ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಣಿಪುರದಲ್ಲಿ ಜಾತಿ, ಧರ್ಮ ಸಂಘರ್ಷ ನಡೆಯುತ್ತಲಿದೆ. ಹಿಂದಿನ ಸರಕಾರಗಳ ತಪ್ಪುಗಳ ಕಾರಣದಿಂದ ಇದೆಲ್ಲ
ನಡೆಯುತ್ತಿದೆ. ಬೇರೆ ದೇಶದ ನುಸುಳುಕೋರರು ದೊಡ್ಡ ಪ್ರಮಾಣದಲ್ಲಿ ಈಶಾನ್ಯ ಭಾಗದಲ್ಲಿದ್ದಾರೆ. ಅವರನ್ನೆಲ್ಲ ಹೊರ ಹಾಕುವ ಕೆಲಸವನ್ನು ಕೇಂದ್ರ ಸರಕಾರ ನಿರಂತರವಾಗಿ ಮಾಡುತ್ತಲಿದೆ. ಇಂತಹ ಸಂದರ್ಭದಲ್ಲಿ ಸಹಜವಾಗಿ ಆಕ್ರೋಶ, ಸಂಘರ್ಷ ನಡೆಯುತ್ತಲಿರುತ್ತದೆ ಎಂದರು.
Advertisement
ಈಶಾನ್ಯದ ಎಲ್ಲ ರಾಜ್ಯಗಳನ್ನು ಹಿಂದಿನ ಯುಪಿಎ ಮತ್ತು ಕಾಂಗ್ರೆಸ್‌ಸರಕಾರ ನಿರ್ಲಕ್ಷಿಸಿತ್ತು. ಆ ಭಾಗದ ಜನರಲ್ಲಿ ಅವರನ್ನು ಭಾರತೀಯ ರೆಂದು ಒಪ್ಪಿಕೊಳ್ಳುವ ಮಾನಸಿಕತೆ ಇರಲಿಲ್ಲ. ಈಗ ಆ ಎಲ್ಲ ರಾಜ್ಯಗಳ ಜನರು ಭಾರತ ನಮ್ಮದೆಂದು ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲಿ ಈಗ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಲಿವೆ. ಮೊದಲ ಬಾರಿಗೆ ಕೇಂದ್ರ ಸರಕಾರದ ಯೋಜನೆಗಳನ್ನು ಅವರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವರು ವಿದ್ರೋಹಿ ಚಟುವಟಿಕೆ ನಡೆಸುವುದಕ್ಕೆ ಅಲ್ಲಿಗೆ ಬರುತ್ತಿದ್ದಾರೆ. ಅಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.
ಕರ್ನಾಟಕದಲ್ಲಿ ವಿಪಕ್ಷ ನಾಯಕನ ಆಯ್ಕೆ ಆದಷ್ಟು ಬೇಗ ನಡೆಯುತ್ತದೆ. ಕಾಂಗ್ರೆಸ್‌ನವರು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದರು. ಕರ್ಮಯೋಗಿಗಳು ಪ್ರಧಾನಿಗಳು ಕಳೆದ 6 ಕಂತು ಗಳಲ್ಲಿ ಕೇಂದ್ರದ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗ ಕೊಡುವ ಕೆಲಸ ಆರಂಭಿಸಿದ್ದಾರೆ. ಆರು ಉದ್ಯೋಗ ಮೇಳಗಳಲ್ಲಿ 4.30 ಲಕ್ಷ ಮಂದಿಗೆ ಉದ್ಯೋಗ ಕೊಡಲಾಗಿದೆ. ಕೆಲಸಕ್ಕೆ ಸೇರುವವರು ಕೇವಲ ಉದ್ಯೋಗಿಗಳಲ್ಲ, ಕರ್ಮಯೋಗಿಗಳು. ಅವರೆಲ್ಲ ದೇಶಕ್ಕಾಗಿ ದುಡಿದು ಭಾರತವನ್ನು ನಂಬರ್ ಒನ್ ಮಾಡಲು ಶ್ರಮಿಸಬೇಕು ಎಂದರು.