Advertisement
ಮಹಿಳೆಗೆ ಆಕೆಯ ಪತಿ ತ್ರಿವಳಿ ತಲಾಕ್ ನೀಡಿದ್ದ. ಅನಂತರ ಆಕೆ ಬೇರೊಬ್ಬ ವ್ಯಕ್ತಿಯನ್ನು ಮೂರು ತಿಂಗಳ ಮಟ್ಟಿಗೆ ಮದುವೆಯಾಗಿದ್ದಳು.
Related Articles
Advertisement
ಮುಸ್ಲಿಂ ಪುರುಷರು ಶರಿಯಾ ಕಾನೂನಿನ ಪ್ರಕಾರ ತಮ್ಮ ಪತ್ನಿಗೆ ತ್ರಿವಳಿ ತಲಾಕ್ ನೀಡಿ ಅನಂತರ ಆಕೆಯನ್ನು ನಿಕಾ ಹಲಾಲಾ ನೆಪದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸುವ ಹಲವಾರು ಪ್ರಕರಣಗಳು ನಡೆದಿದ್ದು ಇದೀಗ ಇದು ತಾಜಾ ಪ್ರಕರಣವಾಗಿದೆ. ಅಂತೆಯೇ ಅನೇಕ ಮುಸ್ಲಿಂ ಮಹಿಳಾ ಹಕ್ಕು ಸಂಘಟನೆಗಳು ತ್ರಿವಳಿ ತಲಾಖ್ ನಿಷೇಧಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಕಾನೂನನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.
ತಮ್ಮ ಪತ್ನಿಗೆ ತ್ರಿವಳಿ ತಲಾಕ್ ನೀಡುವ ಮುಸ್ಲಿಂ ಪುರುಷರಿಗೆ ಹೊಸ ಕಾನೂನಿನಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಮುಸ್ಲಿಮ್ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಹೆಸರಿನ 2017ರ ಮಸೂದೆಯನ್ನು ಸಂಸತ್ತು 2017ರ ಡಿಸೆಂಬರ್ 28ರಂದು ಪಾಸು ಮಾಡಿದೆ.