Advertisement

ಉಪ್ಪುಂದ: ಸಾಲಬಾಧೆ ತಾಳಲಾರದೆ ವ್ಯಕ್ತಿ ಆತ್ಮಹತ್ಯೆ

12:42 AM Mar 04, 2023 | Team Udayavani |

ಉಪ್ಪುಂದ: ಸಾಲಬಾಧೆ ಹಾಗೂ ಪತ್ನಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮನನೊಂದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರಿನಲ್ಲಿ ನಡೆದಿದೆ.

Advertisement

ಬೈಂದೂರು ತಾಲೂಕು ವಿದ್ಯಾನಗರ ಡಿಗ್ರಿ ಕಾಲೇಜು ಸಮೀಪದ ನಿವಾಸಿ ಗೋಪಾಲ (48) ಆತ್ಮಹತ್ಯೆ ಮಾಡಿಕೊಂಡವರು.

ಅವರು ಹೊಸ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಹಣದ ಅಡಚಣೆಯಿಂದ ಮನೆ ಕೆಲಸ ನಿಧಾನಕ್ಕೆ ನಡೆದಿದ್ದು, ಮನೆ ನಿರ್ಮಾಣದ ಸಲುವಾಗಿ ಬ್ಯಾಂಕ್‌ ಹಾಗೂ ಸಂಘಗಳಲ್ಲಿ ಸುಮಾರು 7-8 ಲಕ್ಷ ರೂ. ಸಾಲ ಮಾಡಿ, ಮನೆ ನಿರ್ಮಾಣ ಮಾಡುತ್ತಿದ್ದು, ಇನ್ನು ಹೆಚ್ಚಿನ ಹಣ ಬೇಕಾಗಿರುವ ಬಗ್ಗೆ ಪತ್ನಿ ಸುಶೀಲಾ ಅವರಲ್ಲಿ ಪದೇ ಪದೇ ಹೇಳುತ್ತಿದ್ದರು. ಸುಶೀಲಾ ಮೊಗವೀರ ಅವರಿಗೂ ಆರೋಗ್ಯ ಹದಗೆಟ್ಟು, ಹಾಸಿಗೆ ಹಿಡಿದ ಕಾರಣ ಮಾನಸಿಕ ಖನ್ನತೆಗೆ ಒಳಗಾಗಿ ಮದ್ಯಪಾನ ಸಹ ಮಾಡುತ್ತಿದ್ದರು. ಮಾ.2ರಂದು ಬೆಳಗ್ಗೆ ಎದ್ದು ಹೊಸ ಮನೆ ಕೆಲಸದ ಬಗ್ಗೆ ಹೋಗಿದ್ದು ಚಹಾ ಕುಡಿಯಲು ಬೆಳಗ್ಗೆ 8:30 ಗಂಟೆಗೆ ಕರೆಯಲು ಹೋದಾಗ ಹೊಸ ಮನೆಯ ಒಳಗಡೆ ಇರುವ ಟಾಯ್ಲೆಟ್‌ನ ಕಬ್ಬಿಣದ ಜಂತಿಗೆ ಟವೆಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ಆತ್ಮಹತ್ಯೆ
ಕಾರ್ಕಳ: ನಿಟ್ಟೆಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್‌ ಕಲಿಯುತ್ತಿದ್ದ ಸೀಮಾ (22) ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 2ರಂದು ನಡೆದಿದೆ.

ಕುಂದಾಪುರದ ಶಿರೂರು ಮೂಲದ ಅವರು ಅಂತಿಮ ವರ್ಷದ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು. ನರ, ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹಲವು ಕಡೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಗುಣವಾಗಿರಲಿಲ್ಲ. ಇದರಿಂದ ಮನನೊಂದು 4-5 ತಿಂಗಳ ಹಿಂದೆಯೂ ಒಮ್ಮೆ ನಿದ್ರೆ ಮಾತ್ರೆ ಹಾಗೂ ಆರೋಗ್ಯದ ಸಮಸ್ಯೆಯ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದೇ ಕಾರಣವನ್ನೇ ಮುಂದಿಟ್ಟುಕೊಂಡು ಮಾ. 2ರಂದು ಅಪರಾಹ್ನ ಹಾಸ್ಟೆಲ್‌ನ ಕೊಠಡಿಯಲ್ಲಿನ ಫ್ಯಾನ್‌ಗೆ ಚೂಡಿದಾರ್‌ ಶಾಲ್‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೈಕ್‌ಗಳ ನಡುವೆ ಪರಸ್ಪರ ಢಿಕ್ಕಿ:ಗಾಯ
ಕಾರ್ಕಳ: ಬೋಳ ಗ್ರಾಮದ ಬೋಳ ಪದವು ಎಂಬಲ್ಲಿ ಬೈಕ್‌ಗಳ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿ ಎರಡು ಬೈಕ್‌ಗಳ ಸವಾರರು, ಸಹಸವಾರಿ ಗಾಯಗೊಂಡ ಘಟನೆ ನಡೆದಿದೆ.

ಕಿನ್ನಿಗೋಳಿ ನೆಲ್ಲಿಗುಡ್ಡೆ ನಿವಾಸಿ ಗಣೇಶ್‌ ಪ್ರಸಾದ್‌ ಸಂಕಲಕರಿಯ ಕಡೆಯಿಂದ ಮಂಜರಪಲ್ಕೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಎದುರಿನಿಂದ ಮಂಜರಪಲ್ಕೆ ಕಡೆಯಿಂದ ವಿನೋದ ಅವರು ಚಲಾಯಿಸಿಕೊಂಡು ಬಂದ ಬೈಕ್‌ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಎರಡು ಬೈಕ್‌ಗಳ ಸವಾರರು ಹಾಗೂ ಸಹಸವಾರ ಬೈಕ್‌ ಸಹಿತ ರಸ್ತೆಗೆ ಬಿದ್ದು ಗಣೇಶ್‌ ಪ್ರಸಾದ್‌ ಮೂಳೆ ಮುರಿತಕ್ಕೆ ಒಳಗಾದರೆ, ವಿನೋದ, ಸಹಸವಾರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಕಾರ್ಕಳ ಪೊಲೀಸ್‌ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಚಾರು: ಪಾದಚಾರಿಗೆ ಬೈಕ್‌ ಢಿಕ್ಕಿ; ಗಂಭೀರ
ಸಿದ್ದಾಪುರ: ಅಂಪಾರು ಗ್ರಾಮದ ಕಂಚಾರು ಜಂಕ್ಷನ್‌ ಬಳಿ ನಡೆದುಕೊಂಡು ಹೋಗುತ್ತಿದ್ದ ಕಾವ್ರಾಡಿ ಗ್ರಾಮದ ಹನ್ನಾಡು ಗುಡ್ಡಿಮನೆ ಸುರೇಶ ದೇವಾಡಿಗ (59) ಅವರಿಗೆ ಬೈಕ್‌ ಢಿಕ್ಕಿ ಹೊಡೆದಿದೆ. ಢಿಕ್ಕಿ ಪರಿಣಾಮ ಸುರೇಶ ಅವರು ಗಂಭೀರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next