ಹೊಸದಿಲ್ಲಿ: ಅಮೆರಿಕ, ಯು.ಕೆ. ಸಹಿತ ಹತ್ತು ರಾಷ್ಟ್ರಗಳಲ್ಲಿನ ಅನಿವಾಸಿ ಭಾರತೀಯರು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆ ಮೂಲಕ ಪಾವತಿಸಬಹುದು.
ಅದಕ್ಕಾಗಿ ಅವರು, ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಹೊಂದಿರಬೇಕು.
ಸಿಂಗಾಪುರ, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಹಾಂಕಾಂಗ್, ಒಮಾನ್, ಕತಾರ್, ಸೌದಿ ಅರೇಬಿಯಾ, ಯುಎಇ, ಯು.ಕೆ.ಯಲ್ಲಿ ಇರುವ ಎನ್‌ಆರ್‌ಐಗಳಿಗೆ ಅನುಕೂಲವಾಗಲಿದೆ. ಅದಕ್ಕಾಗಿ ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಎ.30ರ ವರೆಗೆ ಬ್ಯಾಂಕ್‌ಗಳಿಗೆ ಹೊಸ ನಿಯಮಗಳನ್ನು ಅಪ್‌ಲೋಡ್ ಮಾಡಲು ಅವಕಾಶವನ್ನೂ ನೀಡಿದೆ. ಅನಿವಾಸಿ ಭಾರತೀಯರು ಈ ಉದ್ದೇಶಕ್ಕಾಗಿ ನಾನ್ ರೆಸಿಡೆಂಟ್ ಎಕ್ಸ್‌ಟರ್ನಲ್ ಅಥವಾ ನಾನ್ ರೆಸಿಡೆಂಟ್ ಆರ್ಡಿನರಿ ಖಾತೆಗಳನ್ನು ಹೊಂದಿರಬೇಕು.