Advertisement
ಕುಕ್ಕೆ ಕ್ಷೇತ್ರವು ದೇಶದ ಮೂಲೆ ಮೂಲೆಗಳಿಂದ ಅಸಂಖ್ಯಾತ ಭಕ್ತರು, ಯಾತ್ರಿಕರನ್ನು ಆಕರ್ಷಿ ಸುವ ಪುಣ್ಯಕ್ಷೇತ್ರ. ಕ್ಷೇತ್ರ ವನ್ನು ತಲುಪಲು ಬಹು ತೇಕ ಮಂದಿ ರೈಲನ್ನು ಆಶ್ರಯಿಸುತ್ತಿದ್ದಾರೆ. . ಧರ್ಮಸ್ಥಳ ಮತ್ತು ಕುಕ್ಕೆ ಈ ಎರಡು ಕ್ಷೇತ್ರ ಸಂದ ರ್ಶಿಸಲು ಬೆಂಗಳೂರು – ಮೈಸೂರು – ಮಂಗಳೂರು ಭಾಗಗಳಿಂದ ರೈಲ್ವೇ ಮೂಲಕ ಆಗಮಿಸುತ್ತಾರೆ. ಬೆಂಗಳೂರು- ಮಂಗಳೂರು ಕೇರಳ ನಡುವೆ ಸಂಪರ್ಕಿಸುವ ರೈಲು ಮಾರ್ಗದಲ್ಲಿದೆ.
ನಿಲ್ದಾಣದಲ್ಲಿ ಸುಸಜ್ಜಿತ ವಿಶ್ರಾಂತಿ ಕೊಠಡಿ ಇಲ್ಲ. ಮೇಲ್ದರ್ಜೆಯಲ್ಲಿ ಪ್ರಯಾಣಿ ಸುವ ಪ್ರಯಾಣಿಕರಿಗೆ ಕಾಯುವ ಕೊಠಡಿ ಇಲ್ಲ. ಮಹಿಳಾ ವಿಶ್ರಾಂತಿ ಕೊಠಡಿಯೂ ಇಲ್ಲ. ನಿಲ್ದಾಣದ ದೂರವಾಣಿಯೂ ಕಾರ್ಯನಿರ್ವಹಿಸುತ್ತಿಲ್ಲ. ಮೊಬೈಲ್, ಇಂಟರ್‌ನೆಟ್ ವ್ಯವಸ್ಥೆಗಳು ಸೂಕ್ತವಾಗಿಲ್ಲ. ತತ್‌ಕ್ಷಣಕ್ಕೆ ಸಂಪರ್ಕ ಸಾಧ್ಯವಾಗುತ್ತಿಲ್ಲ.ಲೋ ವೋಲ್ಟೆಜ್ ಸಮಸ್ಯೆ, ಬೆಳಕಿನ ಸಮಸ್ಯೆಯೂ ಇದೆ. ಫೂಟ್ ಓವರ್ ಬ್ರಿಡ್ಜ್ ಇಲ್ಲ
ನಿಲ್ದಾಣದಲ್ಲಿ ಆರು ಲೈನ್‌ಗಳಿವೆ. ಮೂರನೆ ಲೈನ್‌ನಲ್ಲಿ ರೈಲು ನಿಂತರೆ ಪ್ರಯಾಣಿಕರು ಹಳಿ ದಾಟಿಯೇ ರೈಲು ಹತ್ತಬೇಕು. ಫೂಟ್‌ಓವರ್ ಬ್ರಿಡ್ಜ್ ಇಲ್ಲ. ಓವರ್ ಬ್ರಿಡ್ಜ್ ಇಲ್ಲದ್ದರಿಂದ ಒಂದು ರೈಲಿನ ಬೋಗಿಯ ಒಳಕ್ಕೆ ಹೋಗಿ ಹಳಿ ದಾಟಿ ಮುಂದಿನ ರೈಲಿಗೆ ಹೋಗಬೇಕು. ಈ ರೈಲ್ವೇ ನಿಲ್ದಾಣವನ್ನು ಜಲ್ಲೆಯ ಎರಡನೇ ಆರಂಭಿಕ ರೈಲ್ವೇ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ವಿಶಾಲ ಜಾಗವನ್ನು ರೈಲ್ವೇ ನಿಲ್ದಾಣ ಹೊಂದಿದೆ. ಬೋಗಿಗಳ ಸ್ವತ್ಛತೆ, ನೀರು ತುಂಬಿಸುವ ವ್ಯವಸ್ಥೆ, ಚಾಲಕ ಹಾಗೂ ಸಿಬಂದಿಗಳಿಗೆ ವಿಶ್ರಾಂತಿ ಕೊಠಡಿ ಇತ್ಯಾದಿಗಳನ್ನು ಒದಗಿಸಿ ಈ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದಲ್ಲಿ ಮಂಗಳೂರು ರೈಲ್ವೇ ನಿಲ್ದಾಣದ ಒತ್ತಡ ಕಡಿಮೆಯಾಗಲಿದೆ.
Related Articles
ಕೇಂದ್ರವನ್ನು ಮೇಲ್ದರ್ಜೆಗೇರಿಸಿದಲ್ಲಿ ಕುಕ್ಕೆ ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಿಂದ ವಾರಾಣಸಿ, ಮಡಂಗಾವ್, ತಿರುವನಂತಪುರ ಹೊಸ ರೈಲು ಬಂಡಿಗಳ ಓಡಾಟ ಆರಂಭಕ್ಕೂ ಅವಕಾಶವಾಗುತ್ತದೆ.
ಸುಬ್ರಹ್ಮಣ್ಯ ಕ್ರಾಸ್ ರೈಲು ನಿಲ್ದಾಣ – ಮಂಗಳೂರು ನಡುವೆ ಹೆಚ್ಚಿನ ರೈಲು ಓಡಾಟದ ಬೇಡಿಕೆಯೂ ಇದೆ. ಇದು ಈಡೇರಿದಲ್ಲಿ ಜಿಲ್ಲಾ ಕೇಂದ್ರಕ್ಕೆ ಸಂಚಾರ ಬೆಳೆಸಲು ಅನುಕೂಲವಾಗುತ್ತದೆ.
Advertisement
ಕೋಳಿ ಗೂಡಿನಂತಿದೆಸ್ಟೇಷನ್ ಮಾಸ್ಟರ್ ಕೊಠಡಿಯ ಒಂದು ಬದಿಯಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರ್ ಕೋಳಿ ಗೂಡಿನಂತಿದೆ. ರೈಲು ನಿಲ್ದಾಣಕ್ಕೆ ಸರಾಸರಿ ಒಂದು ಸಾವಿರ ಮಂದಿ ನಿತ್ಯ ಪ್ರಯಾಣಿಕರಿಂದ ತುಂಬಿದೆ. ನಿಲ್ದಾಣದಲ್ಲಿ ದಿನ ಬಾಡಿಗೆಗೆ ರೂಂಗಳನ್ನು ಬಾಡಿಗೆಗೆ ನೀಡುವ ವ್ಯವಸ್ಥೆ ಮಾಡಿದಲ್ಲಿ ಪ್ರಯಾಣಿಕರು ಸುಧಾರಿಸಿಕೊಂಡು ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರ ಸಂದರ್ಶನ ಮಾಡಿ ರಾತ್ರಿ ಮತ್ತೆ ಬಂದು ಆರಾಮವಾಗಿ ಪ್ರಯಾಣಿಸಬಹುದು. ರೈಲ್ವೇ ಇಲಾಖೆಗೆ ಇದರಿಂದ ಲಾಭವೂ ಹೆಚ್ಚುತ್ತದೆ. ಪ್ರಸ್ತುತ ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ಬೆಂಗಳೂರು, ಯಶವಂತಪುರ, ಕಾರವಾರ ಕಣ್ಣೂರು, ಮಂಗಳೂರು ಎಕ್ಸ್‌ಪ್ರೆಸ್ ಹಾಗೂ ಮಂಗಳೂರು-ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಓಡಾಟವಿದೆ. ಪ್ರತಿದಿನ ಗೂಡ್ಸ್ ರೈಲು ಸೇರಿದಂತೆ 9ರಿಂದ 10 ರೈಲುಗಳು ಸುಬ್ರಹ್ಮಣ್ಯದಿಂದ ಸಂಚರಿಸುತ್ತಿವೆ. ಸರ್ವೇ ನಡೆದಿತ್ತು
1964ರಲ್ಲಿ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣವಾಗಲು ಸರ್ವೇ ನಡೆದಿತ್ತು. ಜಾಗದ ಅಳತೆಯೂ ಆಗಿತ್ತು. ಆಗ ದೇವಸ್ಥಾನದ ಹತ್ತಿರ ರೈಲು ನಿಲ್ದಾಣವಾದಲ್ಲಿ ಕಳ್ಳರ ಕಾಟ ಹೆಚ್ಚಿ ಭದ್ರತೆಗೆ ತೊಡಕಾಗುತ್ತದೆ ಎಂದು 13 ಕಿ.ಮೀ. ದೂರದ ನೆಟ್ಟಣಕ್ಕೆ ವರ್ಗಾಯಿಸಲಾಗಿತ್ತು. ನೆಟ್ಟಣದಿಂದ ಸುಬ್ರಹ್ಮಣ್ಯಕ್ಕೆ ಹೊಸ ಟ್ರಾಕ್ ಎಳೆದು ಮಾರ್ಗ ವಿಸ್ತರಿಸಿದಲ್ಲಿ ಅನುಕೂಲ. ಬೆಂಗಳೂರು ಮಂಗಳೂರು ನಡುವೆ ದಿನಕ್ಕೆ ಹೆಚ್ಚಿನ ರೈಲುಗಳು ಓಡಾಟ ನಡೆಸುವುದು. ದೇಶದ ಮೂಲೆಮೂಲೆಗೆ ಸಂಪರ್ಕ ಕಲ್ಪಿಸುವ ಹೆಚ್ಚುವರಿ ರೈಲುಗಳನ್ನು ನೆಟ್ಟಣ ರೈಲು ನಿಲ್ದಾಣ ಮಾರ್ಗದ ಮೂಲಕ ಓಡಿಸುವುದು ಸಹಿತ ನಿಲ್ದಾಣಕ್ಕೆ ಆವಶ್ಯ ಮೂಲ ಸೌಕರ್ಯ ಒದಗಿಸಬೇಕಿದೆ. ಡಿ.ವಿ. ಮಂತ್ರಿಯಾಗಿದ್ದಾಗ ಚಿಗುರೊಡೆದಿತ್ತು
ಜಿಲ್ಲೆಯ ಡಿ.ವಿ. ಸದಾನಂದ ಗೌಡರು ದೇಶದ ರೈಲ್ವೇ ಮಂತ್ರಿಯಾದಾಗ ಕರ್ನಾಟಕದ ನನೆಗುದಿಗೆ ಬಿದ್ದಿದ್ದ ರೈಲ್ವೇ ಇಲಾಖೆಗೆ ಸಂಬಂಧಿಸಿದ ಹಲವು ಜನಪರ ಯೋಜನೆಗಳಿಗೆ ಜೀವ ಸಿಗುತ್ತದೆ. ಸುಧಾರಣೆಯಾತ್ತವೆ ಎನ್ನುವ ನಿರೀಕ್ಷೆ ಇತ್ತು. ನೆಟ್ಟಣ ರೈಲ್ವೇ ನಿಲ್ದಾಣ ಮೇಲ್ದರ್ಜೆಗೆ ಏರುತ್ತದೆ ಎನ್ನುವ ಆಶಾಭಾವನೆ ವ್ಯಕ್ತಗೊಂಡಿತ್ತು. ಬಳಿಕ ಅದು ಹುಸಿಯಾಯಿತು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತದ ಸರಕಾರ ಬಂದಿದೆ. ಸಂಸದರು ಸಹಿತ ಎಲ್ಲ ತಾಲೂಕುಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಎಲ್ಲರೂ ಸೇರಿ ಕೇಂದ್ರದ ಮೇಲೆ ಒತ್ತಡ ತಂದಲ್ಲಿ ನೆಟ್ಟಣ ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಲು ಕಷ್ಟವಾಗದು. ಜಿಲ್ಲೆಗೆ ಶೀಘ್ರ ರೈಲ್ವೇ ಸಚಿವರು
ಜಿಲ್ಲೆಗೆ ಕೇಂದ್ರ ರೈಲ್ವೇ ಸಚಿವರನ್ನು ಆಹ್ವಾನಿಸಿ ಈ ಭಾಗದ ರೈಲ್ವೇಗೆ ಸಂಬಂಧಿಸಿದ ಎಲ್ಲ ಸಮಸ್ಯೆ ನಿವಾರಿಸುವ ಬಗ್ಗೆ ಅಹವಾಲು ಸಲ್ಲಿಸಲಿದ್ದೇವೆ. ಈ ಬಗ್ಗೆ ಸುರೇಶ್ ಅಂಗಡಿ ಸಹಿತ ರಾಜ್ಯದ ಸಂಸದರ ಜತೆ ಚರ್ಚೆ ನಡೆಸಿದ್ದೇವೆ. ಅಧಿವೇಶನ ಮುಗಿದ ಬೆನ್ನಲ್ಲೇ ಸಚಿವರನ್ನು ಜಿಲ್ಲೆಗೆ ಕರೆತರುವ ಯತ್ನ ನಡೆಯುತ್ತದೆ. ನೆಟ್ಟಣ ನಿಲ್ದಾಣ ಮೇಲ್ದರ್ಜೆಗೆ ಸಹಿತ ವಾರಾಣಸಿಗೆ ಹೊಸ ರೈಲು ಓಡಾಟ ಬಗ್ಗೆಯೂ ಗಮನ ಹರಿಸಲಾಗುತ್ತಿದೆ.
– ಸಂಜೀವ ಮಠಂದೂರು , ಶಾಸಕರು, ಪುತ್ತೂರು ಬಾಲಕೃಷ್ಣ ಭೀಮಗುಳಿ