Advertisement

ಮೈಷುಗರ್‌ ಪ್ರೌಢ ಶಾಲೆಗೆ ಕಾಯಕಲ್ಪ

01:25 PM Oct 02, 2020 | Suhan S |

ಮಂಡ್ಯ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಐತಿಹಾಸಿಕ ಸರ್ಕಾರಿ ಮೈಷುಗರ್‌ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಗಳು ಹೊಸ ಕಾಯಕಲ್ಪ ನೀಡಲಾಗಿದ್ದು, 8,9ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ.

Advertisement

ಹಿರಿಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಂಘದಿಂದ ಶಾಲೆಗೆ ಅಗತ್ಯವಾದ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕಟ್ಟಡಗಳಿಗೆ ಬಣ್ಣ ಬಳಿಸುವ ಮೂಲಕ ಹೊರ ರೂಪ ನೀಡಲಾಗಿದೆ. ಇದರಜೊತೆಗೆ ಸುಸಜ್ಜಿತ ಶೌಚಾಲಯ, ಗ್ರಂಥಾಲಯ, ಕಂಪ್ಯೂಟರ್‌ಲ್ಯಾಬ್‌,ವಿಶಾಲಮೈದಾನಹೊಂದಿರುವ ಶಾಲೆಯಲ್ಲಿ ಈಗಾಗಲೇ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ, ಸುರಕ್ಷತೆ ಹಾಗೂ ಆಧುನಿಕತೆಯ ಉತ್ತಮ ತರಗತಿ ಕೊಠಡಿಗಳಿವೆ. ಬೆಂಗಳೂರು – ಮೈಸೂರು ಹೆದ್ದಾರಿಯ ಹೊಂದಿರುವ ಸುಮಾರು 40 ಎಕರೆ ವಿಸ್ತೀರ್ಣವುಳ್ಳ ಅತಿ ದೊಡ್ಡ ಶಾಲೆಯಾಗಿದೆ.

ದಾಖಲಾತಿಗೆ ಪ್ರಚಾರ: ಹಳೆಯ ವಿದ್ಯಾರ್ಥಿಗಳ ಸಂಘದಿಂದ ದಾಖಲಾತಿ ಹೆಚ್ಚಳಕ್ಕೆ ಸಭೆ ನಡೆಸಿ ತೀರ್ಮಾನಿಸಲಾಗಿದೆ. ಅದರಂತೆ ಶಾಲೆ ಶಿಕ್ಷಕರು, ಸಿಬ್ಬಂದಿ ಪ್ರತಿದಿನ ಸುತ್ತಮುತ್ತಲಿನ ಬಡಾವಣೆ, ಗ್ರಾಮ ಗಳಿಗೆ ತೆರಳಿ ದಾಖಲಾತಿ ಮಾಡಿಕೊÙಲು ‌Û ಪೋಷಕರ ಮನವೊಲಿಸಲು ಮುಂದಾಗಿದ್ದಾರೆ. ಇದರಿಂದ ಈಗಾಗಲೇ ಪೋಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದರೂ, ಕೋವಿಡ್ ಭೀತಿಗೆ ಹಿಂದೇಟು ಹಾಕುತ್ತಿದ್ದಾರೆ.

140ವಿದ್ಯಾರ್ಥಿಗಳ ದಾಖಲಾತಿ: ಪ್ರಸ್ತುತ ವರ್ಷ 140 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದರಲ್ಲಿ 102 ಬಾಲಕರು ಹಾಗೂ 38 ಬಾಲಕಿಯರು ಪ್ರವೇಶಾತಿ ಪಡೆದಿದ್ದಾರೆ. ಕಳೆದ 157 ವಿದ್ಯಾರ್ಥಿಗಳು ದಾಖಲಾಗಿದ್ದರು. ಕೋವಿಡ್ ದಿಂದ ದಾಖಲಾತಿ ಹೆಚ್ಚಳಕ್ಕೆ  ಕೊಂಚ ತೊಡಕಾಗಿದೆ.

ಖಾಸಗಿ ಶಾಲೆಯಿಂದ ಬರುತ್ತಿರುವ ವಿದ್ಯಾರ್ಥಿಗಳು: ಕೋವಿಡ್ ದಿಂದ ಆರ್ಥಿಕ ತೊಂದರೆಯಾಗಿರು ವುದರಿಂದ ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ, ಮೈಷುಗರ್‌ ಪ್ರೌಢಶಾಲೆಗೆ ದಾಖಲಿಸಲು ಪೋಷಕರು ಮುಂದಾಗಿದ್ದಾರೆ. ಆದರೆ, ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನೀಡಲು ಮುಂದಾಗುತ್ತಿಲ್ಲ. ಇದರ ಜೊತೆಗೆ ಬೆಂಗಳೂರು, ರಾಮನಗರ, ಚನ್ನಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದಾಖಲಾತಿಗೆ ಮುಂದಾಗಿದ್ದಾರೆ.

Advertisement

ಬಡ ವಿದ್ಯಾರ್ಥಿಗಳೇ ಹೆಚ್ಚು: ಶಾಲೆಗೆ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ನಗರದ ವಿವಿಧ ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಖಾಸಗಿ ಶಾಲೆಗಳು ಚೆನ್ನಾಗಿ ಓದುವ ಮಕ್ಕಳನ್ನು ದಾಖಲಾತಿ ಮಾಡಿಕೊಂಡು ಫ‌ಲಿತಾಂಶ ಹೆಚ್ಚಿಸಿಕೊಂಡರೆ, ಈ ಶಾಲೆಯಲ್ಲಿ ಓದದೇ ಇರುವ ಮಕ್ಕಳನ್ನು ದಾಖಲಾತಿ ಮಾಡಿಕೊಂಡು ಅವರ ವಿದ್ಯಾಭ್ಯಾಸ ಉತ್ತಮಪಡಿಸಲು ಶ್ರಮಿಸಲಾಗುತ್ತಿದೆ ಎಂದು ಶಿಕ್ಷಕಿ ಭಾಗ್ಯಲಕ್ಷ್ಮೀ ಹೇಳಿದರು.

30 ಕೊಠಡಿಗಳ ಸೌಲಭ್ಯ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ 30 ತರಗತಿ ಕೊಠಡಿಗಳಿರುವುದರಿಂದ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅನುಕೂಲವಾಗಿದೆ. ಒಂದು ಬೆಂಚ್‌ನಲ್ಲಿ ತಲಾ ಇಬ್ಬರಂತೆ ಕೂರಿಸಿ, ಬೋಧನೆ ಮಾಡುವ ಮೂಲಕ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಸದ್ಯ 6 ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಕ್ರಮ ವಹಿಸಲಾಗಿದೆ. ಇದರ ಜೊತೆಗೆ ಕ್ರೀಡಾ ಚಟುವಟಿಕೆ, ಯೋಗ, ವ್ಯಾಯಾಮ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ. ಕ್ರೀಡೆಯಲ್ಲಿವಿದ್ಯಾರ್ಥಿಗಳು ರಾಜ್ಯ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

2 ಸಾವಿರ ಮಕ್ಕಳ ಕಲಿಕೆಗೆ ಸೌಲಭ್ಯ : 1949ರಲ್ಲಿ ಬಿ.ಜಿ.ದಾಸೇಗೌಡ ಅವರು ಸ್ಥಾಪನೆ ಮಾಡಿದರು. ಇದಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕಕೆ.ಮರೀಗೌಡರು ಭದ್ರ ಬುನಾದಿ ಹಾಕಿದರು. ನಂತರ ಮೈಷುಗರ್‌ ಸಕ್ಕರೆಕಂಪನಿಯ ಆಡಳಿತದಲ್ಲಿ ಶಾಲೆ ನಡೆಯುತ್ತಿತ್ತು. ಇದರಿಂದ ಸುತ್ತಮುತ್ತಲಿನ ರೈತರು, ಬಡವರು,ಕೂಲಿ ಕಾರ್ಮಿಕರು ಸೇರಿದಂತೆ ಸುಮಾರು1500 ವಿದ್ಯಾರ್ಥಿ ಗಳಿಗೆ ಅನುಕೂಲವಾಗಿತ್ತು. ಈ ಶಾಲೆಯಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆ, ಸ್ಥಾನಗಳನ್ನು ಅಲಂಕರಿಸಿದ್ದಾರೆ. ನಂತರ ಮೈಷುಗರ್‌ ಕಾರ್ಖಾನೆಯ ದುರಾಡಳಿತದಿಂದ ಈ ಶಾಲೆಯ ಕೀರ್ತಿಯೂ ಕುಸಿಯ ತೊಡಗಿತ್ತು. ಹಳೆಯ ವಿದ್ಯಾರ್ಥಿಗಳಹಿರಿಯ ಚೇತನಗಳ ಮಾರ್ಗದರ್ಶನದಲ್ಲಿ ಪ್ರತೀ ವರ್ಷ ಹೊಸ ರೂಪ ಪಡೆದುಕೊಂಡು ನಡೆಯುತ್ತಿದೆ. ಪ್ರಸ್ತುತ2 ಸಾವಿರ ವಿದ್ಯಾರ್ಥಿಗಳು ಕಲಿಯಬಹುದಾದ ಸೌಲಭ್ಯ ಹೊಂದಿದೆ.

ಹಳೆಯ ವಿದ್ಯಾರ್ಥಿಗಳಿಂದ ದೇಣಿಗೆ :  ಹಿರಿಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಂಘವು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಹಿರಿಯ ವಿದ್ಯಾರ್ಥಿ ಎಚ್‌.ಹೊನ್ನಪ್ಪ ಅಧ್ಯಕ್ಷರಾಗಿದ್ದಾರೆ. ಮಿಮ್ಸ್‌ನ ಪ್ರಭಾರ ಅಧೀಕ್ಷಕ ಡಾ.ಶಿವಕುಮಾರ್‌ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಳೆಯ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸಿ, ಶಾಲೆ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಹಳೆಯ ವಿದ್ಯಾರ್ಥಿಗಳು ದೇಣಿಗೆ ನೀಡಿದ್ದಾರೆ.

ವಿದ್ಯಾಗಮ ತರಗತಿ :  ದಾಖಲಾಗಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಹಾಗೂ ವಿದ್ಯಾಗಮ ತರಗತಿ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿರುವ ಪ್ರದೇಶಗಳ ಬಗ್ಗೆ ನಕ್ಷೆ ತಯಾರಿಸಿಕೊಂಡು ಆಯಾ ಪ್ರದೇಶಗಳಿಗೆ ಭೇಟಿ ನೀಡಿ ಬೋಧನೆ ಮಾಡುತ್ತಿದ್ದಾರೆ. ಜೊತೆಗೆ ದಾಖಲಾತಿ ಹೆಚ್ಚಳಕ್ಕೂ  ಅಭಿಯಾನ ನಡೆಸುತ್ತಿದ್ದಾರೆ.

ಶಾಲೆ ದಾಖಲಾತಿ ಹೆಚ್ಚಳಕ್ಕೆ ಅಭಿಯಾನ ಆರಂಭಿಸಲಾಗಿದೆ. ಕೋವಿಡ್ ಇರುವುದರಿಂದ ದಾಖಲಾತಿಯಲ್ಲಿ ಕೊಂಚ ಕಡಿಮೆಯಾಗಿದೆ. ನಗರ, ಗ್ರಾಮೀಣ ಪ್ರದೇಶಗಳಿಗೆ ತೆರಳಿ ಪೋಷಕರ ಮನವೊಲಿಸಲಾಗುತ್ತಿದ್ದು, ಈ ಬಾರಿ ದಾಖಲಾತಿ ಹೆಚ್ಚುವ ನಿರೀಕ್ಷೆ ಇದೆ.ಫ‌ಲಿತಾಂಶ ಹೆಚ್ಚಳಕ್ಕೆ ವಿಶೇಷ ತರಗತಿ, ರಾತ್ರಿ ಬೋಧನೆ ಮಾಡಲಾಗುತ್ತಿದೆ.-ಟಿ.ಎಚ್‌.ವಿಶಾಲಾಕ್ಷಿ, ಮುಖ್ಯ ಶಿಕ್ಷಕಿ, ಮೈಷುಗರ್‌ ಪ್ರೌಢಶಾಲೆ

ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಶಾಲೆ ದುಸ್ಥಿತಿಗೆ ತಲುಪಿತ್ತು. ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರುವ ಶಾಲೆಯಾಗಿದೆ. ಪ್ರತಿ ವರ್ಷ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡುತ್ತಿದ್ದು,, ಶಾಲೆಯ ದಾಖಲಾತಿ ಹೆಚ್ಚಳಕ್ಕೆ ಸಭೆ ನಡೆಸಿ, ಶಾಲೆ ಉಳಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. – ಅಭಿಗೌಡ, ಹಳೇ ವಿದ್ಯಾರ್ಥಿ ಹಾಗೂ ಸಂಘದ ಸದಸ್ಯ

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next