Advertisement

Uppinangady: ಚಿನ್ನಾಭರಣ ದರೋಡೆ, ಬೆದರಿಕೆ

12:53 AM May 12, 2024 | Team Udayavani |

ಉಪ್ಪಿನಂಗಡಿ: ಇಲ್ಲಿನ ಕರಾಯ ಗ್ರಾಮದ ಬದ್ಯಾರು ಎಂಬಲ್ಲಿ ಮಹಿಳೆಯೊಬ್ಬರೇ ಇದ್ದ ಮನೆಗೆ ನೀರು ಕೇಳಿಕೊಂಡು ಬಂದ ಅಪರಿಚಿತರು ಹಾಡುಹಗಲೇ ಮನೆಯೊಳಗೆ ಪ್ರವೇಶಿಸಿ ಆಭರಣಕ್ಕಾಗಿ ಜಾಲಾಡಿದ್ದಲ್ಲದೆ, ಮಗುವನ್ನು ಕೊಲ್ಲುವ ಬೆದರಿಕೆಯೊಡ್ಡಿ ಮೈ ಮೇಲಿದ್ದ ಒಂದು ಲಕ್ಷಕ್ಕೂ ಮಿಕ್ಕಿದ ಚಿನ್ನಾಭರಣವನ್ನು ದರೋಡೆಗೈದ ಘಟನೆ ಶನಿವಾರ ಸಂಭವಿಸಿದೆ.

Advertisement

ಜಕಾರಿಯಾ ಅವರ ಪತ್ನಿ ಸುಹೈಬಾ (25) ಅವರು ಶನಿವಾರ ಮನೆಯ ಎದುರು ಕಸ ಗುಡಿಸುತ್ತಿರುವಾಗ ಮನೆಯ ಅಂಗಳಕ್ಕೆ ಅಪರಿಚಿತ ಗಂಡಸು ಮತ್ತು ಮಹಿಳೆ ಬಂದು ಸುಹೈಬಾರವರಲ್ಲಿ ಕರಪತ್ರವೊಂದನ್ನು ತೋರಿಸಿ ಸಹಾಯ ಮಾಡಬೇಕು ಎಂದು ಹೇಳಿದರು. ಆಬಳಿಕ ಕುಡಿಯಲು ನೀರು ಬೇಕು ಎಂದು ಕೇಳಿದಾಗ ಸುಹೈಬಾರವರು ನಳ್ಳಿಯಿಂದ ನೀರು ತರಲೆಂದು ಹೋದಾಗ ಅವರಿಬ್ಬರು ಮನೆಯ ಒಳಗೆ ಹೋಗುವುದನ್ನು ಕಂಡು ಬೊಬ್ಬೆ ಹಾಕಿ ನೀವು ಎಲ್ಲಿಗೆ ಹೋಗುತ್ತೀರಿ? ಎಂದು ಪ್ರಶ್ನಿಸಿದರು.

ಅವರಿಬ್ಬರು ಮನೆಯ ಒಳಗಿನ ಬೆಡ್‌ ರೂಮಿನಲ್ಲಿರುವ ಗೋಡ್ರೇಜ್‌ ಕಪಾಟಿನ ಬಾಗಿಲು ತೆರೆದು ಹುಡುಕುತ್ತಿರುವುದು ಕಂಡು ಬಂತು. ಕೂಡಲೇ ಸುಹೈಬಾರವರು ಮಗುವನ್ನು ಎತ್ತಿಕೊಂಡು ಹೊರ ಬಂದಾಗ ಅಲ್ಲಿಗೆ ಬಂದ ಅವರಿಬ್ಬರು ಚೂರಿ ತೋರಿಸಿ ನಿನ್ನಲ್ಲಿರುವ ಚಿನ್ನ ಕೊಡು, ಇಲ್ಲದಿದ್ದರೆ ನಿನ್ನ ಮಗುವನ್ನು ಕೊಂದು ಹಾಕುತ್ತೇನೆ ಎಂದು ಬೆದರಿಸಿದಾಗ ಮಹಿಳೆ ಹೆದರಿ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ತೆಗೆದು ಕೊಟ್ಟದ್ದನನ್ನು ತೆಗೆದುಕೊಂಡು ಪರಾರಿಯಾದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next