Advertisement

ಯುಎಇಯಲ್ಲೂ ಯುಪಿಐ ಪಾವತಿ ಅವಕಾಶ

01:14 AM Aug 22, 2021 | Team Udayavani |

ಮುಂಬಯಿ: ಸಂಯುಕ್ತ ಅರಬ್‌ ಅಮೀರ್‌ಶಾಹಿ (ಯುಎಇ)ಯಲ್ಲಿ ಭಾರತೀಯರಿಗೆ ಇನ್ನು ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಮೂಲಕ ಹಣ ಪಾವತಿ ಅವಕಾಶ ಸಿಗಲಿದೆ.

Advertisement

ಈ ಸಂಬಂಧ ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಶನ್‌ ಆಫ್ ಇಂಡಿಯಾ (ಎನ್‌ಪಿಸಿಐ)ಯ ಅಂತಾರಾಷ್ಟ್ರೀಯ ಅಂಗಸಂಸ್ಥೆ ಎನ್‌ಪಿಸಿಐ ಇಂಟರ್‌ನ್ಯಾಶನಲ್‌ ಪೇಮೆಂಟ್ಸ್‌ ಲಿ., ಯುಎಇಯ ಮಶ್ರೆಕ್‌ ಬ್ಯಾಂಕ್‌ ಜತೆಗೆ ಸಹಯೋಗ ರೂಪಿಸಿಕೊಂಡಿದೆ.

ಅಂತರ್‌ಬ್ಯಾಂಕ್‌ ಹಣಕಾಸು ವ್ಯವಹಾರಗಳನ್ನು ತತ್‌ಕ್ಷಣ ರಿಯಲ್‌ಟೈಮ್‌ನಲ್ಲಿ ನಿರ್ವ ಹಿಸಬಹುದಾದ ಯುಪಿಐ ವೇದಿಕೆಯನ್ನು ಎನ್‌ಪಿಸಿಐ ಅಭಿವೃದ್ಧಿ ಪಡಿಸಿದೆ. ಈ ಸಹಯೋಗದಿಂದ ವ್ಯಾಪಾರ ವ್ಯವಹಾರ, ಉದ್ಯೋಗ, ಪ್ರವಾಸ ಇತ್ಯಾದಿಗಾಗಿ ಯುಎಇಗೆ ಪ್ರಯಾಣಿಸುವ ಭಾರತೀಯರಿಗೆ ಯುಪಿಐ ಆಧಾರಿತ ಮೊಬೈಲ್‌ ಆ್ಯಪ್‌ಗಳ ಮೂಲಕ ಹಣ ಪಾವತಿ ಸಾಧ್ಯವಾಗಲಿದೆ ಎಂದು ಎನ್‌ಪಿಸಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next