Advertisement

ಉ.ಪ್ರದೇಶದಲ್ಲಿ ಪೊಲೀಸ್ ಹವಾ: 2017ರಿಂದ 168 ಕ್ರಿಮಿನಲ್ ಗಳ ಎನ್ ಕೌಂಟರ್

11:29 AM Nov 23, 2022 | Team Udayavani |

ಲಕ್ನೋ: ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಎನ್ ಕೌಂಟರ್ ಮೂಲಕ 168 ಕ್ರಿಮಿನಲ್‌ ಗಳನ್ನು ಹೊಡೆದುರುಳಿಸಲಾಗಿದೆ. ಅವರಲ್ಲಿ ಹೆಚ್ಚಿನವರು ತಮ್ಮ ತಲೆಯ ಮೇಲೆ 75,000 ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಹೊಂದಿದ್ದರು ಎನ್ನಲಾಗಿದೆ.

Advertisement

2017 ರ ಮಾರ್ಚ್ 20ರಿಂದ 2022 ನವೆಂಬರ್ 20 ರವರೆಗೆ ಬಂಧಿಸಲಾದ ಒಟ್ಟು 22,234 ಕ್ರಿಮಿನಲ್‌ ಗಳಲ್ಲಿ 4,557 ಜನರನ್ನು ಎನ್‌ಕೌಂಟರ್‌ ಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಸಮಯದಲ್ಲಿ ಗುಂಡಿನ ಚಕಮಕಿಯಲ್ಲಿ 13 ಪೊಲೀಸ್ ಸಿಬ್ಬಂದಿಗಳು ಸಹ ಸಾವನ್ನಪ್ಪಿದ್ದು, 1,375 ಪೊಲೀಸರಿಗೆ ಬುಲೆಟ್ ಗಾಯಗಳಾಗಿವೆ ಎಂದು ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದರು.

ಇದನ್ನೂ ಓದಿ:ನಗರದಲ್ಲಿ ಹೊಸ ಬಸ್‌-ಬೇ ನಿರ್ಮಾಣ; ತಂಗುದಾಣವಿರುವಲ್ಲಿ ದಟ್ಟಣೆ ತಪ್ಪಿಸಲು ಕ್ರಮ

ಉತ್ತರ ಪ್ರದೇಶ ಪೊಲೀಸರು ಎಲ್ಲಾ ಎನ್ ಕೌಂಟರ್ ಗಳ ಸಮಯದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಿದ್ದಾರೆ. 2017ರಿಂದ ಇಲ್ಲಿಯವರೆಗೆ ಒಂದೇ ಒಂದು ನಿಯಮ ಉಲ್ಲಂಘನೆ ಪ್ರಕರಣ ನಡೆದಿಲ್ಲ ಎಂದು ಎಡಿಜಿ ಹೇಳಿದರು.

ಅಪರಾಧ, ಅಪರಾಧಿಗಳು, ಮಾಫಿಯಾದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ನಾವು ಅನುಸರಿಸುತ್ತಿದ್ದೇವೆ. ಕೇವಲ ಸ್ಪೆಷಲ್ ಟಾಸ್ಕ್ ಫೋರ್ಸ್ ಮಾತ್ರವಲ್ಲದೆ ಪೊಲೀಸ್ ಕಮಿಷನರೇಟ್, ಜಿಲ್ಲಾ ಪೊಲೀಸರು ಕೂಡಾ ಈ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ ಎಂದು ಎಡಿಜಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next