Advertisement
ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ನದಿ ಪಾತ್ರದಲ್ಲಿ ಅಲ್ಲಲ್ಲಿ ಹಂಚಿ ಹರಿದುಹೋಗುತ್ತಾ ಆವಿಯಾಗುತ್ತಿದ್ದ ನೀರನ್ನು ನೀರಿನ ಸಂಪಿನ ಕಡೆಗೆ ಹರಿಸುವ ಮತ್ತು ನೀರಿನ ಒರತೆ ಇದ್ದು, ಹೂಳು ತುಂಬಿದ್ದ ಜಾಗದಲ್ಲಿ ಹೂಳು ತೆಗೆಯುವ ಕೆಲಸವನ್ನು ಪಂಚಾಯಿತಿ ವತಿಯಿಂದ ನಡೆಸಲಾಯಿತು.
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ನದಿಯಲ್ಲಿ ನೀರು ಹರಿವು ಕಡಿಮೆ ಆಗಿದ್ದು, ನದಿ ಪಾತ್ರದಲ್ಲಿ ಇರುವ ಮಂದಿ ನದಿಯಿಂದ ಅನಧಿಕೃತವಾಗಿ ಪಂಪು ಮೂಲಕ ನೀರು ತೆಗೆಯುತ್ತಿದ್ದಾರೆ. ಇದನ್ನು ನಿಲುಗಡೆಗೊಳಿಸಬೇಕು ಮತ್ತು ನದಿ ನೀರನ್ನು ಕುಡಿಯುವ ಸಲುವಾಗಿ ಮಾತ್ರ ಉಪಯೋಗಿಸುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಮಸ್ಯೆ ಬಾರದ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.