Advertisement

ಮೇಲ್ಮನೆ ಚುನಾವಣೆ: ಮತಗಟ್ಟೆಗಳ ಮಾಹಿತಿ ಪ್ರಕಟ

02:26 PM Jun 10, 2022 | Team Udayavani |

ಹಾವೇರಿ: ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿ ಸಿದಂತೆ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಸ್ಥಾಪಿಸಲಾದ ಒಟ್ಟು 26 ಮತಗಟ್ಟೆಗಳ ಪ್ರಸ್ತಾವನೆಗೆ ಚುನಾವಣಾ ಆಯೋಗ ಅನುಮೋದನೆ ನೀಡಿದೆ. ಮತಗಟ್ಟೆಗಳ ಪಟ್ಟಿಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಜಿಲ್ಲಾ ಧಿಕಾರಿಗಳ ಕಾರ್ಯಾಲಯ, ಉಪ ವಿಭಾಗಾಧಿಕಾರಿಗಳ ಕಾರ್ಯಾಲಯ, ತಹಶೀಲ್ದಾರ್‌ ಕಾರ್ಯಾಲಯ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಶಿಕ್ಷಣ ಇಲಾಖೆ ಮತ್ತು ಸಂಬಂಧಿಸಿದ ಮತಗಟ್ಟೆಗಳಲ್ಲಿ ಸಾರ್ವಜನಿಕರು ಮತ್ತು ಮತದಾರರ ಮಾಹಿತಿಗೆ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

Advertisement

ಮತಗಟ್ಟೆಗಳ ವಿವರ: ಶಿಗ್ಗಾವಿ ತಹಶೀಲ್ದಾರ್‌ ಕಚೇರಿ(ಶಿಗ್ಗಾವಿ ತಾಲೂಕಿನ ಭಾಗ ನಂ.38 ಹಾಗೂ 39 ಹೊರತುಪಡಿಸಿ ಉಳಿದ ಎಲ್ಲ ಮತದಾರರು), ದುಂಡಶಿ ಸರ್ಕಾರಿ ಗಂಡು ಮಕ್ಕಳ ಶಾಸಕರ ಮಾದರಿ ಶಾಲೆ (ದುಂಡಶಿ, ಹೊಸೂರ, ಕುನ್ನೂರ, ತಡಸ, ಯತ್ತಿನಹಳ್ಳಿ, ಶೀಲವಂತ ಸೋಮಾಪುರ ಗ್ರಾಮದ ಮತದಾರರು) ಬಂಕಾಪುರ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಶಾಲೆ(ಬಂಕಾಪುರ, ನಾರಾಯಣಪುರ, ಚಂದಾಪುರ, ಹುನಗುಂದ, ಹೊತನಹಳ್ಳಿ, ಕುಂದೂರ, ಕೋಣನಕೇರಿ ಮತ್ತು ಮುದ್ದಿನಕೊಪ್ಪ ಗ್ರಾಮದ ಮತದಾರರು).

ಸವಣೂರು ತಹಶೀಲ್ದಾರ್‌ ಕಚೇರಿ(ಸವಣೂರ ತಾಲೂಕಿನ ಎಲ್ಲ ಮತದಾರರು), ಹಾನಗಲ್ಲ ತಹಶೀಲ್ದಾರ್‌ ಕಚೇರಿ(ಹಾನಗಲ್ಲ ತಾಲೂಕಿನ ಭಾಗ ಸಂಖ್ಯೆ 42,43,44 ಹೊರತುಪಡಿಸಿ ಉಳಿದ ಗ್ರಾಮದ ಮತದಾರರು), ತಿಳವಳ್ಳಿ ಕನ್ನಡ ಗಂಡು ಮಕ್ಕಳ ಹಿರಿಯ ಮಾದರಿ ಶಾಲೆ (ತಿಳವಳ್ಳಿ, ಹೇರೂರ, ಇನಾಂಲಕಾ¾ಪುರ, ಶೇಷಗಿರಿ, ಗೊಂದಿ, ಕಲಗುಡ್ಡಿ, ಕಿರವಾಡಿ, ಕೂಸನೂರ, ಹಿರೇಬಾಸೂರ, ಉಪ್ಪುಣಸಿ, ಹಳ್ಳಿಬೈಲ್‌, ಕೆಲವರಕೊಪ್ಪ, ಮುಳಥಳ್ಳಿ, ಮಾಳಾಪೂರ, ಹೊಂಕಣ, ಕೊಪ್ಪಗೊಂಡನಕೊಪ್ಪ, ಕಲಕೇರಿ ಮತ್ತು ಕನ್ನೇಶ್ವರ ಗ್ರಾಮದ ಮತದಾರರು), ಅಕ್ಕಿಆಲೂರು-ನರಸಿಂಗರಾವ ದೇಸಾಯಿ ಪದವಿ ಪೂರ್ವ ಕಾಲೇಜು(ಅಕ್ಕಿಆಲೂರು, ನರೇಗಲ್ಲ, ಕೊಂಡೋಜಿ, ಆಡೂರು, ಮಕರವಳ್ಳಿ, ಚಿಕ್ಕಾಂಶಿ ಹೊಸೂರು, ಬಾಳಂಬೀಡ, ಕ್ಯಾಸನೂರು, ಕಂಚಿನೆಗಳೂರು, ಕಲ್ಲಾಪುರ, ಹಿರೇಹುಲ್ಲಾಳ, ಮಲಗುಂದ, ಇನಾಂಯಲ್ಲಾಪೂರ, ಯತ್ತಿನಹಳ್ಳಿ ಮ ಆಡೂರ, ಚಿಕ್ಕಹುಲ್ಲಾಳ, ಶಂಕ್ರಿಕೊಪ್ಪ, ಶ್ಯಾಡಗುಪ್ಪಿ ಮತ್ತು ಬಸಾಪೂರ ಮ ಆಡೂರ ಗ್ರಾಮದ ಮತದಾರರು), ಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ (ಬೊಮ್ಮನಹಳ್ಳಿ, ಬೆಳಗಾಲಪೇಟೆ, ಮಾರನಬೀಡ, ವರ್ದಿ, ಆಲದಕಟ್ಟಿ, ಕರಗುದರಿ, ನೆಲ್ಲಿಬೀಡ, ಬೈಚವಳ್ಳಿ, ಯಳವಟ್ಟಿ, ಕೂಡಲ, ಮಹಾರಾಜಪೇಟೆ, ಹುಲ್ಲತ್ತಿ, ಜಾನಗುಂಡಿಕೊಪ್ಪ, ಹನುಮಸಾಗರ, ಯಲಿವಾಳ, ಬೈಲವಾಳ, ಆರೇಗೊಪ್ಪ, ಬೆಳವತ್ತಿ, ಹುಣಸಿಕಟ್ಟಿ, ಕೊಪ್ಪರಸಿಕೊಪ್ಪ, ಚೀರನಹಳ್ಳಿ, ಸಾವಸಗಿ, ಹೋತನಹಳ್ಳಿ ಮತ್ತು ಮಾಸನಕಟ್ಟಿ ಗ್ರಾಮಗಳ ಮತದಾರರು).

ಹಾವೇರಿ ತಹಶೀಲ್ದಾರ್‌ ಕಚೇರಿ (ಹಾವೇರಿ ತಾಲೂಕಿನ ಭಾಗ ಸಂಖ್ಯೆ 46 ಹಾಗೂ 47 ಹೊರತುಪಡಿಸಿ ಉಳಿದ ಎಲ್ಲ ಮತದಾರರು), ಹೊಸರಿತ್ತಿ ಸರ್ಕಾರಿ ಮಾದರಿ ಕನ್ನಡ ಶಾಲೆ(ಹೊಸರಿತ್ತಿ ಹಳೆರಿತ್ತಿ, ಕಿತ್ತೂರ, ಯಲಗಚ್ಚ, ಹಂದಿಗನೂರು, ರಾಮಾಪುರ, ಕರ್ಜಗಿ, ಕೋಣನತಂಬಗಿ ಹಾಗೂ ಅಗಡಿ ಗ್ರಾಮದ ಮತದಾರರು), 47-ಗುತ್ತಲ ಕನ್ನಡ ಗಂಡು ಮಕ್ಕಳ ಹಿರಿಯ ಮಾದರಿ ಶಾಲೆ( ಗುತ್ತಲ, ಬಸಾಪೂರ, ಬೆಳವಿಗಿ, ಹಾವನೂರ, ಹಾಂವಶಿ, ಶಾಖಾರ, ಮೇವುಂಡಿ, ಕೇರಿಕೊಪ್ಪ, ಬರಡಿ, ಕುರಗುಂದ, ಮರೋಳ ಹಾಗೂ ದುಡಸಲಕೊಪ್ಪ, ನೆಗಳೂರ ಗ್ರಾಮಗಳ ಮತದಾರರು).

ಬ್ಯಾಡಗಿ ತಹಶೀಲ್ದಾರ್‌ ಕಚೇರಿ (ಬ್ಯಾಡಗಿ ತಾಲೂಕಿನ ಭಾಗ ಸಂಖ್ಯೆ 48ರ ಮತದಾರರು ಹೊರತುಪಡಿಸಿ ಉಳಿದ ಮತದಾರರು), ಕಾಗಿನೆಲೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆ( ಕಾಗಿನೆಲೆ, ಇಂಗಳಗೊಂದಿ, ನಾಗಲಾಪೂರ, ತಿಮಕಾಪುರ, ದಾಸನಕೊಪ್ಪ, ಕಾಸಂಬಿ, ಸಿದ್ದಾಪುರ, ಚಿಕ್ಕಳ್ಳಿ, ದುಮ್ಮಿಹಾಳ, ಚಿಕ್ಕಬಾಸೂರ, ಹೆಡ್ಡಿಗೊಂಡ, ಸೂಡಂಬಿ, ಘಾಳಪೂಜಿ, ಬನ್ನಿಹಳ್ಳಿ, ಬಡಮಲ್ಲಿ, ಕುಮ್ಮೂರು, ತಿಮ್ಮಾಪೂರ, ಹಿರೇಹಳ್ಳಿ, ಚಿನ್ನಿಕಟ್ಟಿ, ಕಳಗೊಂಡ, ತಿಪಲಾಪುರ, ಮತ್ತೂರು, ಕೆರವಡಿ, ನೆಲ್ಲಿಕೊಪ್ಪ, ಗುಡ್ಡದಮಲ್ಲಾಪೂರ, ಅತ್ತಿಕಟ್ಟಿ, ತುಮರಿಕೊಪ್ಪ, ಬೀರನಕೊಪ್ಪ, ತಡಸ, ಕಾಟೇನಹಳ್ಳಿ ಹಾಗೂ ಅಹಿರೇಅಣಜಿ ಗ್ರಾಮಗಳ ಮತದಾರರು).

Advertisement

ಹಿರೇಕೆರೂರು ತಹಶೀಲ್ದಾರ್‌ ಕಚೇರಿ (ಹಿರೇಕೆರೂರು ತಾಲೂಕಿನ ಭಾಗ ಸಂಖ್ಯೆ 51ರ ಮತದಾರರು ಹೊರತುಪಡಿಸಿ ತಾಲೂಕಿನ ಉಳಿದ ಮತದಾರರು), ಹಂಸಭಾವಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ(ಹಂಸಭಾವಿ, ಚಿಕ್ಕೆರೂರ, ಕೊಡ, ಮಡ್ನೂರು, ಕಚವಿ, ಅಬಲೂರು, ಚಿಕ್ಕೊಣತಿ, ಬೆಕೇರೂರ, ತಾಸೇನಹಳ್ಳಿ, ಭೋಗಾವಿ, ಹಾಗೂ ಯಲ್ಲಪೂರ ಗ್ರಾಮಗಳ ಮತದಾರರು), ರಟ್ಟಿಹಳ್ಳಿ ಆಂಗ್ಲ ಉರ್ದು ಪ್ರೌಢಶಾಲೆ(ರಟ್ಟಿಹಳ್ಳಿ, ಕುಡುಪಲಿ, ಶಿರಗಂಬಿ, ಕಡೂರು, ನೇಶ್ವಿ‌ ಹಾಗೂ ಮಾವಿನತೋಪ ಗ್ರಾಮಗಳ ಮತದಾರರು), ಮಾಸೂರು ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ(ಮಾಸೂರು, ಹಳ್ಳೂರು, ಅಣಜಿ, ಮೇದೂರು, ನೀಡನೆಗಿಲು, ಚಿಕ್ಕಬ್ಟಾರ ಮತ್ತು ನಾಗವಂದ ಗ್ರಾಮದ ಮತದಾರರು).

ರಾಣಿಬೆನ್ನೂರು ತಹಶೀಲ್ದಾರ್‌ ಕಚೇರಿ (ರಾಣಿಬೆನ್ನೂರ ತಾಲೂಕಿನ ಭಾಗ ಸಂಖ್ಯೆ 55, 56, 57, 58, 59, 60, 61 ಹಾಗೂ 62ರ ಮತದಾರರ ಹೊರತುಪಡಿಸಿ ತಾಲೂಕಿನ ಉಳಿದ ಮತದಾರರು), ಸುಣಕಲ್ಲಬಿದರಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಸುಣಕಲ್ಲಬಿದರಿ, ಹಲಗೇರಿ, ಬಿಲ್ಲಹಳ್ಳಿ, ಅಂತರವಳ್ಳಿ, ಹೆಡಿಯಾಲ, ಕುಸಗೂರ, ಆಲದಕಟ್ಟಿ, ಗುಡ್ಡದಹೊಸಳ್ಳಿ, ಜೋಯಿಸರ ಹರಹಳ್ಳಿ, ತಿರುಮಲದೇವರಕೊಪ್ಪ, ಉಕ್ಕುಂದ, ಸರವಂದಮ ಹಾರೋಗಪ್ಪ, ದಂಡಗಿಹಳ್ಳಿ ಮತ್ತು ನಿಟ್ಟೂರ ಗ್ರಾಮಗಳ ಮತದಾರರು), ಮೇಡ್ಲೆàರಿ ಸರ್ಕಾರಿ ಮಾದರಿ ಕೇಂದ್ರ ಶಾಲೆ(ಮೆಡ್ಲೇರಿ, ಅರೇಮಲ್ಲಾಪೂರ, ಹಿರೇಬಿದರಿ, ಯಕಲಾಸಪೂರ, ನದಿಹರಳಹಳ್ಳಿ, ಐರಣಿ, ಬೇಲೂರ ಮತ್ತು ಹೀಲದಹಳ್ಳಿ ಗ್ರಾಮಗಳ ಮತದಾರರು, ತುಮ್ಮಿನಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ(ತುಮ್ಮಿನಕಟ್ಟಿ, ಕುಪ್ಪೇಲೂರ, ಚಿಕ್ಕಮಾಗನೂರ, ಮೆಣಸಿನಹಾಳ, ಲಿಂಗದಹಳ್ಳಿ, ಕೋಟಿಹಾಳ, ಮಣಕೂರ, ಮಾಕನೂರ, ಹಿರೇಮಾಗನೂರ ಮತ್ತು ಮಾಳನಾಯಕನಹಳ್ಳಿ ಗ್ರಾಮದ ಮತದಾರರು), ಚಳಗೇರಿ ಸರ್ಕಾರಿ ಹಿರಿಯ ಮಾದರಿ ಶಾಲೆ(ಚಳಗೇರಿ, ಕರೂರ, ಖಂಡೇರಾಯನಹಳ್ಳಿ, ಕವಲೆತ್ತು, ಮಾಕನೂರ, ಮುದೇನೂರ, ಹೊಳೆ ಆನ್ವೇರಿ, ನಾಗೇನಹಳ್ಳಿ, ಎಣ್ಣಿಹೊಸಳ್ಳಿ, ಕಮದೋಡ ಮತ್ತು ಮಾಗೋಡ ಗ್ರಾಮಗಳ ಮತದಾರರು), ಕೋಡಿಯಾಲ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಕುಮಾರಪಟ್ಟಣಂ, ನಲವಾಗಲ, ಕೋಡಿಯಾಲ ಗ್ರಾಮಗಳ ಮತದಾರರು), ಹೊನ್ನತ್ತಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ( ಹೊನ್ನತ್ತಿ, ವೈ.ಟಿ.ಹೊನ್ನತ್ತಿ, ಗುಡಗೂರ, ಮೈದೂರ, ಗಂಗಾಪೂರ, ಚನ್ನಾಪು ತಾಂಡಾ, ಹರನಗಿರಿ, ದೇವರಗುಡ್ಡ, ಕುದರಿಹಾಳ, ಗುಡ್ಡಗುಡ್ಡಾಪೂರ, ಚಿಕ್ಕಕುರುವತ್ತಿ, ಚಿಕ್ಕಹರಳಹಳ್ಳಿ, ನೂಕಾಪುರ, ಕೆರಿಮಲ್ಲಾಪೂರ, ಯತ್ತಿನಹಳ್ಳಿ ಮತ್ತು ಹನುಮಾಪೂರ ಗ್ರಾಮಗಳ ಮತದಾರರು), ಇಟಗಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ಇಟಗಿ, ಕಮದೋಡ ಮತ್ತು ಹುಣಕಟ್ಟಿ ಗ್ರಾಮಗಳ ಮತದಾರರು) ಹಾಗೂ ಹನುಮನಮಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಹನುಮನಮಟ್ಟಿ, ಕಜ್ಜರಿ, ಕೂನಬೇವು, ಕಾಕೋಳ ಮತ್ತು ಅಸುಂಡಿ ಗ್ರಾಮಗಳ ಮತದಾರರು)ಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next