ಉತ್ತರಪ್ರದೇಶ : ಶಿಕ್ಷಕರೊಬ್ಬರು ಮನೆಯಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನಡೆಸುತ್ತಿರುವ ವೇಳೆ ದುಷ್ಕರಿಗಳ ತಂಡವೊಂದು ಶಿಕ್ಷಕನ ಕತ್ತು ಹಿಸುಕಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ.
ಮೃತ ಶಿಕ್ಷಕನನ್ನು ಕೃಷ್ಣ ಕುಮಾರ್ ಯಾದವ್(35) ಎನ್ನಲಾಗಿದೆ.
ಅಂಬೇಡ್ಕರ್ನಗರ ಜಿಲ್ಲೆಯವರಾದ ಯಾದವ್ ಅವರು ಉತ್ತರ ಪ್ರದೇಶದ ಗೊಂಡಾದ ಫೋರ್ಬ್ಸ್ಗಂಜ್ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದ್ದು ಕಳೆದ ಶನಿವಾರ ಸಂಜೆ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಬಳಸಿ ವಿಡಿಯೋ ಕಾಲ್ ಮೂಲಕ ಆನ್ ಲೈನ್ ಕ್ಲಾಸ್ ನಡೆಸುತ್ತಿದ್ದರು ಎನ್ನಲಾಗಿದೆ ಈ ವೇಳೆ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ದುಷ್ಕರ್ಮಿಗಳು ಶಿಕ್ಷಕನ ಕತ್ತು ಹಿಸುಕಿ ಕೊಲೆಗೈದಿದ್ದರೆ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಘಟನೆಯ ಎಲ್ಲಾ ದೃಶ್ಯಾವಳಿಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು ಘಟನೆ ನಡೆಯುತ್ತಲೇ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.
ಕೃಷ್ಣ ಯಾದವ್ ಗೊಂಡಾದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸಹೋದರಿಯ ಜೊತೆ ವಾಸ ಮಾಡಿಕೊಂಡಿದ್ದರು ಎನ್ನಲಾಗಿದೆ.
Related Articles
ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುದಿದ್ದು, ವಿಚಾರಣೆ ವೇಳೆ ಆರೋಪಿಗಳಲ್ಲಿ ಒಬ್ಬಾತ ತಾನು ಶಿಕ್ಷಕನ ತಂಗಿಯನ್ನು ಪ್ರೀತಿಸುತ್ತಿದ್ದು ಈ ವಿಚಾರದಲ್ಲಿ ಶಿಕ್ಷಕ ನನ್ನನ್ನು ನಿಂದಿಸಿದ್ದರು ಇದರಿಂದ ಕೋಪಗೊಂಡು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ಆರೋಪಿಗಳನ್ನು ಸಂದೀಪ್ ಯಾದವ್ ಮತ್ತು ಜವಾಹಿರ್ ಮಿಶ್ರಾ ಅಲಿಯಾಸ್ ಜಗ್ಗಾ ಎನ್ನಲಾಗಿದ್ದು ಪೊಲೀಸರ ವಶದಲ್ಲಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಗುಲ್ಮಾರ್ಗ್ನಲ್ಲಿ ಭಾರೀ ಹಿಮಪಾತ; ಇಬ್ಬರು ವಿದೇಶಿ ಪ್ರವಾಸಿಗರು ಮೃತ್ಯು