Advertisement

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಯುಪಿಎ ಸರಕಾರ ಹೊಣೆ: ಶೋಭಾ

06:10 AM Sep 19, 2017 | |

ಕಾಪು: ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಯೋಜನೆಗಾಗಿ ಅವೈಜ್ಞಾನಿಕ ಮಾದರಿಯ ಡಿ.ಪಿ.ಆರ್‌. ಸರ್ವೇ ನಡೆದಿದ್ದು, ಅದರಿಂದಾಗಿಯೇ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿಯ ಈಗಿನ ಅವ್ಯವಸ್ಥೆಗೆ ಯುಪಿಎ ಸರಕಾರವೇ ನೇರ ಹೊಣೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

Advertisement

ರಾ.ಹೆ. 66ರ ಕಟಪಾಡಿ ಮತ್ತು ಉದ್ಯಾವರದಲ್ಲಿನ ಅವ್ಯವಸ್ಥೆ ಯಿಂದಾಗಿ ಜನ ಎದುರಿಸುತ್ತಿರುವ ತೊಂದರೆ ಗಳ ಬಗ್ಗೆ ಅಹವಾಲು ಮತ್ತು ದೂರು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ರಾ.ಹೆ. ಕಾಮಗಾರಿಗೆ ಯಾವ ಆಧಾರದಲ್ಲಿ ಸರ್ವೇ ನಡೆದಿದೆ, ಯಾವ ಆಧಾರದಲ್ಲಿ ಸರ್ವೀಸ್‌ ರಸ್ತೆ, ಡೈವರ್ಷನ್‌, ಅಂಡರ್‌ ಪಾಸ್‌ ನೀಡ ಲಾಗಿದೆ ಎನ್ನುವುದೇ ತಿಳಿಯುತ್ತಿಲ್ಲ. ಇಲ್ಲಿನ ಸಮಸ್ಯೆ ಬಲು ಗಂಭೀರವಾಗಿದ್ದು ಈ ಬಗ್ಗೆ ಹೆದ್ದಾರಿ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಪ್ರಯತ್ನಿ ಸುವು ದಾಗಿ ಅವರು ಭರವಸೆ ನೀಡಿದರು.

ಹೆದ್ದಾರಿ ಕಾಮಗಾರಿಯಲ್ಲಿನ ಲೋಪದೋಷಗಳು, ಸರ್ವೀಸ್‌ ರಸ್ತೆಯಲ್ಲಿನ ಗೊಂದಲ ಗಳಿಂದಾಗಿ ಜನ ಪ್ರಾಣ ಬಿಡು ವಂತಾಗಿದೆ. ಕಟಪಾಡಿ ಯಲ್ಲಿ ಅಂಡರ್‌ ಪಾಸ್‌ ಅಥವಾ ಓವರ್‌ ಬ್ರಿಡ್ಜ್ ರಚನೆ ಯಾಗು ವುದು ಅತ್ಯಗತ್ಯವಾಗಿತ್ತು. ಕನಿಷ್ಠಪಕ್ಷ ಸರ್ಕಲ್‌ ಆದರೂ ನಿರ್ಮಾಣ ವಾಗ ಬೇಕಿತ್ತು. ಈ ನಿಟ್ಟಿನಲ್ಲಿ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಗುತ್ತಿಗೆದಾರರೊಂದಿಗೆ ಸಮಾ ಲೋಚಿಸಿ ಜನರ ಸಮಸ್ಯೆ ಪರಿ ಹಾರಕ್ಕೆ ಪ್ರಾಮಾಣಿಕವಾಗಿ ಪ್ರಯ ತ್ನಿ ಸುವುದಾಗಿ ಭರವಸೆ ನೀಡಿದರು.

ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಬಿಜೆಪಿ ಗ್ರಾಮ ಸಮಿತಿ, ರಿಕ್ಷಾ ಚಾಲಕ-ಮಾಲಕರು, ಟೆಂಪೋ ಚಾಲಕ-ಮಾಲಕರು ಮತ್ತು ಸ್ಥಳೀಯ ನಾಗರಿಕರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ನೀಡಿದರು.

Advertisement

ಉಡುಪಿ ಜಿ.ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ತಾ.ಪಂ. ಸದಸ್ಯರಾದ ರಾಜೇಶ್‌ ಕುಮಾರ್‌, ನಾಗೇಶ್‌ ಪೂಜಾರಿ, ಮುಖಂಡರಾದ ಕಟಪಾಡಿ ಶಂಕರ ಪೂಜಾರಿ, ಲಾಲಾಜಿ ಮೆಂಡನ್‌, ಸುರೇಶ್‌ ಶೆಟ್ಟಿ ಗುರ್ಮೆ, ಶ್ಯಾಮಲಾ ಕುಂದರ್‌, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ವೀಣಾ ಶೆಟ್ಟಿ, ಮುರಳೀಧರ ಪೈ ಹಾಜರಿದ್ದರು.

ಮಾಡಿದ್ದು  ಅವರು; ದೂರುವುದು ನಮ್ಮನ್ನು
ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಕರಾವಳಿಯ ಪ್ರಭಾವೀ ಮತ್ತು ಅಂದಿನ ಕೇಂದ್ರ ಸಚಿವ ರಾದ ಆಸ್ಕರ್‌ ಫೆರ್ನಾಂಡಿಸ್‌ ಅವರು ಕೆಲವೊಂದು ಕಟ್ಟಡಗಳನ್ನು ಉಳಿಸಲು ಮತ್ತು ತಮ್ಮವರನ್ನು ಮೆಚ್ಚಿ ಸುವ ಉದ್ದೇಶದೊಂದಿಗೆ ತಮಗೆ ಬೇಕಾದ ರೀತಿಯಲ್ಲಿ ಹೆದ್ದಾರಿ ರಚನೆಯ ಡಿಪಿಆರ್‌ನ್ನು ನಡೆಸಿ ದ್ದರು. ಆದರೆ ಈಗ ಅದಕ್ಕೆ ನಮ್ಮನ್ನು ಹೊಣೆಗಾರರನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next