Advertisement
ಕೆಲವೇ ವರ್ಷಗಳ ಹಿಂದೆ ಆರಂಭಗೊಂಡ ಉಪ್ಪಳ ಅಗ್ನಿಶಾಮಕ ದಳ ವಿವಿಧ ಸಮಸ್ಯೆ ಗಳಿಂದ ಸೊರಗುತ್ತಿದೆ. ಇಲ್ಲಿನ ಸಿಬಂದಿಗೂ ಸರಿಯಾದ ವ್ಯವಸೆœಯಿಲ್ಲ. ಇದರಿಂದಾಗಿ ಅವರೂ ಸಮಸ್ಯೆ ಎದುರಿಸುತ್ತಿದ್ದಾರೆ.
2010ರಲ್ಲಿ ಆರಂಭಗೊಂಡ ನಯಾಬಜಾರಿನ ಸೋಂಕಾಲ್ ಸಮೀಪದ ಫಯರ್ ಸ್ಟೇಶನ್‌ನಲ್ಲಿ ಎರಡು ಫಯರ್‌ಎಂಜಿನ್ ವಾಹನಗಳಿವೆ. ವಾಹನ ಚಾಲಕರು ಸಹಿತ ಒಟ್ಟು 7 ಮಂದಿ ಸಿಬಂದಿಯಿದ್ದಾರೆ. ಆದರೆ ವಾಹನ ನಿಲುಗಡೆಗೊಳಿಸಲು ಸೂಕ್ತ ವ್ಯವಸ್ಥೆಯಿಲ್ಲ. ಸುದೀರ್ಘ ಮುಂಗಾರಿನ ಸಮಯ ಅಗ್ನಿಶಮನ ವಾಹನಗಳ ಪಾರ್ಕಿಂಗ್ ಸ್ಥಳಕ್ಕೆ ಮಳೆ ನೀರು ನುಗ್ಗುತ್ತದೆ. ಕಚೇರಿ ಸಮೀಪವು ಮಳೆ ನೀರು ನಿಂತು ಅಧಿಕಾರಿಗಳು ಸಹಿತ ಸಿಬಂದಿ ಒಡಾಟಕ್ಕೆ ತೊಂದರೆಯಾಗುತ್ತಿದೆ.
Related Articles
Advertisement
ಇಲ್ಲಿನ ಸಿಬಂದಿಗೆ ಕ್ವಾರ್ಟರ್ಸ್ ವ್ಯವಸ್ಥೆಯಿಲ್ಲ. ಸೂಕ್ತ ಖಾಸಗಿ ಕೊಠಡಿ ವ್ಯವಸ್ಥೆಯೂ ಇಲ್ಲ. ಕಚೇರಿ ಸಮೀಪದಲ್ಲಿ ಕಾಡು ಪೊದೆಗಳು ಬೆಳೆದಿವೆ.
ಜನಪ್ರತಿನಿಧಿಗಳ ಅಸಡ್ಡೆಜನಪ್ರತಿನಿಧಿಗಳ ಅಸಡ್ಡೆ ಅಗ್ನಿ ಶಾಮಕ ಕಚೇರಿಯನ್ನು ಮೇಲ್ದರ್ಜೆಗೇರಿಸುವಲ್ಲಿ ಮುಳುವಾಗಿದೆ. ಫಯರ್ ಎಂಜಿನ್‌ಗಳು ನಿಲುಗಡೆಗೊಳ್ಳುವ ಸ್ಥಳವು ಶೀಟ್ ಹೊದಿಸಿದ ಮೇಲ್ಛಾವಣಿಯನ್ನು ಹೊಂದಿದ್ದು, ಮಳೆ ಗಾಳಿ ನೀರು ಎಂಜಿನ್‌ಗಳಿಗೆ ರಾಚಿ ನೆಲವು ಕೆಸರು ಗುಂಡಿಯಾಗುತ್ತಿದೆ. ಉತ್ತಮ ಫಯರ್ ಸ್ಟೇಶನ್ ನಿರ್ಮಾಣಕ್ಕೆ ಈ ಹಿಂದೆ ಹೊಸ ಸ್ಥಳವನ್ನು ಗೊತ್ತುಪಡಿಸಲಾಗಿದ್ದರೂ ಹಲವು ಕಾರಣಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ಕಚೇರಿಯು ಸಮಸ್ಯೆಗಳ ಮೂಲಕ ಅವಗಣನೆಗೆ ಒಳಗಾಗಿದೆ ಎನ್ನುತ್ತಾರೆ ಫಯರ್ ಸ್ಟೇಶನ್ ಅಧಿಕಾರಿಗಳು. ಸಲಕರಣೆಗಳಿಲ್ಲ
ಇತ್ತೀಚೆಗೆ ಉಪ್ಪಳ ನಯಾಬಜಾರಿನಲ್ಲಿ ನಡೆದ ಅಪಘಾತದಲ್ಲಿ ಐವರು ಸ್ಥಳದಲ್ಲೇ ಅಸುನೀಗಿದ್ದರು. ಬದುಕುಳಿದ ಮಂದಿ ವಾಹನದಲ್ಲಿ ಸಿಲುಕಿದ್ದರು, ಹಾನಿಗೊಂಡ ವಾಹನದಿಂದ ಬದುಕುಳಿದವರನ್ನು ಪಾರು ಮಾಡಲು, ನಜ್ಜುಗುಜ್ಜಾದ ವಾಹನದ ಡೋರ್ ತೆರೆ ಯುವ ಮತ್ತು ಕತ್ತರಿಸಲು ಸಹಾಯಕ ಉಪಕರಣಗಳು ಅಗ್ನಿ ಶಾಮಕ ಕಚೇರಿಯಲ್ಲಿ ಇರಲಿಲ್ಲ
ಕಷ್ಟಸಾಧ್ಯಸಮುದ್ರ ರಕ್ಷಣೆ ಸಹಿತ ಮಳೆಗಾಲದ ಅವಧಿಯಲ್ಲಿ ಸಂಭವಿಸುವ ಸಂಭಾವ್ಯ ಅವಘಡಗಳನ್ನು ತಪ್ಪಿಸುವ ಕಾರ್ಯ ಉಪ್ಪಳದ ಅಗ್ನಿಶಾಮಕ ದಳ ಸಿಬಂದಿಯಿಂದ ಕಷ್ಟಸಾಧ್ಯ. ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 2 ಕಿ.ಮೀ. ದೂರದ ಒಳ ಪ್ರದೇಶದಲ್ಲಿರುವ ಈ ಅಗ್ನಿಶಾಮಕ ದಳದ ಕೇಂದ್ರವನ್ನು 2010 ಎ.17ರಂದು ಅಂದಿನ ಗೃಹ ಖಾತೆ ಸಚಿವ ಕೊಡೆಯೇರಿ ಬಾಲಕೃಷ್ಣನ್ ಉದ್ಘಾಟಿಸಿದ್ದರು. ಇದು ಅಂದಿನ ಮಂಜೇಶ್ವರ ಶಾಸಕರಾಗಿದ್ದ ಸಿ. ಎಚ್. ಕುಂಞಂಬು ಅವರ ದೂರದರ್ಶಿ ಯೋಜನೆಯಾಗಿದೆ. ಗ್ಯಾರೇಜ್ ವ್ಯವಸ್ಥೆ ಇಲ್ಲ
ಸೂಕ್ತ ವ್ಯವಸ್ಥೆ ಮತ್ತು ಭದ್ರತೆ ಇಲ್ಲದ ಫಯರ್ ಸ್ಟೇಶನ್ ನಲ್ಲಿ ಗ್ಯಾರೇಜ್ ವ್ಯವಸ್ಥೆ ಇಲ್ಲ. ವಾಹನಗಳ ದುರಸ್ತಿಗೆ ಪೂರಕ ವಾಗುವ ಮೆಕ್ಯಾನಿಕಲ್ ಡಿವಿಶನ್ ಕೊರತೆಯಿದೆ. ಪ್ರಸ್ತುತ ಒಂದು ಆ್ಯಂಬುಲೆನ್ಸ್ ಹಾಗೂ ಎರಡು ಫಯರ್‌ಎಂಜಿನ್ ಇರುವ ಈ ಅಗ್ನಿ ಶಾಮಕ ಕೇಂದ್ರದಲ್ಲಿ ಮೂವರು ವಾಹನ ಚಾಲಕರು ಇದ್ದಾರೆ. ಒಟ್ಟಾರೆ 10 ಸಿಬಂದಿಯಿರಬೇಕಾದ ಕಚೇರಿಯು ಸೂಕ್ತ ಸಿಬಂದಿ ಕೊರ ತೆಯ ಕಾರಣದಿಂದ ಆಗಾಗ್ಗೆ ಸಮಸ್ಯೆಯ ಸುಳಿ ಯಲ್ಲಿ ಸಿಲುಕುತ್ತಿದೆ.