Advertisement

ಯುಪಿಎಸ್‌ಸಿ: ಶ್ರೀದೇವಿಗೆ 573ನೇ ರ್‍ಯಾಂಕ್‌

11:53 AM Sep 26, 2021 | Team Udayavani |

ಹಗಬೊಮ್ಮನಹಳ್ಳಿ: ಬನ್ನಿಕಲ್ಲು ಗ್ರಾಮದ ವಕೀಲ ಬಿ.ವಿ.ಶಿವಯೋಗಿ, ಬಿ.ವಿ. ಇಂದಿರಾ ದಂಪತಿ ಪುತ್ರಿ ಬಿ.ವಿ.ಶ್ರೀದೇವಿ ಯುಪಿಎಸ್‌ಸಿ (ಕೇಂದ್ರ ಲೋಕಾಸೇವಾಆಯೋಗ) ಪರೀಕ್ಷೆಯಲ್ಲಿ 573ನೇ ರ್‍ಯಾಂಕ್‌ ಪಡೆದು ವಿಜಯನಗರ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

Advertisement

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದ ಶ್ರೀದೇವಿ,ಎಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿದ್ದರೂ ಕೂಡಯುಪಿಎಸ್ಸಿ ಎರಡನೇ ಪ್ರಯತ್ನದಲ್ಲಿ ಐಎಎಸ್‌ ಮತ್ತುಐಪಿಎಸ್‌ನಲ್ಲಿ ಉತ್ತಮ ಫಲಿತಾಂಶ ಪಡೆದು ಯಶಸ್ಸುಕಂಡಿದ್ದಾರೆ.

ಪಟ್ಟಣದ ಜ್ಞಾನಜ್ಯೋತಿ ಪ್ರಾಥಮಿಕಶಾಲೆಯಲ್ಲಿ,ಪ್ರೌಢಶಾಲೆಯನ್ನುರಾಷ್ಟ್ರೋತ್ಥಾನಸಂಸ್ಥೆಯ ಶಾರದ ಆಂಗ್ಲಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಶೇ. 96ಅಂಕಗಳ ‌ನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮಸ್ಥಾನ ಪಡೆದಿದ್ದರು. ನಂತರ ‌ ಹುಬ್ಬಳ್ಳಿಯ ಚೇತನ ಪ ಪೂ. ‌ಕಾಲೇಜ್‌ನಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡುಶೇ.93ರಷ್ಟು ಅಂಕಗಳನ್ನು ಪಡೆದರು.

ನಂತರಸಿಇಟಿಯಲ್ಲಿ 534 ರ್‍ಯಾಂಕ್‌ ಪಡೆದು, ಮೈಸೂರಿನ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್‌ ಕಾಲೇಜ್‌ನಲ್ಲಿ ಇಂಜಿನಿಯರ್‌ ಪಾಸ್‌ ಆಗಿ. ಬೆಂಗಳೂರಿನರಾಬರ್ಟ್‌ ಬೋಸ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.ಶ್ರೀದೇವಿ 2019ರಲ್ಲಿ ಜರುಗಿದ ಯುಪಿಎಸ್‌ಸಿಪರೀಕ್ಷೆಯಲ್ಲಿ ಪಾಸ್‌ ಆಗಿದ್ದ ಇವರು, ಗುಜರಾತಿನಅಮದಾಬಾದ್‌ನ ಗಿಫ್‌ ಸಿಟಿಯಲ್ಲಿ ಅಂತಾರಾಷ್ಟ್ರೀಯಹಣಕಾಸು ಸೇವಾ ಕೇಂದ್ರ ಪ್ರಾಧಿಕಾರದ ಗ್ರೇಡ್‌’ಎ’ ಅಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕೇಂದ್ರ ನಾಗರಿಕ ಸೇವೆಗಳ 2020ನೇ ಸಾಲಿನ ಮುಖ್ಯಪರೀಕ್ಷೆಯನ್ನು ಎದುರಿಸಿದ ಶ್ರೀದೇವಿ 573ನೇ ರ್‍ಯಾಂಕ್‌ಪಡೆದಿದ್ದಾರೆ. ನನ್ನ ಮಗಳು ಅಂದುಕೊಂಡಿದ್ದನ್ನುಛಲದಿಂದ ಸಾಧಿಸಿದಾಳೆ.  ರ್‍ಯಾಂಕ್‌ ಪಡೆಯುವಮೂಲಕ ಜಿಲ್ಲೆಯ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆಎಂದು ಶ್ರೀದೇವಿ ತಂದೆ ‌ ವಕೀಲರಾದಬಿ.ವಿ.ಶಿವಯೋಗಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next