Advertisement

Uppinangady; ಏಕಮುಖ ಪ್ರೀತಿಯ ಹಿನ್ನೆಲೆ ನವ ವಿವಾಹಿತನ ಬೈಕ್‌ ಸುಟ್ಟವನ ಸೆರೆ

12:48 AM Jan 13, 2024 | Team Udayavani |

ಉಪ್ಪಿನಂಗಡಿ: ಅತ್ತೆ ಮನೆಗೆ ಬಂದಿದ್ದ ನವ ವಿವಾಹಿತನ ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಆರೋಪಿಯ ಏಕಮುಖ ಪ್ರೀತಿಯೇ ಈ ಘಟನೆಗೆ ಕಾರಣವೆನ್ನಲಾಗಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಪಾದಾಳದ ನಿವಾಸಿ ಸಂದೀಪ್‌ನನ್ನು ಬಂಧಿಸಲಾಗಿದೆ.

ಹಿರೇಬಂಡಾಡಿ ಗ್ರಾಮದ ಮುಳ್ಳುಗುಡ್ಡೆ ಎನ್ನುವಲ್ಲಿ ಜ. 6ರಂದು ರಾತ್ರಿ ಬರಿಮಾರು ಗ್ರಾಮದ ಕಡವಿನ ಬಳಿಯ ಲಿಖೀತ್‌ ಕುಮಾರ್‌ ಅವರ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ಇವರಿಗೆ ಮುಳ್ಳುಗುಡ್ಡೆಯ ಯುವತಿಯೊಂದಿಗೆ ಜ. 3ರಂದು ಮದುವೆಯಾಗಿದ್ದು, ಜ. 6ರಂದು ಪತ್ನಿಯ ಮನೆಗೆ ಬಂದಿದ್ದರು. ರಾತ್ರಿ ಕೀರ್ತನ್‌ ಬಹಿರ್ದೆಸೆಗೆಂದು ಹೊರ ಬಂದಾಗ ಮನೆಯಿಂದ ಸ್ವಲ್ಪ ದೂರದಲ್ಲಿ ಮೋಟಾರು ಸೈಕಲ್ಲೊಂದು ಬೆಂಕಿಯಿಂದ ಉರಿಯುತ್ತಿರುವುದು ಕಂಡುಬಂದಿತ್ತು. ಇದನ್ನು ನೋಡಿ ಮನೆಯವರನ್ನು ಎಬ್ಬಿಸಿದ್ದು, ಹೊರಗೆ ಬಂದು ನೋಡಿದಾಗ ಮನೆಯ ಮುಂದೆ ಶೆಡ್‌ನ‌ಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಇರಲಿಲ್ಲ.

ಈ ಬಗ್ಗೆ ಪೊಲೀಸರಿಗೆ ಲಿಖಿತ್‌ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿ ಸಂದೀಪನನ್ನು ಬಂಧಿಸಿದ್ದು, ಆತ ಲಿಖಿತ್‌ನ ಪತ್ನಿಯನ್ನು ಮದುವೆಗೆ ಮುನ್ನ ಏಕಮುಖವಾಗಿ ಪ್ರೀತಿ ಮಾಡುತ್ತಿದ್ದು, ಆಕೆಗೆ ಮದುವೆಯಾಗಿದ್ದರಿಂದ ಆಕ್ರೋಶಗೊಂಡು ಆಕೆಯನ್ನು ವಿವಾಹವಾದ ಲಿಖಿತ್‌ ಕುಮಾರ್‌ ಮೇಲೆ ದ್ವೇಷ ಭಾವವನ್ನು ಹೊಂದಿ ಅವರ ದ್ವಿಚಕ್ರ ವಾಹನವನ್ನು ಸುಟ್ಟಿದ್ದಾನೆ ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next