ಕೋಲ್ಕತಾ: ಕರ್ನಾಟಕ 6ನೇ ಪಂದ್ಯದಲ್ಲಿ ಸಿಕ್ಕಿಂಗೆ 6 ವಿಕೆಟ್ ಸೋಲುಣಿಸಿ ವಿಜಯ್ ಹಜಾರೆ ಟ್ರೋಫಿ “ಬಿ’ ವಿಭಾಗದ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ 46.2 ಓವರ್‌ಗಳಲ್ಲಿ 117ಕ್ಕೆ ಆಲೌಟ್ ಆಯಿತು. ಕರ್ನಾಟಕ 24.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 121 ರನ್ ಹೊಡೆಯಿತು.
ಇದು ಮಾಯಾಂಕ್ ಅಗರ್ವಾಲ್ ಬಳಗಕ್ಕೆ ಒಲಿದ 5ನೇ ಗೆಲುವು. ಅಸ್ಸಾಂ ಕೂಡ 5 ಜಯ ಸಾಧಿಸಿದೆ. ಎರಡೂ ತಂಡಗಳು 10 ಅಂಕ ಹೊಂದಿವೆ. ಕರ್ನಾಟಕ ರನ್‌ರೇಟ್‌ನಲ್ಲಿ ಮುಂದಿದೆ (+1.861). ಅಸ್ಸಾಂ +1.510 ರನ್‌ರೇಟ್ ಹೊಂದಿದೆ.
ಚೇಸಿಂಗ್ ವೇಳೆ ಕರ್ನಾಟಕ ಕೂಡ ಭಾರೀ ಕುಸಿತಕ್ಕೆ ಸಿಲುಕಿತು. 12ಕ್ಕೆ 3 ವಿಕೆಟ್, 37ಕ್ಕೆ 4 ವಿಕೆಟ್ ಹಾರಿ ಹೋಗಿತ್ತು. ಆದರೆ ಮಾಯಾಂಗ್ ಅಗರ್ವಾಲ್ (ಅಜೇಯ 54) ಮತ್ತು ನಿಕಿನ್ ಜೋಸ್ (ಅಜೇಯ 46) ಮುರಿಯದ 5ನೇ ವಿಕೆಟಿಗೆ 84 ರನ್ ಪೇರಿಸಿ ತಂಡವನ್ನು ದಡ ಮುಟ್ಟಿಸಿದರು.
Related Articles
ಸಿಕ್ಕಿಂಗೆ ವಿ. ಕೌಶಿಕ್, ಶ್ರೇಯಸ್ ಗೋಪಾಲ್ ಹಾಗೂ ಕೆ. ಗೌತಮ್ ಸೇರಿ ಆಘಾತವಿಕ್ಕಿದರು. ಮೂವರೂ ತಲಾ 3 ವಿಕೆಟ್ ಕೆಡವಿದರು.