ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಕಾವು ಕ್ರಾಸ್‌ನಲ್ಲಿ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಲಕ್ಷ್ಮಣ ಆಚಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮಾವಳ್ಳಿ ಗ್ರಾಮದ ನಾಲ್ವರು ಎರಡು ಬೈಕ್‌ಗಳಲ್ಲಿ ಧರ್ಮಸ್ಥಳ ದೇಗುಲಕ್ಕೆ ತೆರಳಿ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಗಾಯಗೊಂಡಿರುವ ಲಕ್ಷ್ಮಣರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಔಷಧ ಎಂದು ಕೀಟನಾಶಕ ಸೇವಿಸಿ ಸಾವು
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಪಿಲಿಕುಡೇಲಿನಲ್ಲಿ ಔಷಧ ಎಂದು ಭಾವಿಸಿ ಕ್ರಿಮಿನಾಶಕವನ್ನು ಕುಡಿದು ಅಸ್ವಸ್ಥರಾಗಿದ್ದ ಪದ್ಮನಾಭ ಭಟ್ (84) ಅವರು ಮೃತಪಟ್ಟಿದ್ದಾರೆ.
ವಯೋ ಸಹಜ ಕಾಯಿಲೆ ಮತ್ತು ಮರೆಗುಳಿತನದಿಂದ ಬಳಲುತ್ತಿದ್ದ ಅವರು ಡಿ. 4ರಂದು ಮನೆಯಲ್ಲಿ ಮಗನಿಲ್ಲದ ವೇಳೆ ತೋಟಕ್ಕೆ ಸಿಂಪಡಿಸಿ ಉಳಿಕೆಯಾಗಿದ್ದ ಕ್ರಿಮಿನಾಶಕವನ್ನು ಸೇವಿಸಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪುತ್ರ ಕೇಶವ ಪ್ರಸಾದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.