Advertisement

ನಾಪತ್ತೆಯಾದ ಉಪ್ಪಿನಂಗಡಿಯ ವ್ಯಕ್ತಿ ಹಿಮಾಚಲ ಪ್ರದೇಶದಲ್ಲಿ ? 

07:32 AM Sep 23, 2021 | Team Udayavani |

ಉಪ್ಪಿನಂಗಡಿ: ನೆಕ್ಕಿಲಾಡಿಯಿಂದ ನಾಪತ್ತೆಯಾಗಿರುವ ಉತ್ತರ ಪ್ರದೇಶದ ನಿವಾಸಿಯ ಮೊಬೈಲ್‌ ಸಂಖ್ಯೆ ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಳಿವು ಪೊಲೀಸರಿಗೆ ದೊರೆತಿದೆ!

Advertisement

ಜಿಲ್ಲಾ ಪೊಲೀಸ್‌ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಆದರೆ ಬೆಂಗಳೂರಿಗೆ ಎಂದು ಹೋದವ ಅಲ್ಲಿಗೆ ಏಕೆ ಹೋಗಿದ್ದಾನೆ ಅಥವಾ ಮೊಬೈಲ್‌ ಬೇರೆಯವರಲ್ಲಿ ಇದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಮೂಲತಃ ಉತ್ತರ ಪ್ರದೇಶದ ನಿವಾಸಿ ಎನ್ನಲಾದ ದಾಖಲೆಗಳನ್ನು ಹೊಂದಿದ್ದ 48ರ ಹರೆಯದ ವ್ಯಕ್ತಿ ಕಾರ್ಯನಿಮಿತ್ತ ಬೆಂಗಳೂರಿಗೆ ಹೋದ ಬಳಿಕ ಜು. 18ರಿಂದ ನಾಪತ್ತೆಯಾಗಿರುವುದಾಗಿ ಆತನ ಪತ್ನಿ ಅಗಸ್ಟ್‌ ಮೊದಲ ವಾರದಲ್ಲಿ ಪೊಲೀಸರಿಗೆ  ದೂರು ನೀಡಿದ್ದರು.

ಈ ದೂರಿಗೆ ಸಂಬಂಧಿ ಸಿ ಪೊಲೀಸ್‌ ತನಿಖೆ ಪ್ರಗತಿಯಲ್ಲಿರುವ ಸಂದರ್ಭ ನಾಪತ್ತೆಯಾದ ವ್ಯಕ್ತಿಯ ಚಹರೆ ದಿಲ್ಲಿಯಲ್ಲಿ ಬಂಧಿನತನಾದ  ಭಯೋತ್ಪಾದಕನ ಚಹರೆಯನ್ನೇ ಹೊಂದಿದೆ ಎಂಬ ಸುದ್ದಿ ಹರಡಿ ಉಪ್ಪಿನಂಗಡಿ, ನೆಕ್ಕಿಲಾಡಿ ಪರಿಸರದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.

ಪೊಲೀಸರಿಂದ ತನಿಖೆ:

Advertisement

ನಾಪತ್ತೆಯಾದ ವ್ಯಕ್ತಿಯನ್ನು ಸಂಪರ್ಕಿಸುವ ಹಲವು ಯತ್ನಗಳು ವಿಫ‌ಲಗೊಂಡ  ಬಳಿಕ ಪೊಲೀಸರು ತಾಂತ್ರಿಕ ಸಲಹೆ  ಪಡೆದಾಗ ಆತ ಬಳಸುತ್ತಿದ್ದ ಮೊಬೈಲ್‌ ಸಂಖ್ಯೆಯು ಪ್ರಸ್ತುತ ಹಿಮಾಚಲ ಪ್ರದೇಶದ ಟವರ್‌ ವ್ಯಾಪ್ತಿಯಲ್ಲಿ ಕಾರ್ಯಾ ಚರಿಸುತ್ತಿರುವುದು ಗೊತ್ತಾಗಿದೆ. ಆತ ತಲೆ ಮರೆಸಿಕೊಳ್ಳುವುದಕ್ಕಾಗಿಯೇ ಅಲ್ಲಿಗೆ ಹೋಗಿದ್ದಾನೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬ ವಿವರಗಳು ಇನ್ನಷ್ಟೇ ಗೊತ್ತಾಗಬೇಕಾಗಿದೆ.

ಸಾಲಗಾರರ ಕಾಟ ತಪ್ಪಿಸಲು ನಾಟಕ!  :

ಭಯೋತ್ಪಾದನ ಚಟುವಟಿಕೆಯಲ್ಲಿ ಬಂಧಿತನಾದರೆ ಆಯಾ ರಾಜ್ಯದ ಗೃಹ ಇಲಾಖೆ ಮೂಲಕ ಸ್ಥಳೀಯ ಪೊಲೀಸರಿಂದ ಪ್ರಾಥಮಿಕ ಮಾಹಿತಿ ಕಲೆ ಹಾಕಿ ವಿಚಾರಣೆ ನಡೆಸಲಾಗುತ್ತದೆ. ಆದರೆ ಈ ತನಕ ಅಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಅಲ್ಲದೆ ನಾಪತ್ತೆಯಾದ ವ್ಯಕ್ತಿ ನೆಕ್ಕಿಲಾಡಿ ಪರಿಸರದಲ್ಲಿ ತಾನು ಪಡೆದ ಸಾಲವನ್ನು ಮರು ಪಾವತಿಸುವುದನ್ನು ತಪ್ಪಿಸುವ ಸಲುವಾಗಿ ತಾನು ತನಿಖಾ ತಂಡದ ವಶವಾಗಿರುವ ಸುದ್ದಿ ಹಬ್ಬಿಸಿರುವ ಶಂಕೆಯೂ ಇದೆ ಎನ್ನಲಾಗುತ್ತಿದೆ. ಈ ಎಲ್ಲ ಕೋನಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು ಹಿಮಾಚಲ ಪ್ರದೇಶದ ಪೊಲೀಸರನ್ನು ಸಂಪರ್ಕಿಸುವ ಕಾರ್ಯದಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next