Advertisement

ಉಪ್ಪುಂದ: ಲಾಡ್ಜ್ ನಲ್ಲಿ ಅನ್ಯ ಧರ್ಮದ ಪುರುಷನೊಂದಿಗೆ ಯುವತಿ ಪತ್ತೆ

04:18 PM Jul 22, 2022 | Team Udayavani |

ಉಪ್ಪುಂದ:  ಬೈಂದೂರು ತಾಲೂಕಿನ ಉಪ್ಪುಂದ ನಂದನವನ ವಸತಿ ಗೃಹಕ್ಕೆ ಭಿನ್ನಮತೀಯ ಜೋಡಿಗಳು ಬಂದ ವಿಷಯ ತಿಳಿದು ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಉಳ್ಳಾಲದ ಉಳ್ಳಾಲ ಬೈಲು ನಿವಾಸಿ ಅಮೀರ್ ಅಲಿ(45), ಉಳ್ಳಾಲದ 28 ವರ್ಷದ ಯುವತಿಯೊಂದಿಗೆ ಆಗಮಿಸಿದ್ದರು ಎಂದು ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿದ ರಾಜಾಹುಲಿ..: BSY ನಿರ್ಧಾರದ ಹಿಂದಿನ ಲೆಕ್ಕಾಚಾರವೇನು?

ಅಮೀರ್ ಅಲಿ ಗುಜರಿ ವ್ಯಾಪಾರಿಯಾಗಿದ್ದು, ದ.ಕ ಜಿಲ್ಲೆಯ ತೊಕ್ಕುಟ್ಟುವಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದಾನೆ. ಯುವತಿ ಆತನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆಯ ಒಪ್ಪಿಗೆಯಿಂದಲೇ ಲಾಡ್ಜ್ ಗೆ ಕರೆತಂದಿರುವುದಾಗಿ ತಿಳಿದುಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next