Advertisement

ಸಂತಾನೋತ್ಪತ್ತಿ ತಂತ್ರಜ್ಞಾನ ಗರಿಷ್ಠ ವಯೋಮಿತಿ ಪರಿಶೀಲಿಸಿ: ಕೇರಳ ಹೈಕೋರ್ಟ್‌

08:46 PM Jan 04, 2023 | Team Udayavani |

ಕೊಚ್ಚಿ: ಮಗುವನ್ನು ಹೊಂದುವ ಮೂಲಕ ಕುಟುಂಬವನ್ನು ವಿಸ್ತರಿಸುವ  ವೈಯಕ್ತಿಕ ಆಯ್ಕೆಯು ಮೂಲಭೂತ ಹಕ್ಕಾಗಿದೆ ಮತ್ತು ಇದಕ್ಕಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸುವುದು ನಿರ್ಬಂಧವಾಗಿದ್ದು, ಈ ಕುರಿತು ಪುನರ್‌ಅವಲೋಕನದ ಅಗತ್ಯವಿದೆ ಎಂದು ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಸಂತಾನೋತ್ಪತ್ತಿ ತಂತ್ರಜ್ಞಾನ ಮೂಲಕ ಮಗು ಹೊಂದಲು ಸೂಚಿಸಲಾದ ಗರಿಷ್ಠ ವಯಸ್ಸಿನ ಮಿತಿಯನ್ನು ಮರುಪರಿಶೀಲಿಸುವ ಅಗತ್ಯತೆಯ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯುವಂತೆ ರಾಷ್ಟ್ರೀಯ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ ಮತ್ತು ಬಾಡಿಗೆ ತಾಯ್ತನ ಮಂಡಳಿ (ಎನ್‌ಎಆರ್‌ಟಿಎಸ್‌ಬಿ)ಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿ.ಜಿ.ಅರುಣ್‌ ಅವರಿದ್ದ ನ್ಯಾಯಪೀಠ, ನಿಬಂಧನೆ ಬದಲಾವಣೆಗೆ ಅವಕಾಶವಿಲ್ಲದೆ ಗರಿಷ್ಠ ವಯಸ್ಸಿನ ನಿರ್ಬಂಧ ವಿಧಿಸುವುದು ತರ್ಕಬಾಹಿರ ಮತ್ತು ಅನಿಯಂತ್ರಿತ ಎಂದು ಹೇಳಿದೆ.

2021ರ ತಂತ್ರಜ್ಞಾನ ಆಧಾರಿತ ಸಂತಾನೋತ್ಪತ್ತಿ  (ನಿಯಂತ್ರಣ) ಕಾಯ್ದೆಯ ಅನುಸಾರ ಸಂತಾನೋತ್ಪತ್ತಿ ತಂತ್ರಜ್ಞಾನದ ಮೊರೆ ಹೋಗಲು ಮಹಿಳೆಯರಿಗೆ ಗರಿಷ್ಠ ವಯಸ್ಸು 50 ವರ್ಷ ಹಾಗೂ ಪುರುಷರಿಗೆ 55 ವರ್ಷ ನಿಗದಿಪಡಿಸಲಾಗಿದೆ. ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next