Advertisement

ಉಪ್ಪಿನಂಗಡಿ: ಪಿಡಿಒ ಮೇಲೆ ಹಲ್ಲೆ…  ದೂರು, ಪ್ರತಿ ದೂರು ದಾಖಲು

10:23 PM Jan 03, 2023 | Team Udayavani |

ಉಪ್ಪಿನಂಗಡಿ : ಇಲ್ಲಿನ ಗ್ರಾಮ ಪಂಚಾಯತ್‌ ಪಿಡಿಒ ರವರ ಕರ್ತವ್ಯ ನಿರ್ವಹಣೆಗೆ ಸ್ವತಃ ಪಂಚಾಯತ್‌ ಸದಸ್ಯರೋರ್ವರು ತಡೆಯೊಡ್ಡಿ ಹಲ್ಲೆಗೆ ಯತ್ನಿಸಿದ ಬಗ್ಗೆ ಪಿಡಿಒ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗ್ರಾಮದ ಪೆರಿಯಡ್ಕ ನೆಡಿಲ್‌ ಎಂಬಲ್ಲಿ ಪಂದ್ಯಾಟವೊಂದಕ್ಕೆ ಸಂಬಂಧಿಸಿ ಹಾಕಲಾಗಿದ್ದ ಬ್ಯಾನರ್‌ ಅನ್ನು ಅನುಮತಿಯಿಲ್ಲದೇ ಹಾಕಲಾಗಿದೆ ಎಂಬ ಕಾರಣಕ್ಕೆ ಪಿಡಿಒ ಸೂಚನೆಯಂತೆ ತೆರವು ಮಾಡಲು ಮುಂದಾದಾಗ ಸ್ಥಳೀಯರು ಪ್ರತಿಭಟಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪಿಡಿಒ ವಿಲ್ಫ್ರೆಡ್ ಲಾರೆನ್ಸ್‌ ರೋಡ್ರಿಗಸ್‌ ಬ್ಯಾನರ್‌ ತೆರವುಗೊಳಿಸಲು ಮುಂದಾದಾಗ ಪಂಚಾಯತ್‌ ಸದಸ್ಯರಾದ ಸುರೇಶ್‌ ಅತ್ರಮಜಲು, ಬಿಜೆಪಿ ಕಾರ್ಯಕರ್ತ ರಮೆಶ್‌ ಭಂಡಾರಿ, ಹಾಗೂ ರೋಹಿತ್‌ ಮತ್ತಿತರರು ತಡೆಯೊಡ್ಡಿ ಪಿಡಿಒ ಮೇಲೆ ಹಲ್ಲೆಗೆ ಯತ್ನಿಸಿದರೆಂದೂ ವಾಹನದ ಕೀಯನ್ನು ತೆಗೆದಿಟ್ಟು ಸರಕಾರಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದರೆಂದು ಆಪಾದಿಸಿ ದೂರು ಸಲ್ಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾ. ಪಂ. ಸದಸ್ಯ ಸುರೇಶ್‌ ಅತ್ರಮಜಲು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ.

ಪಂಚಾಯತ್‌ ಅಧ್ಯಕ್ಷರ ಒಪ್ಪಿಗೆ ಪಡೆದು ಅನಾರೋಗ್ಯಕ್ಕೀಡಾದ ಮಗುವಿನ ಸಹಾಯಾರ್ಥವಾಗಿ ನಡೆಸುವ ಕಾರ್ಯಕ್ರಮದ ಬಗ್ಗೆ ಹಾಕಲಾದ ಬ್ಯಾನರನ್ನು ಬಲವಂತವಾಗಿ ತೆಗೆಯಲು ಮುಂದಾದ ಗ್ರಾ. ಪಂ. ಪಿಡಿಒ ಅವರು ಜನಪ್ರತಿನಿಧಿಯಾಗಿರುವ ತನ್ನ ಮೈ ಮೇಲೆ ಸಾರ್ವಜನಿಕವಾಗಿ ಕೈ ಮಾಡಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿಯನ್ನು ಕೋರಿದ್ದಾರೆ.

ಒಪ್ಪಿಗೆ ನೀಡಿದ್ದೆ: ಗ್ರಾ. ಪಂ. ಅಧ್ಯಕ್ಷೆ
ಪ್ರಕರಣದ ಬಗ್ಗೆ ಗ್ರಾ. ಪಂ. ಅಧ್ಯಕ್ಷೆ ಉಷಾ ಮುಳಿಯ ಮಾತನಾಡಿ, ಅನಾರೋಗ್ಯಕ್ಕೀಡಾದ ಬಡ ಮಗುವಿಗೆ ಧನ ಸಹಾಯ ಸಂಗ್ರಹಿಸುವ ನಿಟ್ಟಿಯಲ್ಲಿ ಆಯೋಜಿಸಲಾದ ಕ್ರೀಡಾ ಕಾರ್ಯಕ್ರಮಕ್ಕೆ ಮಾನವೀಯ ನೆಲೆಯಲ್ಲಿ ಶುಲ್ಕ ಹಾಕದೆ ಬ್ಯಾನರ್‌ ಅಳವಡಿಸಲು ಒಪ್ಪಿಗೆ ಸೂಚಿಸಿದ್ದೆ. ಬ್ಯಾನರ್‌ ತೆರವುಗೊಳಿಸುವ ಬಗ್ಗೆ ಯಾರೂ ಕೂಡ ನನ್ನ ಗಮನಕ್ಕೆ ತಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಇದನ್ನೂ ಓದಿ: ಮಂಗಳೂರು: 7 ವರ್ಷಗಳ ಕಾಲ ಅಪರಾಧ ಪತ್ತೆದಳದಲ್ಲಿ ಸೇವೆ ಸಲ್ಲಿಸಿದ ಶ್ವಾನ ‘ಜ್ವಾಲಾ’ ಇನ್ನಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next