Advertisement

ಉಪೇಂದ್ರ ಪೈ ಜನ್ಮದಿನಾಚರಣೆ ; ಸಚಿವ ಅಶ್ವ ತ್ಥನಾರಾಯಣರಿಂದ ಗತಕಾಲದ ಸ್ಮರಣೆ

01:02 AM Nov 27, 2022 | Team Udayavani |

ಉಡುಪಿ: ಆಧುನಿಕ ಮಣಿಪಾಲದ ನಿರ್ಮಾತೃಗಳಲ್ಲಿ ಹಿರಿಯರಾದ ತೋನ್ಸೆ ಉಪೇಂದ್ರ ಪೈಯವರ 128ನೇ ಜನ್ಮದಿನವನ್ನು ಆಚರಿಸಲಾಯಿತು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರು ಉಪೇಂದ್ರ ಪೈಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

Advertisement

ಮಣಿಪಾಲ ಸಂಸ್ಥೆ ಈಗ ಜಾಗತಿಕವಾಗಿ ಗುರುತಿಸಿಕೊಂಡಿದೆ. ನಾನೂ ಮಂಗಳೂರು ಕೆಎಂಸಿಯ ಪ್ರಾಕ್ತನ ವಿದ್ಯಾರ್ಥಿ. ಆಗ ಕಾಲೇಜು ವಿದ್ಯಾರ್ಥಿ ಸಂಘದ ಚುನಾಯಿತ ಅಧ್ಯಕ್ಷನೂ ಆಗಿದ್ದೆ. ಉಪೇಂದ್ರ ಪೈಯವರಂತಹ ಹಿರಿಯರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸ ವಾಗುತ್ತಿದೆ ಎಂದರು. ಇದೇ ದಿನ ಉಪೇಂದ್ರ ಪೈಯವರ ಪುತ್ರ, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈಯವರ ಜನ್ಮದಿನವೂ ಆಗಿರುವುದರಿಂದ ಸಚಿವರು ಸತೀಶ್‌ ಯು. ಪೈಯವರನ್ನು ಅಭಿನಂದಿಸಿದರು.

ಉದಯವಾಣಿ ಸಮೂಹಕ್ಕೆ ಮೆಚ್ಚುಗೆ
“ಉದಯವಾಣಿ’, “ತರಂಗ’ ಓದುತ್ತಾ ಬೆಳೆದಿರುವುದರ ಜತೆಗೆ ಇದರಿಂದ ಪ್ರಭಾವಿತನೂ ಆಗಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಸ್ತಂಭವಾಗಿ ಸಮಾಜಕ್ಕೆ ಧ್ವನಿ, ಶಕ್ತಿಯಾಗಿ, ಸಮಾಜವನ್ನು ಬೆಳೆಸುವ ಕೆಲಸ “ಉದಯವಾಣಿ’ ಮಾಡುತ್ತಿದೆ ಎಂದು ಸಚಿವ ಡಾ| ಅಶ್ವತ್ಥನಾರಾಯಣ ಶ್ಲಾಘಿಸಿದರು. ಮಣಿಪಾಲ ಎನರ್ಜಿ ಆ್ಯಂಡ್‌ ಇನಾ#†ಟೆಕ್‌ನ ಲಿಮಿಟೆಡ್‌ನ‌ ಎಂಡಿ ಮತ್ತು ಸಿಇಒ ಸಾಗರ್‌ ಮುಖೋಪಾಧ್ಯಾಯ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next