿಶಿಷ್ಟ ಜಾತಿಗೆ ಸೇರಿಸಿ
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಮಾತನಾಡಿ, “ದೇಶಾದ್ಯಂತ ಸುಮಾರು 8-10 ಕೋಟಿ ವಿಶ್ವಕರ್ಮ ಬಂಧುಗಳು ನೆಲೆಸಿದ್ದಾರೆ. ಉತ್ತರಾಖಂಡ, ಹಿಮಾಚಲ ಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಕರ್ನಾಟಕದ ಕೊಳ್ಳೇಗಾಲದಲ್ಲೂ ನಾವು ಪರಿಶಿಷ್ಟ ಪಂಗಡಕ್ಕೆ ಸೇರಿದ್ದೇವೆ. ಅದೇ ಸೌಲಭ್ಯವನ್ನು ರಾಜ್ಯಾದ್ಯಂತ ಇಡೀ ಸಮುದಾಯಕ್ಕೆ ಕಲ್ಪಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದ್ದು, ಇದಕ್ಕೆ ಸರಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಇತರ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next