Advertisement

ಪೊಲೀಸರ ಮೇಲಿನ ದಾಳಿ : PFI ನಿಷೇಧಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹ

01:22 PM Dec 15, 2021 | Team Udayavani |

ಮಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಡೆಸಿದ ಉಪ್ಪಿನಂಗಡಿ ಪೊಲೀಸರ ಮೇಲಿನ ದಾಳಿ, ಅಪ್ರಚೋದಿತ ಹಿಂಸಾಚಾರ ಹಾಗೂ ದಾಂಧಲೆ ಖಂಡನೀಯ,ಹೀಗಾಗಿ ಸಂಘಟನೆಯನ್ನು ನಿಷೇಧಿಸಲು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

Advertisement

ಬಡ ಹಿಂದೂ ಮೀನು ಮಾರಾಟಗಾರರ ಮೇಲಿನ ಹಲ್ಲೆಗೆ ಸಂಭಂದಿಸಿದ ಪ್ರಕರಣದಲ್ಲಿ PFI ಮುಖಂಡರರನ್ನು ಬಂಧಿಸಲಾಗಿತ್ತು, ಇದನ್ನು ವಿರೋಧಿಸಿ PFI ಸಂಘಟನೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಪೋಲೀಸರ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿರುವುದು ಖಂಡನೀಯ. ತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರನ್ನು ರಕ್ಷಿಸುವ ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬನಿಗೂ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ

ಇದನ್ನೂ ಓದಿ :ಉಪ್ಪಿನಂಗಡಿ ಲಾಠಿ ಚಾರ್ಜ್: ಪಾಪ್ಯುಲರ್ ಫ್ರಂಟ್ ಖಂಡನೆ

‘ ದೇಶದ್ರೋಹಿ ಕೃತ್ಯವೆಸಗುತ್ತಿರುವ PFI ಮತೀಯ ಸಂಘಟನೆಯನ್ನು ಕರ್ನಾಟಕ ಸರ್ಕಾರ ತತ್ ಕ್ಪಣ ಅಧಿವೇಶನದ ಈ ಸಂದರ್ಭದಲ್ಲಿ ನಿಷೇಧ ಮಾಡಬೇಕು’ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಪತ್ರಿಕಾ ಪ್ರಕಟಣೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next