Advertisement
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ತವರು ರಾಜ್ಯ ಗುಜರಾತ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಳಿಕವೂ ಲೋಕಾಯುಕ್ತ ಅನುಷ್ಠಾನಕ್ಕೆ ಬಂದಿಲ್ಲ. ಮೋದಿ ಸರಕಾರ ಬಂದ ಬಳಿಕ ನಳಿನ್ ಅವರಿಂದ ಯಾವುದೇ ಯೋಜನೆಗಳು ಜಾರಿ ಆಗಿಲ್ಲ, ಮಂಗಳೂರಿನಲ್ಲಿದ್ದ ಮಜ್‌ಗನ್‌ಡಾಕ್ ಮುಂಬೈಗೆ ಸ್ಥಳಾಂತರ ಮಾಡಿದವರು ಯಾರು. ವಿಜಯ ಬ್ಯಾಂಕ್ ರಾಷ್ಟ್ರೀಕರಣ ಆಗುವಾಗ ನಳಿನ್ ಯಾಕೆ ಪ್ರಶ್ನಿಸಿಲ್ಲ ಎಂದರು.
ಯುಪಿಎ ಸರಕಾರ ಮತದಾರರಿಗೆ ನೀಡಿದ ಎಲ್ಲ ಭರವಸೆ ಈಡೇರಿಸಿದೆ. ಈಗ ಪ್ರತೀ ವ್ಯಕ್ತಿಗೆ 72 ಸಾವಿರ ರೂ., ಅಂದರೆ ತಿಂಗಳಿಗೆ 6 ಸಾವಿರದಂತೆ ನೀಡಲು ಪ್ರಣಾಳಿಕೆಯಲ್ಲಿ ಘೋಷಿಸಿದೆ. ಮೋದಿ ಸರಕಾರ ಘೋಷಿಸಿದ 6 ಸಾವಿರದಲ್ಲಿ ಮೂರು ಕಂತಿನ ಕನಿಷ್ಠ 2ಸಾವಿರ ಯಾವ ಖಾತೆಗಾದರೂ ಬಂದಿದೆಯೇ. ಎನ್‌ಡಿಎ ಸರಕಾರ ನೀಡಿದ ಭರವಸೆಗಳು ಅನುಷ್ಠಾನಕ್ಕೆ ಬರಲಿಲ್ಲ. ಬಿಎಸ್‌ಎನ್‌ಎಲ್ ಕಾರ್ಮಿಕರು ಈಗಲೂ ಸಂಬಳ ಇಲ್ಲದೆ ದುಡಿಯುತ್ತಿದ್ದಾರೆ ಎಂದರು. ನನ್ನಲ್ಲಿರುವ ಒಂದಿಂಚು ಜಾಗವೂ ಹಿರಿಯರಿಂದ ಬಂದದ್ದಲ್ಲ. ಖರೀದಿಸಿ ಪಡೆದುದಾಗಿದೆ. ನನ್ನ ಮೇಲೆಯೇ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಐಟಿ ರೈಡ್ ಕೇಸ್ ಆಗಿದೆ. ಪಕ್ಷದ ಕಾರ್ಯಕರ್ತ ವ್ಯಕ್ತಿಗಳ ಮೇಲೆ ಆಗಿದೆ. ದೇಶದ ಭದ್ರತೆ ವಿಚಾರದಲ್ಲಿ ಯುಪಿಎ ರಾಜಿ ಮಾಡಿಲ್ಲ ಎಂದರು.
ಎನ್‌ಡಿಎ ಸರಕಾರವು ಸ್ವಾಯತ್ತ ಸಂಸ್ಥೆಗಳಾದ ಆರ್‌ಬಿಐ, ಸಿಬಿಐಯನ್ನು ನಿಷ್ಕ್ರಿಯ ಮಾಡಿದ್ದಾರೆ. ವಿದೇಶದ ಕಪ್ಪು ಹಣ ತರಲು ಸಾಧ್ಯವಾಗಿಲ್ಲ ಎಂದರು.
Related Articles
ಕಾಂಗ್ರೆಸ್ ಯುವಕರಿಗೆ ಆದ್ಯತೆ ನೀಡುವ ಮೂಲಕ ಮಿಥುನ್ ರೈ ಅವರಿಗೆ ಲೋಕಸಭಾ ಅಭ್ಯರ್ಥಿಯಾಗಿ ಅವಕಾಶ ಮಾಡಿಕೊಟ್ಟಿದೆ. ಅವರು ವಿದ್ಯಾರ್ಥಿ ನಾಯಕರಾಗಿ ವಿವಿಧ ಹುದ್ದೆಗಳನ್ನು, ಯುವ ನೇತಾರನಾಗಿ ಪಕ್ಷದ ಪದಾಧಿಕಾರವನ್ನು ನಿರ್ವಹಿಸಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿಯನ್ನು ಮತದಾರರು ಸೋಲಿಸಬೇಕು. ಎ. 11ರಂದು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯ ಬಿ.ಸಿ. ರೋಡ್ ಬಂಟ್ವಾಳದಲ್ಲಿ ರೋರ್ ಶೋ ಪ್ರಚಾರ ನಡೆಸಲಾಗುವುದು ಎಂದರು.
Advertisement
ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ. ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ತಾ.ಪಂ. ಸದಸ್ಯ ಕೆ. ಸಂಜೀವ ಪೂಜಾರಿ, ನಿಕಟಪೂರ್ವ ಬ್ಲಾಕ್ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಅಬ್ಟಾಸ್ ಅಲಿ, ಸದಾಶಿವ ಬಂಗೇರ, ಜಗದೀಶ ಕೊçಲ ಮತ್ತಿತರರಿದ್ದರು.