Advertisement

ಇಂದು ಉಪ್ಪಿ ನಿರ್ದೇಶನದ ಚಿತ್ರಕ್ಕೆ ಮುಹೂರ್ತ: ಕುತೂಹಲ ಹೆಚ್ಚಿಸಿದ ಪೋಸ್ಟರ್

10:33 AM Jun 03, 2022 | Team Udayavani |

ನಿಮ್ಮ ನಿರ್ದೇಶನದ ಸಿನಿಮಾ ಯಾವಾಗ ಆರಂಭವಾಗುತ್ತದೆ? – ಹೀಗೊಂದು ಪ್ರಶ್ನೆ ಕಳೆದ ಏಳು ವರ್ಷಗಳಿಂದ ಉಪೇಂದ್ರ ಅವರಿಗೆ ಎಲ್ಲೇ ಹೋದರೂ ಎದುರಾಗುತ್ತಿತ್ತು. “ಉಪ್ಪಿಟ್ಟು’ ನಂತರ ಅವರ ಯಾವ ಸಿನಿಮಾವನ್ನು ನಿರ್ದೇಶನ ಮಾಡಿರಲಿಲ್ಲ. ಹಾಗಾಗಿ, ಈ ಪ್ರಶ್ನೆ ಸಹಜವಾಗಿಯೇ ಸಿನಿಪ್ರೇಮಿಗಳಲ್ಲಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಗುವ ದಿನ ಬಂದಿದೆ. ಉಪೇಂದ್ರ ನಿರ್ದೇಶನದ ಹೊಸ ಸಿನಿಮಾಕ್ಕೆ ಇಂದು ಮುಹೂರ್ತ ನಡೆಯುತ್ತಿದೆ. ಈ ಮೂಲಕ ಅಭಿಮಾನಿಗಳ ಬಹುದಿನಗಳ ಪ್ರಶ್ನೆಗೆ ತೆರೆಬಿದ್ದಂತಾಗಿದೆ.

Advertisement

ಉಪ್ಪಿ ನಿರ್ದೇಶನದ ಹೊಸ ಚಿತ್ರ ಇಂದು ಸೆಟ್ಟೇರುತ್ತಿದ್ದು, ನಟರಾದ ಕಿಚ್ಚ ಸುದೀಪ್‌, ದುನಿಯಾ ವಿಜಯ್‌, ಡಾಲಿ ಧನಂಜಯ್‌ ಸೇರಿದಂತೆ ಅನೇಕರು ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈ ಚಿತ್ರವನ್ನು ಜಿ.ಮನೋಹರನ್‌ ಹಾಗೂ ಕೆ.ಪಿ.ಶ್ರೀಕಾಂತ್‌ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:ಪಂಜಾಬಿ ಗಾಯಕ ಸಿಧು ಮೂಸೆವಾಲಾ ದೇಹ ಹೊಕ್ಕಿತ್ತು ಬರೋಬ್ಬರಿ 19 ಗುಂಡುಗಳು!

ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ವಿಭಿನ್ನ ಕಥಾಹಂದರದೊಂದಿಗೆ ಸಾಗಲಿದೆಯಂತೆ. ಈಗಾಗಲೇ ದಕ್ಷಿಣ ಭಾರತದಿಂದ “ಆರ್‌ಆರ್‌ಆರ್‌’, “ಕೆಜಿಎಫ್-2′, “ಪುಷ್ಪ’ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಉಪೇಂದ್ರ ನಿರ್ದೇಶನದ ಹೊಸ ಚಿತ್ರ ಕೂಡಾ ಎಲ್ಲಾ ಭಾಷೆಗಳಲ್ಲೂ ಸದ್ದು ಮಾಡಲಿದೆ ಎಂಬ ನಿರೀಕ್ಷೆಯೊಂದಿಗೆ ಇಂದು ಮುಹೂರ್ತ ಆಚರಿಸಿಕೊಳ್ಳುತ್ತಿದೆ. ಚಿತ್ರದ ನಾಯಕಿ ಸೇರಿದಂತೆ ಇತರ ತಾರಾಬಳಗ ಹಾಗೂ ತಾಂತ್ರಿಕ ವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next