Advertisement

ಉಪ್ಪಿನಂಗಡಿ : ಕಾರುಗಳ ಮುಖಾಮುಖಿ ಢಿಕ್ಕಿ, ಇಬ್ಬರಿಗೆ ಗಾಯ

12:59 AM Jul 19, 2022 | Team Udayavani |

ಉಪ್ಪಿನಂಗಡಿ: ಕಾರುಗಳೆರಡು ಮುಖಾಮುಖಿ ಢಿಕ್ಕಿಯಾಗಿ ಒಂದು ಕಾರಿನಲ್ಲಿದ್ದವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಿನಂಗಡಿ ಸಮೀಪದ ಕೂಟೇಲು ಸೇತುವೆ ಬಳಿ ಜು. 18ರಂದು ನಡೆದಿದೆ.

Advertisement

ಅಪಘಾತಗೊಂಡ ಮಾರುತಿ 800 ಕಾರಿನಲ್ಲಿದ್ದ ಕೆಮ್ಮಾರದ ಮುಹಮ್ಮದ್‌ ನವಾಝ್ ಹಾಗೂ ಅನ್ಸಾರ್‌ ಗಾಯಗೊಂಡವರು. ಸ್ವಿಫ್ಟ್ ಡಿಸೈರ್‌ ಕಾರಿನಲ್ಲಿದ್ದ ಸಾಮೆತ್ತಡ್ಕದ ಅಬ್ದುಲ್‌ ಮಜೀದ್‌ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಉಪ್ಪಿನಂಗಡಿ ಕಡೆಯಿಂದ ಹಳೆಗೇಟು ಕಡೆ ಹೋಗುತ್ತಿದ್ದ ಮಾರುತಿ 800 ಕಾರು ಕೂಟೇಲು ಸೇತುವೆಯ ಬಳಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಹಳೆಗೇಟಿನಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್‌ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್‌ ಕಾರು ಹಳೆಗೇಟು ಕಡೆ ಮುಖ ಮಾಡಿ ರಸ್ತೆಯಂಚಿನ ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದರೆ, ಮಾರುತಿ 800 ಕಾರು ರಸ್ತೆಯ ಇನ್ನೊಂದು ಬದಿ ಉಪ್ಪಿನಂಗಡಿ ಕಡೆಗೆ ಮುಖ ಮಾಡಿ ನಿಂತಿದೆ. ಮಾರುತಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next