ಉಪ್ಪುಂದ: ಟೀ ಕುಡಿಯುತ್ತಿದ್ದ ಮಹಿಳೆ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಉಪ್ಪುಂದದಲ್ಲಿ ಸಂಭವಿಸಿದೆ.
ಉಪ್ಪುಂದ ಗ್ರಾಮದ ಮಡಿಕಲ್ ಕೊಠಾರಿತ್ಲುಮನೆ ಪಾರ್ವತಿ (44) ಮೃತಪಟ್ಟ ಮಹಿಳೆ. ಅವರಿಗೆ ಮದುವೆಯಾಗಿ 15 ವರ್ಷವಾಗಿದ್ದು 13 ವರ್ಷದ ಪುತ್ರ ಇದ್ದಾನೆ.
ಪಾರ್ವತಿ ಅವರು ಸುಮಾರು 13 ವರ್ಷಗಳಿಂದ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದ ಪಾರ್ವತಿ ಅವರು ಕುಂದಾಪುರ ಮತ್ತು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಖಾಯಿಲೆ ಗುಣಮುಖವಾಗದೇ ಈ ಹಿಂದೆ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.
ನ. 25ರಂದು ಸಂಜೆ ಕುಡಿಯಲು ಟೀ ಮಾಡಿಕೊಟ್ಟಿದ್ದು ಸ್ವಲ್ಪ ಸಮಯದ ಬಳಿಕ ಕಾಣದೆ ಮನೆಯವರು ಕರೆದು ಹುಡುಕುತ್ತ ಅಂಗಳದ ಬದಿಯ ಬಾವಿಯಲ್ಲಿ ನೋಡಿದಾಗ ಪಾರ್ವತಿ ನೀರಿನಲ್ಲಿ ಮುಳುಗಿ ಏಳುವುದನ್ನು ನೋಡಿ ತತ್ಕ್ಷಣ ಅವರನ್ನು ಮೇಲಕ್ಕೆ ಎತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಪ್ರಯೋಜವಾಗದೆ ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.