Advertisement

ಇಂದು ಉಪ್ಪಿ ಹ್ಯಾಪಿ ಬರ್ತ್‌ಡೇ: ಕಬ್ಜ ಟೀಸರ್‌ ನಿಂದ ಹೆಚ್ಚಾಯ್ತು ನಿರೀಕ್ಷೆ

09:14 AM Sep 18, 2022 | Team Udayavani |

ಇಂದು ಉಪೇಂದ್ರ ಅವರ ಹುಟ್ಟುಹಬ್ಬ. ಕಳೆದ ಮೂರು ವರ್ಷಗಳಿಂದ ಉಪೇಂದ್ರ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ, ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿರುವ ಉಪೇಂದ್ರ, ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಉಪ್ಪಿ ಅಭಿಮಾನಿಗಳು ಖುಷಿಯಾಗಿದ್ದಾರೆ.

Advertisement

ತಮ್ಮ ಹುಟ್ಟುಹಬ್ಬದ ದಿನ ಆಗಮಿಸುವ ಅಭಿಮಾನಿಗಳಿಗೆ ಉಪೇಂದ್ರ ಟಾಸ್ಕ್ ವೊಂದನ್ನು ನೀಡಿದ್ದಾರೆ. ಅದೇನೆಂದರೆ ಒಂದು ಹಾಳೆಯಲ್ಲಿ ಏನಾದರೊಂದು ಉತ್ತಮ ವಿಚಾರವನ್ನು ಬರೆದು ತರಬೇಕು. ಆ ಬರಹ 18 ಪದಗಳನ್ನು ಮೀರಬಾರದು… ಹೀಗೊಂದು ಟಾಸ್ಕ್ ಅನ್ನು ಅಭಿಮಾನಿಗಳಿಗೆ ಉಪೇಂದ್ರ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಉಪೇಂದ್ರ, “ವಿಚಾರವಂತರಾಗೋಣಾ.. ಇದೇ ಸೆಪ್ಟೆಂಬರ್‌ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್‌, ಹೂಗುಚ್ಚ ಗಿಫ್ಟ್ ಎಲ್ಲಾ ಬಿಟ್ಟು, ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು, ಉಪೇಂದ್ರ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಅವರ ಪ್ಯಾನ್‌ ಇಂಡಿಯಾ ಚಿತ್ರ “ಕಬj’ ಚಿತ್ರೀಕರಣ ಪೂರ್ಣಗೊಳಿಸಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ತೊಡಗಿಕೊಂಡಿದೆ. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಈ ಚಿತ್ರದ ಮೇಲೆ ಈಗಾಗಲೇ ನಿರೀಕ್ಷೆ ಹೆಚ್ಚಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಲ್ಲದೇ ಉಪೇಂದ್ರ ಅವರದ್ದೇ ನಿರ್ದೇಶನದ “ಯು-ಐ’ ಚಿತ್ರದ ಚಿತ್ರೀಕರಣ ಕೂಡಾ ಭರದಿಂದ ಸಾಗುತ್ತಿದೆ. ಜೊತೆಗೆ “ಬುದ್ಧಿವಂತ-2′, “ಲಗಾಮ್‌’ ಸಿನಿಮಾಗಳು ಕೂಡಾ ಚಿತ್ರೀಕರಣ ಮುಗಿಸಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next