Advertisement

ಏಳು ಭಾಷೆಗಳಲ್ಲಿ ಭಾಷೆಗಳಲ್ಲಿ ಡಬ್ಬಿಂಗ್‌ ಶುರು: ಅಖಾಡಕ್ಕೆ ಕಬ್ಜ

01:34 PM Jun 08, 2022 | Team Udayavani |

ಇತ್ತೀಚೆಗಷ್ಟೇ ಉಪೇಂದ್ರ ನಟನೆ, ನಿರ್ದೇಶನದ ಹೊಸ ಚಿತ್ರ ಸೆಟ್ಟೇರಿದೆ. ಈ ನಡುವೆಯೇ ಹಲವು ದಿನಗಳಿಂದ ಅಭಿಮಾನಿಗಳು ಕಾಯುತ್ತಿರುವ ಸಿನಿಮಾವೊಂದು ಮತ್ತೆ ಸದ್ದು ಮಾಡುತ್ತಿದೆ. ಅದು “ಕಬ್ಜ”.

Advertisement

ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರ ಈಗ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿದೆ. ಚಿತ್ರ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಂತೆ ಚಿತ್ರದ ಡಬ್ಬಿಂಗ್‌ ಕೂಡಾ ಏಳು ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯುತ್ತಿದೆ. ಈ ಮೂಲಕ ತೆರೆಗೆ ಬರಲು “ಕಬ್ಜ’ ಜೋರು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಪ್ರಾಣಿ ಪ್ರಿಯರ ಸೆಳೆಯುತ್ತಿದೆ ಚಾರ್ಲಿ

ಒಂದು ಹಾಡಿನ ಚಿತ್ರೀಕರಣ ಬಿಟ್ಟು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಅಂದಹಾಗೆ, ಇದು 1940ರ ಕಾಲಘಟ್ಟದ ಕಥೆಯಾಗಿದ್ದು, ಎಲ್ಲಾ ಭಾಷೆಯವರನ್ನು ಸೆಳೆಯುವ ಮಟ್ಟಕ್ಕೆ ಸಿನಿಮಾ ಮೂಡಿಬಂದಿರುವುದರಿಂದ ಚಿತ್ರತಂಡ ಖುಷಿಯಾಗಿದೆ. ಈಗಾಗಲೇ ಕನ್ನಡ ಚಿತ್ರರಂಗದಿಂದ ಬಿಡುಗಡೆಯಾದ “ಕೆಜಿಎಫ್-2′ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು ಗೊತ್ತೇ ಇದೆ. ಈಗ ಉಪೇಂದ್ರ ಅವರ “ಕಬ್ಜ’ ಕೂಡಾ ಪ್ಯಾನ್‌ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆ ಚಿತ್ರತಂಡದ್ದು.

ಇನ್ನು, ಈ ಚಿತ್ರದಲ್ಲಿ ಕಿಚ್ಚ ಸುದೀಪ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಚಿತ್ರದಲ್ಲಿ ಶ್ರೀಯಾ ಶರಣ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next