Advertisement

ಅವಿವಾಹಿತ ಮಹಿಳೆಯರೂ ರಕ್ಷಣಾ ಅಕಾಡೆಮಿ ಪರೀಕ್ಷೆ ಬರೆಯಬಹುದು!

09:46 PM Sep 24, 2021 | Team Udayavani |

ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

Advertisement

ಇನ್ನು ಮುಂದೆ ಅವಿವಾಹಿತ ಮಹಿಳೆಯರೂ ಯುಪಿಎಸ್ಸಿಯಡಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ನೌಕಾಪಡೆ ಅಕಾಡೆಮಿ ಪರೀಕ್ಷೆಗಳನ್ನು ಬರೆಯಬಹುದು. ಯುಪಿಎಸ್ಸಿ ವೆಬ್‌ಸೈಟ್‌ನಲ್ಲಿ ಈ ಪರೀಕ್ಷೆಗೆ ಅರ್ಜಿಗಳನ್ನು ಬಿಡಲಾಗಿದೆ.

ಸೆ.24ರಿಂದ ಅ.8ರವರೆಗೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಈ ಪರೀಕ್ಷೆಗಳಿಗೆ ಇದುವರೆಗೆ ಮಹಿಳೆಯರಿಗೆ ಪ್ರವೇಶವಿರಲಿಲ್ಲ. ಆದರೆ ಕುಷ್‌ ಕಾಲ್ರಾ ಎನ್ನುವವರು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ್ದ ಸರ್ವೋಚ್ಚ ಪೀಠ ಆ.18ರಂದು, ಮಹಿಳೆಯರಿಗೂ ಪ್ರವೇಶ ನೀಡುವಂತೆ ಮಧ್ಯಂತರ ಆದೇಶ ನೀಡಿತ್ತು.

ಇದನ್ನೂ ಓದಿ:ಕೋವಿಡ್‌ ಅಂಕಿ-ಅಂಶ ಮುಚ್ಚಿಡುವ ಅವಶ್ಯಕತೆ ಸರ್ಕಾರಕ್ಕಿಲ್ಲ: ಡಾ.ಕೆ.ಸುಧಾಕರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next