Advertisement
ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಧರ್ಮೇಂದ್ರ ಪ್ರಧಾನ್ ಇದನ್ನು ಬಿಡುಗಡೆಗೊಳಿಸಿದ್ದು, ಟೆಸ್ಟಿಂಗ್ ನಲ್ಲೂ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಎಂಟು ವರ್ಷಗಳ ಹಿಂದೆ ಪ್ರಧಾನಿ ಮೋದಿಯವರು ಡಿಜಿಟಲ್ ಇಂಡಿಯಾದ ಬಗ್ಗೆ ಹೇಳಿದ್ದರು. ಕೆಲವರು ಅದನ್ನು ಲೇವಡಿ ಮಾಡಿದ್ದರು. ಆದರೆ ಈಗ ತಾಂತ್ರಿಕ ತಜ್ಞರು, ನಾವೀನ್ಯತ ಪ್ರವೀಣರು, ಉದ್ಯಮಗಳು ಮತ್ತು ನೀತಿ ನಿರೂಪಕರು ಭಾರತದ ಶಕ್ತಿಯ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದರು.
ಈ ಆಪರೇಟಿಂಗ್ ಸಿಸ್ಟಂನ ಅಭಿವೃದ್ಧಿಗೆ ಕೇಂದ್ರ ಸರಕಾರವೇ ಸಂಪೂರ್ಣವಾಗಿ ಹಣ ವ್ಯಯಿಸಿದೆ. ಹೀಗಾಗಿ ಇದೊಂದು ಮುಕ್ತ ಸಾಫ್ಟ್ ವೇರ್ ಆಗಿದೆ. ಸರಕಾರ ಮತ್ತು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಇದನ್ನು ಬಳಸಬಹುದಾಗಿದೆ. ಅಲ್ಲದೆ ಸ್ಮಾರ್ಟ್ ಫೋನ್ ಉದ್ಯಮವು ಆ್ಯಂಡ್ರಾಯ್ಡ ಮತ್ತು ಐಒಎಸ್ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಸರಕಾರ ಇದನ್ನು ರೂಪಿಸಿದೆ. ಈ ಮೂಲಕ ಮುಂದಿನ ದಿನ ಗಳಲ್ಲಿ ಸ್ವದೇಶಿ ಸ್ಮಾರ್ಟ್ ಫೋನ್‌ಗಳ ತಯಾರಿಕೆಗೆ ದೊಡ್ಡ ವೇದಿಕೆ ಸಿಕ್ಕಂತಾಗಿದೆ. ಇದನ್ನು ಜಾಂಡ್‌ಕೆಆಪರೇಶನ್ಸ್ ಪ್ರೈ.ಲಿ.ನ ವರು ರೂಪಿಸಿದ್ದಾರೆ. ಇದಕ್ಕೆ ಐಐಟಿ ಮದ್ರಾಸ್‌ನ ಸೆಕ್ಷನ್ 8 ಕಂಪೆನಿ ಸಹಕಾರ ನೀಡಿದೆ.