Advertisement
ರಾಜ್ಯದ ಭಾರತ್‌ಪುಳ ಹೊಳೆ ಸಹಿತ 21 ಹೊಳೆಗಳು ಮಲಿನಗೊಂಡಿವೆ ಎಂದು ವರದಿಯಲ್ಲಿ ಹೇಳಿದ್ದು ಹೊಳೆಯಲ್ಲಿ ಕೊಳಚೆ, ತ್ಯಾಜ್ಯ ಹರಿಯುತ್ತಿರುವುದರಿಂದ ಕೇರಳ ರಾಜ್ಯ ಸರಕಾರಕ್ಕೆ 14 ಕೋಟಿ ರೂ. ದಂಡ ಹೇರಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಲಿನಗೊಂಡಿರುವ ಹೊಳೆಗಳ ಯಾದಿಯಲ್ಲಿ ತಿರುವನಂತಪುರದ ಕರಮನಯಾರ್ ಹೊಳೆ ಪ್ರಥಮ ಸ್ಥಾನದಲ್ಲಿದೆ. ಸಂರಕ್ಷಣೆ ನಡೆಸಿದರೆ ಹೊಳೆಗಳನ್ನು ರಕ್ಷಿಸಬಹುದಾದ ವಿಭಾಗದಲ್ಲಿ ನಾಲ್ಕನೇ ಮತ್ತು ಐದನೇ ಯಾದಿಯಲ್ಲಿ ಇತರ 20 ಹೊಳೆಗಳನ್ನು ಸೇರ್ಪಡೆಗೊಳಿಸಲಾಗಿದೆ.
Related Articles
Advertisement
ಆಲುವಾ, ಎಲ್ಲೂರು, ಕಳಮಶೆÏàರಿಯಲ್ಲಿನ ರಾಸಾಯನಿಕ ವಸ್ತುಗಳ ಮಾಲಿನ್ಯ ಪೆರಿಯಾರ್‌ಗೆ ಬೆದರಿಕೆಯಾಗಿದೆ ಎಂದು ವರದಿಯಲ್ಲಿ ಸೂಚಿಸಿದೆ. ಹಲವು ಬಾರಿ ಮುನ್ನೆಚ್ಚರಿಕೆ ನೀಡಿದ್ದರೂ ಜೈವಿಕ ಹಾಗೂ ರಾಸಾಯನಿಕ ತ್ಯಾಜ್ಯ ಹೊಳೆಗಳಿಗೆ ಹರಿಯುತ್ತಿರುವುದು ಮುಂದುವರಿದಿದೆ. ಹೊಳೆಗಳು ಮಲಿನಗೊಳ್ಳುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು 2018ರಲ್ಲಿ ಟ್ರಿಬ್ಯೂನಲ್ ಸರಕಾರವನ್ನು ಒತ್ತಾಯಿಸಿತ್ತು. ಆದರೆ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರಕ್ಕೆ 14 ಕೋಟಿ ರೂ. ದಂಡ ಹೇರಿದೆ. ಹೊಳೆಗಳನ್ನು ಸಂರಕ್ಷಿಸಲು ಮಾಲಿನ್ಯಮುಕ್ತಗೊಳಿಸಲು ಕ್ರಮ ತೆಗೆದುಕೊಂಡು ಜಾರಿಗೆ ತಂದಲ್ಲಿ ದಂಡವನ್ನು ವಾಪಸು ಮಾಡಲಾಗುವುದೆಂದು ರಾಷ್ಟ್ರೀಯ ಹರಿತ ಟ್ರಿಬ್ಯೂನಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಯಾ ಯೋಜನೆ ಆವಿಷ್ಕರಿಸಲಾಗಿದೆಮಲಿನಗೊಂಡಿರುವ ಹೊಳೆಗಳನ್ನು ಸಂರಕ್ಷಿಸಲು ಕ್ರಿಯಾ ಯೋಜನೆಯನ್ನು ಆವಿಷ್ಕರಿಸಲಾಗಿದೆ. ಕರಮನಯಾರ್ ಹೊಳೆಯನ್ನು ರಕ್ಷಿಸುವ ಯೋಜನೆ ಯನ್ನು ರಾಷ್ಟ್ರೀಯ ಹರಿತ ಟ್ರಿಬ್ಯೂನಲ್‌ಗೆ ನೀಡಲಾಗಿದೆ. ಇತರ ಹೊಳೆಗಳನ್ನು ಶೀಘ್ರವಾಗಿ ನೀಡಲಾಗುವುದು.
– ಡಾ|ಅಜಿತ್ ಹರಿದಾಸ್, ಚೆಯರ್‌ಮನ್, ಮಾಲಿನ್ಯ ನಿಯಂತ್ರಣ ಮಂಡಳಿ ಮಲಿನಗೊಂಡ ಹೊಳೆಗಳು
ಕಾಸರಗೋಡು ಜಿಲ್ಲೆಯ ಉಪ್ಪಳ ಹೊಳೆ, ಕರಮನಯಾರ್, ಭಾರತ್‌ಪುಳ, ಕಡಂಬಯಾರ್, ಕೀಚೇರಿ, ಮಣಿಮಲ, ಪಂಬಾ, ಭವಾನಿ, ಚಿತ್ರಪ್ಪುಳ, ಕಡಲುಂಡಿ, ಕಲ್ಲಾಯಿ, ಕರುವನ್ನೂರು, ಕವ್ವಾಯಿ, ಕುಪ್ಪಂ, ಕುಟ್ಯಾಡಿ, ಮೇಪ್ರಾಲ್, ಪೆರಿಯಾರ್, ಪೆರುವಂಬ್, ಪುಳಯ್ಕಲ್, ರಾಮಪುರಂ, ತಿರೂರು.